ನೂತನ ಎಸ್ಪಿ ಮೊಹಮದ್ ಎಂ.ಎಸ್. ಸುಜೀತಾ ಮೊದಲ ಮಾತು
ಹಾಸನ: ಪೊಲೀಸ್ ಠಾಣೆಗೆ ಯಾರು ಬಂದರೂ ಸ್ಪಂದಿಸುವ ಕೆಲಸ ಮಾಡಬೇಕು. ಜನಸ್ನೇಹಿ ಪೊಲೀಸ್ ಠಾಣೆ ಮಾಡುವುದು ನಮ್ಮ ಮುಖ್ಯ ಗುರಿ ಎಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಎಂ.ಎಸ್. ಸುಜೀರಾ ತಮ್ಮ ಮೊದಲ ಮಾತಿನಲ್ಲಿ ಹೇಳಿದ್ದಾರೆ. ತಮ್ಮ ಕಛೇರಿಯಲ್ಲಿ ಮಾಧ್ಯಮದೊಂದಿಗೆ ಮನದಾಳದ ಮಾತನ್ನು ಹೇಳಿಕೊಂಡಿದ್ದು, ಈ ಹಿಂದೆ ಬೆಂಗಳೂರಿನಲ್ಲಿ ಉಪ ಪೊಲೀಸ್ ಆಯುಕ್ತರಾಗಿ ಸಂಚಾರ ಭಾಗದಲ್ಲಿ ಕೆಲಸ ಮಾಡಲಾಗಿದೆ. ಈಗ ಅಲ್ಲಿಂದ ವರ್ಗವಣೆಯಾಗಿ ಹಾಸನ ಜಿಲ್ಲೆಗೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಂದಿದ್ದೇವೆ.
ಈ ಹಿಂದೆ ಇದ್ದ ಎಸ್ಪಿ ಹರಿರಾಂ ಶಂಕರ್ ಅವರು ಒಳ್ಳೆಯ ಕೆಲಸವನ್ನು ಮಾಡಿದ್ದು, ಆ ಕೆಲಸವನ್ನೆ ಮುಂದುವರೆಸುತ್ತೇನೆ. ಮುಂದಿನ ದಿನಗಳಲ್ಲಿ ನಮ್ಮ ಗುರಿ ಎಂದರೇ ಜನಸ್ನೇಹಿ ಪೊಲೀಸ್ ಇಲಾಖೆ ಮಾಡುವುದಾಗಿದೆ. ಯಾರು ಪೊಲೀಸ್ ಠಾಣೆಗೆ ಬರುತ್ತಾರೆ ಸರಿಯಾಗಿ ಸ್ಪಂದಿಸಿ ಅವರ ಸಮಸ್ಯೆ, ಕಷ್ಟ ಸುಖವನ್ನು ಆಲಿಸಿ ವಿಚಾರಣೆ ಮಾಡಿ ಯಾವ ರೀತಿಯಲ್ಲಿ ಲೀಗಲ್ ಸಹಾಯ ಮಾಡಬಹುದು ಅಂತವರಿಗೆ ನೂರರಷ್ಟು ಸಹಕಾರ ಕೊಡಬೇಕು ಎಂದರು.
ಈಗಾಗಲೇ ನಮ್ಮ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ಕೂಡ ಮಾಡಲಾಗಿದ್ದು, ನನಗೆ ಭರವಸೆ ಇದ್ದು, ಉತ್ತಮ ಕೆಲಸವನ್ನು ಮುಂದುವರೆಸಲಿದ್ದಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಮುಖ್ಯವಾಗಿ ಮಹಿಳಾ ಮತ್ತು ಮಕ್ಕಳ ರಕ್ಷಣೆ ಮಾಡುವುದು ನಮ್ಮ ಮುಂದೆ ಇದ್ದು, ಹಿಂದಿನ ಎಸ್ಪಿ ಈ ಬಗ್ಗೆ ಬಹಳಷ್ಟು ಕಾಳಜಿವಹಿಸಿ ಹೆಚ್ಚಿನ ಕೆಲಸ ಮಾಡಿದ್ದು, ಅದನ್ನು ಮುಂದುವರೆಸಲಾಗುವುದು. ಆದಷ್ಟು ಟ್ರಾಫೀಕ್ ಸುಧಾರಣೆ ಮಾಡುವಲ್ಲಿ ಮುಂದಾಗುತ್ತೇವೆ.
ಯಾರಿಗಾದರೂ ಕಷ್ಟವಿದ್ದರೇ ಪೊಲೀಸ್ ಠಾಣೆಯಾಗಿರಲಿಮ ಡಿವೈಎಸ್ಪಿ ಆಗಿರಲಿ, ನಮ್ಮ ಕಛೇರಿ ಆಗಿರಲಿ ಬರಬಹುದು. ನಾವಿರುವುದೇ ನಿಮ್ಮ ಕಷ್ಟ ಸುಖ ಕೇಳುವುದಕ್ಕೆ. ಪೊಲೀಸ್ ಠಾಣೆಯಲ್ಲಿ ಏನಾದರೂ ಲೋಪ ದೋಷ ಕಂಡು ಬಂದರೇ ನಮಗೆ ಮಾಹಿತಿ ಕೊಡಿ. ಯಾವುದೇ ರೀತಿ ಇಲಿಗಲ್ ಆಕ್ಟಿವಿಟಿಗೆ ನಾವು ಪ್ರೋತ್ಸಹ ಕೊಡುವುದಿಲ್ಲ. ರೌಡಿಜಂ ನಿಯಂತ್ರಿಸುವುದು ಪ್ರಮುಖ ಕೆಲಸ ಎಂದು ಹೇಳಿದರು.