ಸಿಇಟಿ ಫಲಿತಾಂಶದಲ್ಲಿ ಎಪಿಜೆ ಅಕಾಡೆಮಿ ಜಿಲ್ಲೆಗೆ ಪ್ರಥಮ ಸ್ಥಾನ ನಿರ್ದೇಶಕ ಡಿ. ಮುರುಳಿ

0

ಹಾಸನ: ಶೈಕ್ಷಣಿಕ ವರ್ಷದಲ್ಲಿ ಬಂದ ಸಿಇಟಿ ಪರೀಕ್ಷೆ ಫಲಿತಾಂಶದಲ್ಲಿ ಕೆ.ಆರ್. ಪುರಂ, ಸಂಪಿಗೆ ರಸ್ತೆಯಲ್ಲಿರುವ ಎಪಿಜೆ ಅಕಾಡೆಮಿ ಜಿಲ್ಲೆಗೆ ಮೇಲುಗೈ ಸಾಧಿಸಿದೆ ಎಂದು ಅಕಾಡೆಮಿಯ ನಿರ್ದೇಶಕರಾದ ಡಿ. ಮುರುಳಿ ತಿಳಿಸಿದರು.​ ​ ​ ​ ​

ಪತ್ರಿಕಾಗೋಷ್ಠಿಯಲ್ಲಿ ಬುಧವಾರದಂದು ಮಾತನಾಡಿ, ಕೊರೋನಾ ಆವರಿಸಿ ಸಂಕಷ್ಟ ಇರುವ ವೇಳೆ ಸಿಇಟಿ ಪಲಿತಾಂಶದಲ್ಲಿ ಪ್ರಥಮ ಸ್ಥಾನವನ್ನುಗಳಿಸಿದೆ. ನಮ್ಮ ಸಂಸ್ಥೆಯು ಸತತ ಮೂರು ವರ್ಷಗಳಿಂದ ವಿವಿಧ ವೃತ್ತಿಪರ ಕೋರ್ಸ್ಗಳಿಗೆ ಸಂಬಂಧಿಸಿದಂತೆ ನುರಿತ ಉಪನ್ಯಾಸಕರನ್ನು ಒಳಗೊಂಡ ಬೋಧನ ಸಿಬ್ಬಂದಿಗಳೊಂದಿಗೆ

ಶಿಕ್ಷಣ ನೀಡುತ್ತಾ ಬಂದಿದೆ. ಇತ್ತೀಚೆಗೆ ನಡೆದ ಸಿ.ಇ.ಟಿ ಪರೀಕ್ಷಾ ಫಲಿತಾಂಶದಲ್ಲಿ ತಮ್ಮ ಸಂಸ್ಥೆ ಪ್ರಥಮ ಸ್ಥಾನ ಪಡೆದಿದ್ದು, ಪರೀಕ್ಷೆ ಬರೆದ ಒಟ್ಟು ೧ ಲಕ್ಷ ೯೩ ಸಾವಿರ ವಿದ್ಯಾರ್ಥಿಗಳಲ್ಲಿ ತಮ್ಮ ಸಂಸ್ಥೆಯ ಪ್ರಗತಿ ಎಂಬ ವಿದ್ಯಾರ್ಥಿನಿ ಅಗ್ರಿಕಲ್ಚರಲ್ ಬಿಎಸ್ಸಿ ವಿಭಾಗದಲ್ಲಿ ೩೭ ನೇ ರ್ಯಾಂಕ್ ಪಡೆದರೇ ಅದೇ ರೀತಿ ಅಭಿನ್ ಎಂಬ ಇನ್ನೊಬ್ಬ ವಿದ್ಯಾರ್ಥಿ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯ ಮಟ್ಟದ ೧೬೯ನೇ ರ್ಯಾಂಕ್ ಪಡೆಯುವ ಮೂಲಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದು ಕೀರ್ತಿ ತಂದಿದ್ದಾರೆ ಎಂದರು. ಇತರೆ ನಾಲ್ಕು ವಿದ್ಯಾರ್ಥಿಗಳು ಕೂಡ ಸಾವಿರ ರ್ಯಾಂಕ್ ಒಳಗೆ ಸ್ಥಾನ ಪಡೆದುಕೊಂಡಿದ್ದು, ಸಂಸ್ಥೆಯಲ್ಲಿ ಉತ್ತಮ ಬೋಧನ ವ್ಯವಸ್ಥೆ ಹಾಗೂ ಮೂಲಭೂತ

ಸೌಕರ್ಯಗಳನ್ನು ಒಳಗೊಂಡಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರಿದರು. ನಮ್ಮ ಸಂಸ್ಥೆಯೂ ಉತ್ತಮ ಪ್ರಗತಿಯತ್ತ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಸತತವಾಗಿ ಪ್ರಯತ್ನಿಸುತ್ತಿದೆ ಎಂದರು.

​ ​ ​ ​ ​ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥಾಪಕರಾದ ಡಿ. ಮುರುಳಿ. ಪ್ರೊ ಜುಲಿಕರ್, ವಿದ್ಯಾರ್ಥಿಗಳಾದ ಪ್ರಗತಿ,ಅಭಿನ್

ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here