ಕಣಕಟ್ಟೆ ಹೋಬಳಿ ಕಲ್ಲುಸಾದರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಕೆ.ಎಂ.ಶಿವಲಿಂಗೇಗೌಡ ತಾಲ್ಲೂಕು ಪಂಚಾಯತಿ ಈ.ಓ ನಟರಾಜು, ತಾಲ್ಲೂಕು ಆರೋಗ್ಯಾಧಿಕಾರಿ ನಾಗೇಶ್ ಅವರುಗಳೊಂದಿಗೆ ಭೇಟಿ ನೀಡಿ ಕೋವಿಡ್ ಚಿಕಿತ್ಸೆ, ಔಷಧದ ದಾಸ್ತಾನು, ಆಸ್ಪತ್ರೆ ಸ್ಥಿತಿ ಗತಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಸರ್ಕಾರದ ಹೋಮ್ ಐಸೋಲೇಷನ್ ನೀತಿಯಿಂದಾಗಿ ಕೋರೊನಾ ಹೆಚ್ಚಾಗಿದೆ, ಈಗ ನಮ್ಮೆಲ್ಲರ ಒತ್ತಾಯದ ಮೇಲೆ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲಾಗಿದೆ… ಎಲ್ಲ ಸೋಂಕಿತರು ಇನ್ನು ಮುಂದೆ ತಪ್ಪದೆ ಮನೆಯಲ್ಲಿರದೆ ಕೇರ್ ಸೆಂಟರ್ ಗೆ ದಾಖಲಾಗಿ ಎಂದರು…ಎಲ್ಲಾ ಹೋಬಳಿ ಮಟ್ಟದ ವಸತಿ ಶಾಲೆಗಳನ್ನು ಕೋವಿಡ್ ಕೇರ್ ಸೆಂಟರ್ ಗಳಾಗಿ ಮಾರ್ಪಡಿಸಿದ್ದು ಅಲ್ಲಿ ಸೋಂಕಿತರಿಗೆ ಉಚಿತ ವಸತಿ, ಊಟ , ಚಿಕಿತ್ಸೆ ದೊರೆಯಲಿದೆ.. ಇದರ ಸದುಪಯೋಗ ಪಡೆದುಕೊಳ್ಳಿ ಎಂದರು…ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಕೊರತೆ ಇದ್ದು ಮುಂದಿನ ದಿನಗಳಲ್ಲಿ ಸರಿ ಹೋಗಲಿದೆ…ಇದರ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ ಎಂದರು..
ಈ ಸಂದರ್ಭದಲ್ಲಿ ಎ.ಪ.ಎಂ.ಸಿ ಮತ್ತು ತಾ.ಪಂ ಮಾಜಿ ಅಧ್ಯಕ್ಷ ಚಂದ್ರಶೇಖರ, ಸ್ಥಳೀಯ ಮುಖಂಡರುಗಳಾದ ಗೊಲ್ಲರಹಳ್ಳಿ ಹನುಮಪ್ಪ, ಕಲ್ಗುಂಡಿ ಜಟ್ಟಪ್ಪ, ಬೋವಿಕಾಲೋನಿ ಪದ್ಮನಾಭ, ಶ್ರೀನಿವಾಸ, ಗೊಲ್ಲರಹಟ್ಟಿ ಶಿವಣ್ಣ, ವೈಧ್ಯಾಧಿಕಾರಿ ರವೀಶ್ ಹಾಜರಿದ್ದರು ದ್ದರು.
Home Hassan Taluks Arsikere ಕೋವಿಡ್ ಚಿಕಿತ್ಸೆ, ಔಷಧದ ದಾಸ್ತಾನು, ಆಸ್ಪತ್ರೆ ಸ್ಥಿತಿ ಗತಿ ಪರಿಶೀಲನೆ – ಕೆ.ಎಂ.ಶಿವಲಿಂಗೇಗೌಡ(ಅರಸೀಕೆರೆ ಶಾಸಕ)