ಬೆಂಗಳೂರು: ಸರ್ಜಾ ಕುಟುಂಬಕ್ಕೆ ಇಂದು ಜೂನಿಯರ್ ಚಿರು ಎಂಟ್ರಿ ಕೊಟ್ಟಿದ್ದಾನೆ. ಇಂದು ಬೆಳಗ್ಗೆ 11:07ಕ್ಕೆ ಮೇಘನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಚಿರು ಹುಟ್ಟುಹಬ್ಬದ ದಿನದಂದು ಮೇಘನಾಗೆ 9 ತಿಂಗಳು ತುಂಬಿತ್ತು. ಇಂದು ಮೇಘನಾ ಹಾಗೂ ಚಿರಂಜೀವಿ ಸರ್ಜಾ ಎಂಗೇಜ್ಮೆಂಟ್ ಆಗಿದ್ದ ದಿನ. 2017ರ ಅಕ್ಟೋಬರ್ 22ರಂದು ಚಿರು ಮೇಘನಾ ನಿಶ್ಚಿತಾರ್ಥ ನಡೆದಿತ್ತು. ಇಂದೇ ಕುಟುಂಬಕ್ಕೆ ಮಗುವಿನ ಆಗಮನವಾಗಿರೋದು ಸರ್ಜಾ ಕುಟುಂಬದಲ್ಲಿ ಸಂತಸ ಇಮ್ಮಡಿಗೊಳಿಸಿದೆ.
ಹೆರಿಗೆಗಾಗಿ ಮೇಘನಾ ರಾಜ್ ನಿನ್ನೆ ಕೆ.ಆರ್ ರಸ್ತೆಯಲ್ಲಿರುವ ಅಕ್ಷ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಮೇಘನಾ ತಾಯಿ ಪ್ರಮಿಳಾ ಜೋಷಾಯಿ, ತಂದೆ ಸುಂದರ್ ರಾಜ್ ಸೇರಿದಂತೆ ಕುಟುಂಬಸ್ಥರು ಹಾಗೂ ಸ್ನೇಹಿತರು ಆಸ್ಪತ್ರೆಯಲ್ಲಿ ತಾಯಿ ಮಗುವಿನ ಜೊತೆಗಿದ್ದಾರೆ.