ಹಾಸನ ಜಿಲ್ಲೆ ದೊಡ್ಡಕುಂಚೆ ಗ್ರಾಮದ ಡಾ. ಪ್ರಸನ್ನ ಡಿ. ಶಿವರಾಮು ಅವರಿಗೆ ಪ್ರತಿಷ್ಠಿತ SERB ಇಂಟರ್ನ್ಯಾಷನಲ್ ರಿಸರ್ಚ್ ಎಕ್ಸ್ಪೀರಿಯೆನ್ಸ್ ಫೆಲೋಶಿಪ್
ಭಾರತ ಸರ್ಕಾರದ ವಿಜ್ಞಾನ ಹಾಗು ತಂತ್ರಜ್ಜಾನ ಇಲಾಖೆಯು ನೀಡುವ ಪ್ರತಿಷ್ಠಿತ SERB ಇಂಟರ್ನ್ಯಾಷನಲ್ ರಿಸರ್ಚ್ ಎಕ್ಸ್ಪೀರಿಯೆನ್ಸ್ (SIRE) ಫೆಲೋಶಿಪ್ ಗೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕು ದೊಡ್ಡಕುಂಚೆ ಗ್ರಾಮದ ಡಾ. ಪ್ರಸನ್ನ ಡಿ. ಶಿವರಾಮು ಅವರು ಆಯ್ಕೆಯಾಗಿದ್ದಾರೆ.
SIRE ಫೆಲೋಶಿಪ್ ಎಂಬುದು ಆಸಕ್ತ ಯುವ ಸಂಶೋಧಕರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಉನ್ನತ ಮಟ್ಟದ ಸಂಶೋಧನಾ ತರಬೇತಿಗಾಗಿ ಜಗತ್ತಿನಾದ್ಯಂತದ ಪ್ರಮುಖ ಸಂಸ್ಥೆಗಳೊಂದಿಗೆ ಸಹಕರಿಸಲು ಒಂದು ಅವಕಾಶವಾಗಿದೆ.
ಡಾ. ಪ್ರಸನ್ನ ಡಿ. ಶಿವರಾಮು ರವರು ಪ್ರಪಂಚದ ಅಗ್ರ ಶ್ರೇಯಾಂಕದ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಪುರ್, ಸಿಂಗಪುರ್ ನಲ್ಲಿ ಆರು ತಿಂಗಳ ಅವಧಿಗೆ ಕ್ಯಾನ್ಸರ್ ಸಂಶೋಧನೆಯ ಕುರಿತು ತರಬೇತಿ ಪಡೆದು ಸಂಶೋಧನಾ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ..
ಪ್ರಸ್ತುತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮುದ್ದೇನಹಳ್ಳಿ ಕ್ಯಾಂಪಸ್ ನ ಅಪ್ಲೈಡ್ ಸೈನ್ಸಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಪ್ರಸನ್ನ ಡಿ. ಶಿವರಾಮು ರವರು 85 ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಮೂರು ಅನುದಾನಿತ ಸಂಶೋಧನಾ ಯೋಜನೆಗಳನ್ನು ಪೂರ್ಣಗೊಳಿಸಿ
ಹಲವು ಪ್ರಶಸ್ತಿಗಳನ್ನು ಪಡೆದಿರುವ ಡಾ. ಪ್ರಸನ್ನ ಡಿ. ಶಿವರಾಮು ರವರ ಮಾರ್ಗದಶನದಲ್ಲಿ ಐದು ವಿದ್ಯಾರ್ಥಿಗಳು ಕೆಮಿಸ್ಟ್ರಿ / ನ್ಯಾನೊಟೆಕ್ನಾಲಾಜಿ ವಿಷಯದಲ್ಲಿ ಪಿ. ಹೆಚ್ ಡಿ. ಪದವಿ ಪಡೆದಿದ್ದಾರೆ.
ಪ್ರತಿಷ್ಠಿತ SIRE ಫೆಲೋಶಿಪ್ ಗೆ ಆಯ್ಕೆಯಾಗಿರುವ ಡಾ. ಪ್ರಸನ್ನ ಡಿ. ಶಿವರಾಮು ರವರಿಗೆ ಕುಟುಂಬದ ಸದಸ್ಯರು ಹಾಗು ಸ್ನೇಹಿತರು ಶುಭ ಹಾರೈಸಿದ್ದಾರೆ.