ಬೈಕನ್ನು ಗುದ್ದಿದಲ್ಲದೆ ನೂರು ಮೀಟರ್ ಎಳೆದೊಯ್ದ ಘಟನೆ : ಬೈಕ್ ಸವಾರನ ಕೈ ಮುರಿತ ( ಮತ್ತೊಂದು ಅಪಘಾತ ವರದಿ ಹಾಸನ )

0

ಬೈಕನ್ನು ಗುದ್ದಿದಲ್ಲದೆ ನೂರು ಮೀಟರ್ ಎಳೆದೊಯ್ದ ಘಟನೆ : ಬೈಕ್ ಸವಾರನ ಕೈ ಮುರಿತ ( ಮತ್ತೊಂದು ಅಪಘಾತ ವರದಿ ಹಾಸನ )

ಹಾಸನ/ಚನ್ನರಾಯಪಟ್ಟಣ : ದಿನಾಂಕ 9 ಜುಲೈ 2022 ಶನಿವಾರ ಸಂಜೆ ಸುಮಾರು 4.45ರ ಹೊತ್ತಿಗೆ , ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಬರಗೂರು ಬಳಿ ( Bangalore to Hassan NH-75
Bargur hand post chanarayapatna) ಸ್ಥಳೀಯರ ಪ್ರಕಾರ ಬೊಲೆರೊ ವಾಹನ ಚಾಲಕ ಕುಡಿದ ಮತ್ತಿನಲ್ಲಿ ಮಳೆಯ ನಡುವೆ ಪಲ್ಸರ್ ಬೈಕಿಗೆ ಹಿಂಬದಿಯಿಂದ ಗುದ್ದು ,

ಬೊಲೆರೊ ಚಾಲಕನ ನಿಯಂತ್ರಣಕ್ಕೆ ಸಿಗದೆ ಇನ್ನು ನೂರು ಮೀ. ದೂರ ಎಳೆದೊಯ್ದ ಘಟನೆ ನಡೆದಿದೆ . ಈ ರಸ್ತೆ ಅಪಘಾತದಲ್ಲಿ ಮುದ್ದನಹಳ್ಳಿ ಗ್ರಾಮದ ಯುವಕನ ಕೈ ಮೂಳೆ ಮುರಿದಿದೆ ಎನ್ನಲಾಗಿದೆ . (ಆಂಬುಲೆನ್ಸ್ ನಲ್ಲಿ ಯುವಕನನ್ನು ಆಸ್ಪತ್ರೆ ಗೆ ಕರೆದೊಯ್ಯಲಾಗಿದೆ )

ಘಟನೆ ಬಗ್ಗೆ ಸ್ಥಳೀಯ ಪೊಲೀಸ್ ತನಿಖೆ ನಂತರವಷ್ಟೇ ಇನ್ನಷ್ಟು ಮಾಹಿತಿ ನಿರೀಕ್ಷಿಸಬಹುದಾಗಿದೆ.

LEAVE A REPLY

Please enter your comment!
Please enter your name here