ಹಾಸನ / ಗೋವಾ : (ಹಾಸನ್_ನ್ಯೂಸ್ !, ಸ್ನೇಹಿತರೊಂದಿಗೆ ತೆರಳಿದ್ದ ಯುವಕನೊಬ್ಬ ಗೋವಾ ಬೀಚ್ ನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಸಮುದ್ರದ ಅಲೆಗಳೊಂದಿಗೆ ಆಡುತ್ತಾ ಆಡುತ್ತಾ ಅಪಾಯದ ಸೂಚನೆ ಇದ್ದ ಸ್ಥಳಕ್ಕೆ ಮುನ್ನಡೆದಿದ್ದ ಯುವಕರನ್ನು ಅಲ್ಲಿಯ ಸೆಕ್ಯುರಿಟಿ ಗಲಾಟೆ ಮಾಡಿ, ಸಮುದ್ರ ದಡಕ್ಕೆ ಕರೆತಂದಿದ್ದಾನೆ. ಸಂಭ್ರಮದಲ್ಲಿದ್ದ ಯುವಕರಿಗೆ ತಮ್ಮ ಜೊತೆಯಲ್ಲಿದ್ದ ಮತ್ತೊಬ್ಬ ಸ್ನೇಹಿತನ ಗೈರು ಕಂಡುಬಂದಿಲ್ಲ. ಸ್ವಲ್ಪ ಸಮಯದಲ್ಲಿ ಮತ್ತೊಬ್ಬ ಸ್ನೇಹಿತ ಬಿ.ಎನ್.ಸುನಿಲ್ (26) ನೆನಪಿಗೆ ಬಂದು ಸೆಕ್ಯುರಿಟಿ ಗಮನಕ್ಕೆ ತಂದು ಹುಡುಕಾಟ ನಡೆಸಿದ್ದಾರೆ. ಆದರೆ ಪ್ರಯೋಜನವಾಗಿಲ್ಲ.
ಸೋಮವಾರ ಸಂಜೆ 4.30ರ ವೇಳೆಗೆ ಸಮುದ್ರಕ್ಕಿಳಿದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಸಮುದ್ರದ ಸುಮಾರು 2 ಕಿ.ಮೀ ದೂರದಲ್ಲಿ ತೇಲುತ್ತಿದ್ದ ಶವವನ್ನು ಬಲಪಡೆ ಪೊಲೀಸರು ಪತ್ತೆಹಚ್ಚಿ ಸ್ಥಳೀಯ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.ನಂತರದ ಕಾನೂನಾತ್ಮಕ ಪ್ರಕ್ರಿಯೆಯ ನಂತರ ವಿಷಯ ತಿಳಿದು ಅಲ್ಲಿಗೆ ಧಾವಿಸಿದ್ದ ಕುಟುಂಬಸ್ಥರ ವಶಕ್ಕೆ ಒಪ್ಪಿಸಿದ್ದಾರೆ. ಮೃತ ಯುವಕ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಬೆಳವಾಡಿ ಗ್ರಾಮದವನು.
ಬುಧವಾರ ಸಂಜೆ ಸುಮಾರು 6ರಿಂದ 7 ಗಂಟೆಯ ವೇಳೆಗೆ ಶವ ಸ್ವಗ್ರಾಮ ಬೆಳವಾಡಿಗೆ ತರುವ ನಿರೀಕ್ಷೆ ಇದೆ,