ಗ್ರಾನೈಟ್ ಉದ್ಯಮಿ ಕೃಷ್ಣಗೌಡರ ಕೊಲೆ ಪ್ರಕರಣ ಸಂಬಂಧ ಎಫ್.ಐ.ಆರ್ ದಾಖಲಾಗಿದ್ದು, ಯಾವುದೇ ಅನುಮಾನಾಸ್ಪದ ವ್ಯಕ್ತಿಗಳ ಮೇಲು ಕೇಸು ದಾಖಲಿಸದೆ ಕೃಷ್ಣಗೌಡರ ಸಹೋದರ ಎಫ್.ಐ.ಆರ್ ಮಾಡಿಸಿದ್ದಾರೆ., ಮುಖ್ಯ ರಸ್ತೆ ಬಳಿಯೇ ಗ್ರಾನೈಟ್ ಉದ್ಯಮಿ ಹಾಗೂ ಜೆಡಿಎಸ್ ಮುಖಂಡರಾದ ಕೃಷ್ಣ ಗೌಡರ ಹತ್ಯೆಯಾಗಿದ್ದು, ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಬುಧವಾರ ಮದ್ಯಾಹ್ನ ನಗರದ ಹೊರ ವಲಯ ಹೊಳೆನರಸೀಪುರ ರಸ್ತೆ, ಕೈಗಾರಿಕ ಪ್ರದೇಶದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯು ಮಾಜಿ ಸಚಿವ ಹೆಚ್.ಡಿ. ರೇವಣ್ಣನವರ ಆಪ್ತ ಹಾಗೂ ಗ್ರಾನೈಟ್ ಉದ್ಯಮಿ ಯಾಗಿದ್ದ ಕೃಷ್ಣಗೌಡ (55) ಎಂಬುವರಾಗಿದ್ದು, ಅವರದ್ದೇ ಮಾಲೀಕತ್ವದ ಶ್ರೀರಾಮ ಮಾರ್ಬಲ್ಸ್ ಗ್ರಾನೈಟ್ ಫ್ಯಾಕ್ಟರಿ ಎದುರೇ ಇನ್ನೋವಾ ಕಾ ರಿನಲ್ಲಿ ಬಂದ ನಾಲೈದು ಮಂದಿ ದುಷ್ಕರ್ಮಿಗಳು ಕೃಷ್ಣಗೌಡರ ಕಾರನ್ನು ಅಡ್ಡಗಟ್ಟಿ ಮಚ್ಚು ಬೀಸಿ ಕೊಲೆ ಮಾಡಿ ಕ್ಷಣಾರ್ಧದಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.ಹಂತಕರ ಮಚ್ಚಿನೇಟಿಗೆ ತೀವ್ರವಾಗಿ ರಕ್ತಸ್ರಾವವಾಗಿ ಸ್ಥಳದಲ್ಲಿ ಕೊನೆ ಉಸಿರು ಎಳೆದಿದ್ದಾರೆ
ಹಾಸನ ನಗರದ ಕುವೆಂಪು ನಗರ ಬಡಾವಣೆ ನಿವಾಸಿ ಕೃಷ್ಣಗೌಡರು ಅವರು ಪ್ರತಿನಿತ್ಯ ತಮ್ಮ ಫ್ಯಾಕ್ಟರಿಗೆ ಕಾ- ರಿನಲ್ಲಿ ತೆರಳುತ್ತಿದ್ದರು. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದ್ದು, ವಿಷಯ ತಿಳಿದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಶ್ವಾನದಳ, ಬೆರಳಚ್ಚುಗಾರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ವಿಚಾರ ತಿಳಿಯುತ್ತಿದ್ದಂತೆ ಜನಸ್ತೋಮ ನೆರೆದಿತ್ತು. ಕೊಲೆಯ ದೃಶ್ಯ ನೋಡಿ ಸಾರ್ವಜನಿಕರಲ್ಲಿ ಆತಂಕದ ಮನೆ ಮಾಡಿದೆ. ಇಂತಹ ಕೊಲೆಗಳು ಆಗಾಗ್ಗೆ ನಡೆಯುತ್ತಿದ್ದು, ಆರೋಪಿಗಳು ಬಂಧಿತರಾಗಿ ಜೈಲು ಸೇ- ರಿದ ಕೆಲ ದಿನಗಳಲ್ಲಿ ವಾಪಸ್ ಬಿಡುಗಡೆ ಆಗುತ್ತಿರುವುದೆ ಆತಂಕಕಾರಿ ವಿಷಯವಾಗಿದೆ .