ಉರುಳಿ ಬಿದ್ದ ಶಾಲಾ ಬಸ್‍: ಮಕ್ಕಳು

0

ಹಾಸನ: ಶಾಲೆಗೆ ಕರೆದೊಯ್ಯುತ್ತಿದ್ದ ಶಾಲಾ ಬಸ್ ರಸ್ತೆ ಬದಿಗೆ ಉರುಳಿಬಿದ್ದ ಘಟನೆ ಹಾಸನ ಸಮೀಪದ ಉಗನೆ ಬಳಿ ನಡೆದಿದೆ.
ಎದುರಿನಿಂದ ಬರುತ್ತಿದ್ದ ವಾಹನಕ್ಕೆ ದಾರಿ ನೀಡಲು ರಸ್ತೆಯ ಬದಿ ಮಣ್ಣಿನ ರಸ್ತೆಗೆ ಶಾಲಾ ಬಸ್‍ ಇಳಿದಾಗ ಮಣ್ಣು ಕುಸಿದು ಈ ಘಟನೆ ಸಂಭವಿಸಿದೆ. ಬಸ್ನತಲ್ಲಿ 25 ಮಕ್ಕಳಿದ್ದು, ಶನಿವಾರದ ಬೆಳಗ್ಗೆ ತರಗತಿಗೆ ದೇವಗೌಡನಹಳ್ಳಿಯ ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಡಶಾಲೆಗೆ ಮಕ್ಕಳನ್ನು ಕರೆದೊಯ್ಯುವಾಗ ಬಸ್ ಉರುಳಿಬಿದ್ದು ಅವಘಡ
ಸಂಭವಿಸಿದ್ದು,

ಅದೃಷ್ಟವಶಾತ್‍ ಯಾರಿಗೂ ಏನೂ ಆಗಿಲ್ಲ.
ರಸ್ತೆಯನ್ನು ಹೊಸದಾಗಿ ನಿರ್ಮಿಸುತ್ತಿದ್ದು, ರಸ್ತೆಯ ಎರಡೂ ಬದಿಗೆ ಮಣ್ಣು ಹಾಕಿ ಸಮತಟ್ಟುಗೊಳಿಸಬೇಕಿತ್ತು. ಆದರೆ ಕಳಪೆ ಕಾಮಗಾರಿಯಿಂದಾಗಿ ಬಸ್‍ ಭಾರಕ್ಕೆ ಮಣ್ಣು ಕುಸಿದಿದೆ. ಹಾಗಾಗಿ ಉರುಳಿಬಿದ್ದಿದೆ.  ಕೊಂಚ ಯಡವಟ್ಟಾಗಿದ್ದರೂ ಸಮೀಪದ ಕೆರೆಗೆ ಬಸ್ ಉರುಳಿಬಿದ್ದು, ಭಾರಿ ಅನಾಹುತವಾಗುತ್ತಿತ್ತು.
ಕೂಡಲೆ ರಸ್ತೆ ದುರವಸ್ಥೆ ಸರಿಪಡಿಸಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. #accidentnewshassan

LEAVE A REPLY

Please enter your comment!
Please enter your name here