Live @ 3.30PM
ಭೀಕರ ರಸ್ತೆ ಅಪಘಾತ ! ಒರ್ವನ ಸ್ಥಳದಲ್ಲೇ ಸಾವು , ಸಾರಿಗೆ ಬಸ್ – ಒಮಿನಿ ನಡುವೆ ನಡೆದ ಅಪಘಾತದಲ್ಲಿ ಒಮಿನಿ ಕಾರ್ ಚಾಲಕ ಅರೆಕೆರೆ ಕುಣಿಗಲ್ ನ ಚಂದ್ರಶೇಖರ್ ಸ್ಥಳದಲ್ಲೇ ಮೃತಪಟ್ಟರೇ ತನ್ನ ಹೆಂಡತಿಗೆ ತೀವ್ರ ಪೆಟ್ಟು ಬಿದ್ದಿದ್ದು ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕಳುಹಿಸಿ ಕೊಡಲಾಗಿತ್ತು ., ಸಾಗುವ ದಾರಿ ಮದ್ಯೆ ಅವರು ಕೂಡ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ ಘಟನೆ : ಕುಂದಾಪುರ ದಿಂದ ಹಾಸನ ಮೂಲಕ ಬೆಂಗಳೂರಿಗೆ ಸಾಗಬೇಕಿದ್ದ ಕೆಎಸ್ ಆರ್ ಟಿಸಿ ಬಸ್
ಸಕಲೇಶಪುರ ತಾಲ್ಲೂಕಿನ ಬಾಳೆಗದ್ದೆ ಸಮೀಪ ಅಪಘಾತಕ್ಕೆ ಒಳಗಾಗಿದ್ದು . ಬಸ್ ನಲ್ಲಿದ್ದ ಪ್ರಯಾಣಿಕರ ಬದಲಿ ಬಸ್ ಮೂಲಕ ಕಳುಹಿಸಿಕೊಡಲಾಗಿದೆ ಎಂದು ಸ್ಥಳೀಯರು ತಿಳಿಸಿರುತ್ತಾರೆ .
ಪ್ರಕರಣ ದಾಖಲಾಗಿದ್ದು ತಪ್ಪು ಯಾರದ್ದು ತನಿಖೆ ನಂತರ ತಿಳಿಯ ಬೇಕಿದೆ .