ಹಾಸನದ MCE ಕಾಲೇಜಿನ 4ವಿದ್ಯಾರ್ಥಿಗಳು ಹೋಗುತ್ತಿದ್ದ ಕಾರು ಅಪಘಾತ : ಇಬ್ಬರ ಸಾವು ಇನ್ನಿಬ್ಬರ ಸ್ಥಿತಿ ಚಿಂತಾಜನಕ

0

ಹಾಸನದಿಂದ ಮೈಸೂರಿಗೆ ಹೋಗುತ್ತಿದ್ದ ಹಾಸನದ ಮಲೆನಾಡು ಎಂಜಿನಿಯ ರಿಂಗ್‌ ಕಾಲೇಜಿನ ವಿದ್ಯಾರ್ಥಿ ಗಳಾದ ಕೋಲಾರದ ಮೌಳೀಶ್ವರ ರೆಡ್ಡಿ (21) ಹಾಗೂ ಅರಸೀಕೆರೆಯ ತೇಜಸ್‌ (20) ಭದ್ರಾವತಿಯ ಸುಹಾನ್‌ ಹಾಗೂ ಬೆಂಗಳೂರಿನ ಶುಭಾಂಕರ್ ಮೊನ್ನೆ ರಾತ್ರಿ 12.20ರ ಸುಮಾರಿಗೆ ಮೈಸೂರಿನಿಂದ ಹಾಸನದ ಕಡೆ ಬರುತ್ತಿದ್ದ ಕ್ಯಾಂಟರ್‌

ಮೈಸೂರು– ಹಾಸನ ರಸ್ತೆಯ ಹೊಸರಾಮನಹಳ್ಳಿ ಬಳಿ ಮಂಗಳವಾರ ರಾತ್ರಿ ವಿದ್ಯಾರ್ಥಿಗಳು ಇದ್ದ ಕಾರಿಗೆ ಕ್ಯಾಂಟರ್‌ ಡಿಕ್ಕಿ ಹೊಡೆದು ವಿದ್ಯಾರ್ಥಿ ಮೌಳೀಶ್ವರ ರೆಡ್ಡಿ ಸ್ಥಳದಲ್ಲೇ ಮೃತಪಟ್ಟರೆ.

DRM ಆಸ್ಪತ್ರೆಗೆ ಬರುವ ವೇಳೆಗೆ ತೇಜಸ್‌ ಅಸುನೀಗಿದ್ದಾರೆ , ಭದ್ರಾವತಿಯ ಸುಹಾನ್‌ ಹಾಗೂ ಹಾಸನದ ಶುಭಾಂಕರ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಮೈಸೂರಿನ  DRM ಆಸ್ಪತ್ರೆಗೆ ದಾಖಲಿಸಲಾಗಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ‌.

ಕ್ಯಾಂಟರ್‌ ಚಾಲಕ ಪರಾರಿಯಾಗಿದ್ದು, ಆತನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮೈಸೂರು‌ ಜಿಲ್ಲೆಯ ಬಿಳಿಕೆರೆ ಠಾಣೆ ಶಿವಮಂಜು(ASI) ತಿಳಿಸಿದ್ದಾರೆ

LEAVE A REPLY

Please enter your comment!
Please enter your name here