ಹಾಸನ/ಸಕಲೇಶಪುರ : (ಹಾಸನ್_ನ್ಯೂಸ್) !, ಈ ಸಾಲಿನ ಕಳೆದ ಆಗಸ್ಟ್‌ನಲ್ಲಿ ಸುರಿದ ಭಾರಿ ಗಾಳಿ ಸಹಿತ ಮಳೆಗೆ ಮಾದೇವಮ್ಮ ಎಂಬ 78ವರ್ಷದ ವೃದ್ಧೇ ಯ ನೂರು ವರ್ಷದ ಹಳೇಯ ಮನೆಯ ಒಂದು ಭಾಗದ ಗೋಡೆ ಬಿರುಕುಗೊಂಡು ಕುಸಿದುಬಿಟ್ಟಿತ್ತು ., ಯಾವುದೇ ಕ್ಷಣ ಮನೆ ಬೀಳೋ ಹಾಗಿತ್ತು. ಮೊದಲೇ ತೋಟದ ಕೆಲಸಮಾಡಿ ಜೀವನ ಸಾಗಿಸುತ್ತಿದ್ದ ಈ ಅಜ್ಜಿ ಒರ್ವ ಬುದಿಮಾಂದ್ಯ ಮಗುವನ್ನು ಸಾಕುತ್ತಿದ್ದಳು , ಮಳೆ ಅತೀವೃಷ್ಠಿ ಬಗ್ಗೆ ವಿಷಯ ಸಂಗ್ರಹದಲ್ಲಿದ್ದ ಹೆಬ್ಬಸಾಲೆ ಗ್ರಾಮ ಪಂಚಾಯಿತಿ ಉತ್ಸುಕ ಸರ್ಕಾರಿ ಅಭಿವೃದ್ಧಿ ಅಧಿಕಾರಿ ವತ್ಸಲಾ ಕುಮಾರಿ(PDO), ಈ ಅಜ್ಜಿಗೆ ಆಸರೆ ಯಾರು ಇಲ್ಲ ., ಇವರಲ್ಲಿ ತನ್ಬ ತಾಯಿಯ ವಾತ್ಸಲ್ಯ ಕಂಡ ಅಧಿಕಾರಿ ವತ್ಸಲಾ., ಈ ಅಜ್ಜಿಯ ಇರುವಿಕೆಗೆ ಸರ್ಕಾರದ ಯೋಜನೆಯಡಿ ಮನೆ ಕಟ್ಟಿಕೊಟ್ಟು ನೆರವಾಗಬೇಕೆಂದು ಅದಾಗಲೇ ಗೋಡೆ ಕುಸಿತದ ಛಾಯಾಚಿತ್ರಗಳನ್ನು ತೆಗೆದು 5 ಲಕ್ಷ₹ ಮಳೆಹಾನಿ ಪರಿಹಾರ ಮಂಜೂರು ಮಾಡಿಸುವಲ್ಲಿ ಯಶಸ್ಸು ಗಳಿಸಿದರು ., PDO ಅಜ್ಜಿಗಾಗಿ ಖುದ್ದು ನಿಂತು, ಇದೇ ಗ್ರಾಮದ ಕಂಟ್ರಾಕ್ಟರ್ ಹನೀಫ್ ಸಹಯೋಗದಿ ಮನೆಯನ್ನೂ ಕಟ್ಟಿಸಿ ಅಜ್ಜಿಗೆ ನೆರವಾಗಿ ., ಮಾದರಿ ಸರ್ಕಾರಿ ಅಧಿಕಾರಿ ಎನಿಸಿಕೊಂಡಿದ್ದಾರೆ ., ಹಾಸನ ಜನತೆಯ ಪರವಾಗಿ PDO ವತ್ಸಲ ಅವರಿಗೆ ಕೃತಜ್ಞತೆ ಗಳು
°ಅದೇನೋ ಸಾಮಾನ್ಯ ನಾಲ್ಕು ಗೋಡೆ ಎದ್ದ ಇರಬಹುದು ಅನಿಸಿರಬಹುದು ನಿಮಗೆ ., ಮನೆಯಲ್ಲಿ ಮಲಗುವ ರೂಮ್ , ಜೊತೆ ನಾಲ್ಕು ಕೊಠಡಿ , ಕಿಚನ್ , ಪ್ರತ್ಯೇಕ ಶೌಚಾಲಯ , ಸ್ನಾನದ ಕೊಠಡಿ ವ್ಯವಸ್ಥೆ ಇದೆ. ವಿದ್ಯುತ್ ಸಂಪರ್ಕವನ್ನೂ ನೀಡಲಾಗಿದೆ
°ಇಷ್ಟೆಲ್ಲ ಕೆಲಸ ಮಾಡಿದಕ್ಕೆ ಅಹಂ ಇಲ್ಲದೆ PDO ಏನಂದ್ರು ಗೊತ್ತಾ ?? ,
” ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸ ಬೇಕು ನಮ್ಮ ಕೆಲಸ. ಇದರಲ್ಲಿ ನಮ್ಮನ್ನು ನಾವೇ ಬೆನ್ನು ತಟ್ಟಿಕೊಳ್ಳುವುದು ಸರಿಯಲ್ಲ. ವತ್ಸಲಾ ಕುಮಾರಿ, ಪಿಡಿಒ