ಹಾಸನ ಆ.05(ಕರ್ನಾಟಕ ವಾರ್ತೆ): ನಾವು ಚುನಾವಣಾ ಪೂರ್ವ ದಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಸರ್ಕಾರ ಈಡೇರಿಸುತ್ತಿದೆ ಆ ಮೂಲಕ ನುಡಿದಂತೆ ನಡೆಯುತ್ತಿದೆ ಎಂದು ಸಹಕಾರ ಸಚಿವರು ಹಾಗು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ
ಜಿಲ್ಲಾಡಳಿತ, ಇಂಧನ ಇಲಾಖೆ ವತಿಯಿಂದ ನಗರದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿ, ಫಲಾನುಭವಿ ಗಳಿಗೆ ಶೂನ್ಯ ಬಿಲ್ ಹಸ್ತಾಂತರಿಸಿ ಮಾತನಾಡಿದ ಅವರು ನಮ್ಮ ಪಕ್ಷ ನೀಡಿದ್ದ ಎಲ್ಲಾ ಆಶ್ವಾಸನೆಗಳನ್ನು ನಾವು ಈಡೇರಿಸುತ್ತಾ ಬದ್ದತೆ ಪ್ರದರ್ಶನ ಮಾಡಿದ್ದೇವೆ ಎಂದರು.
ಜನರ ಹಸಿವು ನೀಗಲು ಹಿಂದೆಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದರು. ಅನೇಕ ಜನಪರ ಯೋಜನೆಗಳನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ ಗೃಹ ಲಕ್ಷಿ ,ಗೃಹ ಜ್ಯೋತಿ ,ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸಿ ಜನರ ಕಷ್ಟಕ್ಕೆ ಸ್ಪಂದನೆ ನೀಡಲಾಗುತ್ತಿದೆ ಎಂದರು.
200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ ಯೋಜನೆ ಸದ್ಬಳಕೆಯಾಗ ಬೇಕು ಆ ಮೂಲಕ ಜನರ ಮನೆ ಬೆಳಗಬೇಕು .ಮಕ್ಕಳ ಶಿಕ್ಷಣ ಕ್ಕೂ ಅನುಕೂಲವಾಗಬೇಕು ಎಂಬುದು ನಮ್ಮ ಸರ್ಕಾರದ ಆಶಯ ಎಂದು ಸಚಿವರು ತಿಳಿಸಿದರು.
ಯಾವುದೇ ಯೋಜನೆಗೆ ಹಣದ ಕೊರತೆಯಾಗದಂತೆ ಮುಖ್ಯಮಂತ್ರಿಯವರು ಅನುದಾನ ಮೀಸಲಿರಿಸಿದ್ದಾರೆ ಎಂದು ಸಚಿವರಾದ ಕೆ.ಎನ್ ರಾಜಣ್ಣ ಹೇಳಿದರು.
ಸರ್ಕಾರದ ಎಲ್ಲಾ ಯೋಜನೆಗಳು ಸದ್ಬಳಕೆಯಾದಾಗ ಮಾತ್ರ ಅದರ ನೈಜ ಯಶಸ್ಸು ಕಾಣುತ್ತದೆ ಹಾಗಾಗಿ ಎಲ್ಲಾ ಅಧಿಕಾರಿ ಸಿಬ್ಬಂದಿ ಹೆಚ್ಚಿನ ಶ್ರಮವಹಿಸಿ ಸೌಲಭ್ಯ ತಲುಪಿಸಿ ಎಂದರು ಸೂಚಿಸಿದರು.
ಶಾಸಕರಾದ ಕೆ.ಎಂ ಶಿವಲಿಂಗೇಗೌಡ ಅವರು ಮಾತನಾಡಿ ಇದೊಂದು ಐತಿಹಾಸಿಕ ದಿನ ,ಬಡವರು ಶೋಷಿತ ವರ್ಗದ ಏಳಿಗೆಗೆ ರೂಪಿಸಿರುವ ಮತ್ತೊಂದು ಭರವಸೆ ಕಾರ್ಯಕ್ರಮ ಗೃಹ ಜ್ಯೋತಿಗೆ ಚಾಲನೆ ದೊರೆತಿದೆ ಎಂದರು.
ರಾಜ್ಯದಲ್ಲಿ ಅನೇಕ ಮಂದಿ ಅಡಳಿತ ನಡೆಸಿದ್ದಾರೆ ಆದರೆ ಹಿಂದುಳಿದ ದೀನ ದಲಿತರ ಪರವಾಗಿ ಮಾಡಿದ ಕೆಲವೇ ನಾಯಕರಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು ಎಂದರು.
ಬಡವರ ಜೀವನೋಪಾಯಕ್ಕಾಗಿ ಆರ್ಥಿಕ ಶಕ್ತಿ ತುಂಬಲು ಐದು ಗ್ಯಾರಂಟಿ ಯೋಜನೆಯ ಆಶ್ವಾಸನೆ ನೀಡಿ ಕೇವಲ 3 ತಿಂಗಳಲ್ಲಿ ಈಡೇರಿಸಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ ಎಂದು ಶಾಸಕರಾದ ಕೆ.ಎ. ಶಿವಲಿಂಗೇಗೌಡರು ಹೇಳಿದರು.
ಸರ್ಕಾರದ ಅತ್ಯುತ್ತಮ ಯೋಜನೆಗಳ ಬಗ್ಗೆ ಅನಗತ್ಯ ಟೀಕೆ ಮಾಡಬೇಡಿ ,ಬಡ ದೀನದಲಿತರಿಗೆ ಆಗಿರುವ ಅನುಕೂಲ ಗಮನಿಸಿ ಎಂದು ಅವರು ತಿಳಿಸಿದರು.
ಶಾಸಕರಾದ ಹೆಚ್.ಪಿ ಸ್ವರೂಪ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಸರ್ಕಾರದ ಉತ್ತಮ ಕೆಲಸಗಳಿಗೆ ಪಕ್ಷಾತೀತವಾಗಿ ಅಭಿನಂದಿಸಬೇಕು ಎಂದರಲ್ಲದೆ, ಸರ್ಕಾರದ ಯೋಜನೆಗಳು ದುರುಪಯೋಗವಾಗಬಾರದು ಎಲ್ಲಾ ಅರ್ಹರಿಗೂ ಅನುಕೂಲ ತಲುಪವಂತೆ ನೋಡಕೊಳ್ಳಿ ಎಂದರು.
ಪ್ರಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾಧಿಕಾರಿ ಸತ್ಯಭಾಮ ಅವರು ಗೃಹ ಜ್ಯೋತಿ ಯೋಜನೆಯ ಆಶಯ, ಅನುಕೂಲಗಳನ್ನು ವಿವರಿಸಿದರು.
ಇಂದು ವಿದ್ಯುತ್ ಜನರ ಜೀವನದ ಅವಿಭಾಜ್ಯ ಅಂಗ ಹಾಗಾಗಿ ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯ ಗೃಹ ಜ್ಯೋತಿ ಯೋಜನೆ ಜಾರಿಗೆ ತಂದು ಉಚಿತವಾಗಿ ಒದಗಿಸುವ ಮೂಲಕ ಮನೆ ಮನಗಳನ್ನು ಬೆಳಗಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 5,42,128 ವಿದ್ಯುತ್ ಬಳಕೆದಾರರಿದ್ದು ಇದರಲ್ಲಿ 4,46,130 ಕುಟುಂಬ ಗೃಹ ಜ್ಯೋತಿ ಯೋಜನೆ ನೊಂದಾಯಿಸಿಕೊಂಡಿದ್ದಾರೆ. ಉಳಿದವರು ನೊಂದಣಿ ಮಾಡಿಕೊಂಡು ಯೋಜನೆ ಲಾಭ ಪಡೆಯುವಂತೆ ಕರೆ ನೀಡಿದರು.
ತುಮಕೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾದ ಶಾಂತಲಾ ರಾಜಣ್ಣ, ಹಾಸನ ನಗರ ಸಭೆ ಅಧ್ಯಕ್ಷರಾದ ಆರ್.ಮೋಹನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಹರಿರಾಂ ಶಂಕರ್, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಚೆಸ್ಕಾಂ ಕಾರ್ಯ ಮತ್ತು ಪಾಲನಾ ವಲಯದ ಮುಖ್ಯ ಇಂಜಿನಿಯರ್ ಕೆ.ಎಂ.ಮಹದೇವಸ್ವಾಮಿ, ಕಾರ್ಯ ಮತ್ತು ಪಾಲನಾ ವೃತ್ತದ ಅಧೀಕ್ಷಕ ಇಂಜಿನಿಯರ್ ಅನ್ನಪೂರ್ಣ ಎಸ್. ಮತ್ತಿತರರು ಉಪಸ್ಥಿತರಿದ್ದರು.