ಪತ್ನಿಗೆ ಕಿಡ್ನಿ ವೈಫಲ್ಯ : ಚಿಕಿತ್ಸೆಗೆ ಮೈಸೂರಿಗೆ ಹೋಗುವ ಹೊಳೆನರಸೀಪುರ ರಸ್ತೆ‌ ಮಧ್ಯೆ ಅಪಘಾತ

0

ಹಾಸನ : ಚಿಕ್ಕಮಗಳೂರಿನ ನಿವಾಸಿ ಮಹೇಶ್ವರಪ್ಪ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಪತ್ನಿ ಪಾರ್ವತಮ್ಮ ಅವರನ್ನು  ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ತೆರಳುತ್ತಿದ್ದಾಗ ಹೊಳೆನರಸೀಪುರ ಪಟ್ಟಣದ ಹೇಮಾವತಿ ಸೇತುವೆ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗಾಗಿ ತೆಗೆದ ಗುಂಡಿಗೆ ಬುಧವಾರ ಮುಂಜಾನೆ ಕಾರು ಬಿದ್ದು ವೃದ್ಧ ದಂಪತಿ ಗಾಯಗೊಂಡ ಘಟನೆ ನಡೆದಿದೆ ., ಈ ಕಾಮಗಾರಿ ಆರಂಭಗೊಂಡು ವರ್ಷವಾದರೂ ವಾಹನ ಚಾಲಕರಿಗೆ ಅಗತ್ಯ ಸೂಚನಾ ಫಲಕ ಇಲ್ಲದೆ ಚಾಲಕರು ಗೊಂದಲದಲ್ಲೇ ಪಕ್ಕದ ರಸ್ತೆ ದಾಟುವಂತಾಗಿದೆ ., ಅಪಘಾತಕ್ಕೆ ಯಾರು ಹೊಣೆಗಾರು ಸಂತ್ರಸ್ತ ದಂಪತಿಗಳು ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗುವವರು ಮತ್ತೊಂದು ಚಿಕಿತ್ಸೆಗೆ ಒಳಗಾಗುವಂತಾಗಿದೆ ಇವರಿಗೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಲ್ಲದೆ , ವಾಹನ ಚಾಲಕರಿಗೆ ಸೂಚನಾ ಫಲಕ, ಕೆಂಪು ದೀಪ ಅಳವಡಿಸಿ ಗುತ್ತಿಗೆದಾರರು ಕಾಮಗಾರಿಯ ನಿಯಮಗಳನ್ನು ಪಾಲಿಸಬೇಕು ಎಂದು ಒತ್ತಾಯಿಸಿದರು

LEAVE A REPLY

Please enter your comment!
Please enter your name here