ಆಪರೇಷನ್ ಗಂಗಾ , ಮರಳಿ ತಾಯಿ ತಾಯಿ ನಾಡಿನ‌ ಮಡಿಲ ಸೇರಿದ ಉಕ್ರೇನ್ ನಲ್ಲಿದ್ದ ಹಾಸನದ ಗಗನ್

0

ಉಕ್ರೇನ್ ಯುದ್ಧ ಭೂಮಿಯಿಂದ ಕ್ಷೇಮವಾಗಿ ಗಗನ್ ಗೌಡ ತವರಿಗೆ ವಾಪಸ್

ಹಾಸನ: ಶಿಕ್ಷಣಕ್ಕೆಂದು ಉಕ್ರೇನ್ ದೇಶಕ್ಕೆ ಹೋಗಿ ಯುದ್ಧಭೂಮಿಯಲ್ಲಿ ಸಿಲುಕಿದ್ದ ಗಗನ್ ಗೌಡ ಅವರು ಈಗ ಕ್ಷೆಮವಾಗಿ ತವರಿಗೆ ವಾಪಸ್ ಬಂದಿದ್ದು, ಮನೆಯಲ್ಲಿ ಸಂತಸದ ವಾತವರಣ ನಿರ್ಮಾಣವಾಗಿದೆ.

​ ​ ​ ​ ಹಾಸನ ನಗರದ ಬಿ. ಕಾಟೀಹಳ್ಳಿಯ ಕೇಶವಮೂರ್ತಿ ಮತ್ತು ಸುಜಾತ ಎಂಬುವರ ಮಗನಾದ ಗಗನ್ ಗೌಡ ಎಂಬುವನೇ ಉಕ್ರೇನ್ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಹೋಗಿ ಯುದ್ಧ ಭೂಮಿಯಲ್ಲಿ ಸಿಲುಕಿಕೊಂಡು ಹತ್ತು ದಿನಗಳ ಕಾಲ ತೊಂದರೆಗೆ ಸಿಕ್ಕಿಕೊಂಡವರು. ಹೊಟ್ಟೆಗೆ ಊಟವಿಲ್ಲದೆ ನೀರು ಕುಡಿದುಕೊಂಡೆ ೪೦ ಕಿ.ಮಿ. ದೂರ ಯುದ್ಧಭೂಮಿಯಲ್ಲಿ ನಡೆದಿದ್ದಾನೆ. ಭಯದಲ್ಲಿದ್ದು, ನಾನು ಸಾಯುವ ಸ್ಥಿತಿಯಲ್ಲಿದ್ದೇನೆ ಎಂದು ನನ್ನ ಮಗ ನೋವು ತೋಡಿಕೊಳ್ಳುತ್ತಿದ್ದಾನೆ. ನನ್ನ ಮಗನಿಗೆ ಊಟ, ರಕ್ಷಣೆ ಕೊಡಿಸುವಂತೆ ಜಿಲ್ಲಾಧಿಕಾರಿಗಳ ಬಳಿ ಪೋಷಕರು ಕೋರಿದ್ದರು. ಈ ವೇಳೆ ಪೋಷಕರು ಡಿಸಿ ಬಳಿ ಮನವಿ ಮಾಡಿದ ನಂತರ ಹೊರ ಬಂದಾಗ ಗಗನ್ ಗೌಡನ ತಾಯಿ ಸುಜಾತ ಎಂಬುವರು ಆತಂಕದಲ್ಲಿ ದುಃಖ ತಡೆಯಲಾರದೆ ನಿಂತಲ್ಲೆ ಕೆಳಗೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದರು. ಆದರೇ ಈಗ ಪುತ್ರನು ಕ್ಷೇಮವಾಗಿ ಮನೆಗೆ ಬಂದಿರುವುದರಿಂದ ನೆಮ್ಮದಿಯ ನಿಟ್ಟೂಸಿರು ಬಿಟ್ಟಿದ್ದಾರೆ. ತಾಯಿ ಸುಜಾತ ಮಗನಿಗೆ ಸಿಹಿ ತಿನಿಸಿ ಕೆಲ ಸಮಯ ಸಂತೋಷದ ಕಣ್ಣೀರು ಹಾಕಿದರು. ಉಕ್ರೇನ್ ಯುದ್ಧ ಭೂಮಿಯಲ್ಲಿ ನಡೆದ ಘಟನೆ ಬಗ್ಗೆ ಗಗನ್ ಗೌಡ ಇದೆ ವೇಳೆ ಹಂಚಿಕೊಂಡರು.

LEAVE A REPLY

Please enter your comment!
Please enter your name here