ಹಾಸನ / ಆಲೂರು : ಗ್ರಾಮದಲ್ಲಿರುವ ಶ್ರೀ ಬನಶಂಕರಿ ದೇವಿಯ ಜಾತ್ರಾ ಮಹೋತ್ರದ ಪ್ರಯುಕ್ತ ಬಂದೋಬಸ್ತ್ ಕರ್ತವ್ಯಕ್ಕೆಂದು ಆಲೂರು ಠಾಣೆಯ ಮಹಮದ್, ಶೇಖರ್, ವಸಂತ್ಕುಮಾರ್, ವಿಜಯಕುಮಾರ್ ಹಾಗೂ ರಾಕೇಶ್ ಎಂಬುವವರನ್ನು ನೇಮಿಸಲಾಗಿದೆ ., ಶನಿವಾರ ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ದೇವಾಸ್ಥಾನದ ಎಡಭಾಗದಲ್ಲಿ ಪಟಾಕಿಯನ್ನು ಹೊಡೆಯುವ ವಿಚಾರವಾಗಿ ಈ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾದಾಗಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳು ಜಗಳವನ್ನು ಬಿಡಿಸಲು ಹೋದ ಸಂದರ್ಭದಲ್ಲಿ ಕೆರಲೂರು ಗ್ರಾಮದ ಸಂತೋಷ್ ಹಾಗೂ ಆತನ ತಮ್ಮ ಸಂಪತ್ತು ಮತ್ತು ಬೊಮ್ಮನ ಮನೆ ಗ್ರಾಮದ ಪಾಲಾಕ್ಷ ಸೇರಿದಂತೆ ಇತರರು ಪೊಲೀಸರೆನ್ನದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಂತೋಷ್ ಎಂಬುವವನು ವಿಜಯಕುಮಾರ್ ಎಂಬ ಸಿಬ್ಬಂದಿಯ ಸಮವಸ್ತ್ರವನ್ನು ಹಿಡಿದು ಹರಿದುಹಾಕಿ ಕಲ್ಲಿನಿಂದ ತಲೆಗೆ ಹೊಡಿದು ರಕ್ತಗಾಯಮಾಡಿರುತ್ತಾನೆ ?? ಎನ್ನಲಾಗಿದೆ ., ಅದನ್ನು ಬಿಡಿಸಲು ಮುಂದಾಗ ಇತರೆ ಸಿಬ್ಬಂದಿಗಳ ಮೈ,ಕೈಗೆ ಹೊಡೆದು ಗಾಯಗೊಳಿಸಿದ್ದಾರೆ !! ಸದ್ಯ ವಿಜಯಕುಮಾರ್ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ,
• ಈ ಪ್ರಕರಣದಲ್ಲಿ ಮೂರು ಜನರ ಮೇಲೆ ಪ್ರಕರಣವನ್ನು ದಾಖಲಾಗಿದೆ , ಸಂತೋಷ್ ಎಂಬಾತನ್ನು ಬಂಧಿಸಲಾಗಿದೆ ಉಳಿದ ಇಬ್ಬರ ಪತ್ತೆಗಾಗಿ ಕಾರ್ಯಚರಣೆ ನಡೆಸಲಾಗುತ್ತಿದೆ -ಆಲೂರು ಪೊಲೀಸ್ ಠಾಣೆ , ಆಲೂರು ತಾಲೂಕು , ಹಾಸನ ಜಿಲ್ಲೆ
#crimedairyhassan #alur