ಚಿಕ್ಕಮಗಳೂರು ಬಿಳಿಕೆರೆ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ , ಬೇಲೂರಿಗೆ ಬರುತ್ತಿದ್ದ ಇಂಡಿಕಾ , ಹಾಸನಕ್ಕೆ ಬರುತ್ತಿದ್ದ ಫಾರ್ಚುನರ್ ನುಜ್ಜುಗುಜ್ಜು

0

ಹಾಸನದಿಂದ ಬೇಲೂರಿಗೆ ಬರುತ್ತಿದ್ದ ಇಂಡಿಕಾ ಕಾರು ಹಾಗೂ ಬೇಲೂರು ಕಡೆಯಿಂದ ಹಾಸನಕ್ಕೆ ಬರುತ್ತಿದ್ದ ಫಾರ್ಚುನರ್ ಕಾರುಗಳ ಮಧ್ಯೆ ಡಿಕ್ಕಿ ಸಂಭವಿಸಿ , ಇಂಡಿಕಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ , ಎಂಜಿನ್ ಕಳಚಿ ಕಾರಿನಿಂದ ಬೇರ್ಪಟ್ಟಿದೆ. ಬಲಿಷ್ಠ ಫಾರ್ಚುನರ್ ಕಾರು ಸಹ

ಜಖಂಗೊಂಡಿದೆ. ಫಾರ್ಚುನರ್ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು . ಈ ಕಾರುಗಳ ಅಪಘಾತ ಸಂಭವಿಸಿದ್ದರಿಂದ

ಬಿಳಿಕೆರೆ-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನಗಳ ಓಡಾಟಕ್ಕೆ ನಿನ್ನೆ ಜೂನ್ 28 ಬುಧವಾರ ತೊಡಕಾಗಿತ್ತು . ಹಳೇಬೀಡು ಪೊಲೀಸರು

ಸ್ಥಳಕ್ಕೆ ಭೇಟಿ ನೀಡಿ, ಸಂಚಾರ ವ್ಯವಸ್ಥೆ ಸರಿಪಡಿಸಿದರು , ಈ ಘಟನೆ ಬೇಲೂರು ತಾಲ್ಲೂಕಿನ ಹಳೇಬೀಡು ಹೋಬಳಿಯ ಮಲ್ಲಿಕಾರ್ಜುನಪುರ ಗ್ರಾಮದ ಬಳಿ ಬುಧವಾರ ಮಧ್ಯಾಹ್ನ ಕಾರುಗಳು

ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿರುತ್ತಾರೆ

LEAVE A REPLY

Please enter your comment!
Please enter your name here