ಶಾಸಕ ಶಿವಲಿಂಗೇಗೌಡರಿಂದ ಕೊರೊನಾ ಸೋಂಕಿನ ಬಗ್ಗೆ ಸಾರ್ವಜನಿಕ ರಿಗೆ ಜಾಗೃತಿ

0

ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ತಾಲ್ಲೂಕು ಪಂಚಾಯತ ಈ.ಓ ನಟರಾಜು ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ನಾಗಪ್ಪ ಅವರೊಂದಿಗೆ ಇಂದು ಕಸಬಾ ಹೋಬಳಿ ತಳಲುತೊರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕೊರೊನಾ ಸೋಂಕಿನ ಬಗ್ಗೆ ಸಾರ್ವಜನಿಕ ರಿಗೆ ಜಾಗೃತಿ ಮೂಡಿಸಿದರು.
ಕೋವಿಡ್ ಮಹಾಮಾರಿ ಗ್ರಾಮೀಣ ಭಾಗದಲ್ಲಿ ವೇಗವಾಗಿ ಹರಡುತ್ತಿದೆ. ಇದಕ್ಕೆ ಸಾರ್ವಜನಿಕರ ಅಜಾಗರೂಕತೆ ಮತ್ತು ಹೋಮ್ ಐಸೋಲೇಷನ್ ಕಾರಣವಾಗಿದೆ.
ಆದ್ದರಿಂದ ಸಾರ್ವಜನಿಕ ರು ಜಾಗರೂಕರಾಗಬೇಕು, ಕಡ್ಡಾಯವಾಗಿ ಸೋಂಕಿತರು ಕೇರ್ ಸೆಂಟರ್ ಗಳಿಗೆ ದಾಖಲಾಗುವಂತೆ ನೋಡಿಕೊಳ್ಖಿ, ಎಲ್ಲಾ 5 ವಸತಿಶಾಲೆಗಳನ್ನು ಕೋವಿಡ್ ಕೇರ್ ಸೆಂಟರ್ ಗಳನ್ನಾಗಿ ಮಾಡಿದ್ದು ಅಲ್ಲಿಗೆ ಹೋಗಲು ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಮಾಡಲಾಗಿದೆ. ಇವುಗಳ ಸದುಪಯೋಗ ಮಾಡಿಕೊಳ್ಳಿ ಎಂದರು.
ವ್ಯಾಕ್ಸಿನ್ ಅನ್ನು ಎಲ್ಲರೂ ಕಡ್ಡಾಯವಾಗಿ ತೆಗೆದುಕೊಳ್ಳಿ ಎಂದರು. ಆದರೆ ಸದ್ಯಕ್ಕೆ ವ್ಯಾಕ್ಸಿನ್ ಸರಬರಾಜು ಆಗುತ್ತಿಲ್ಲ.ಸರ್ಕಾರ ಕೂಡಲೇ ಇದರ ಬಗ್ಗೆ ಗಮನ ಹರಿಸಿಬೇಕೆಂದರು…ಅಲ್ಲಿಯವರಗೆ ಕಡ್ಡಾಯ ಮಾಸ್ಕ್, ದೈಹಿಕ ಅಂತರ, ಸ್ಯಾನಿಟೈಸರ್ ಬಳಕೆಯಿಂದ ಕೊರೋನಾ ಬರದಂತೆ ತಡೆಯಲು ಸಾದ್ಯ ಎಂದರು….
ಈ ಸಂದರ್ಭದಲ್ಲಿ ವೈಧ್ಯಾಧಿಕಾರಿ ಷರಣಪ್ಪ, ತಳಲೂರು ಗ್ರಾ.ಪಂ.ಅಧ್ಯಕ್ಷೆ ಯಮುನಾ ಹರೀಶ, ಹಬ್ಬನಘಟ್ಟ ಗ್ರಾ.ಪಂ.ಅಧ್ಯಕ್ಷೆ ಸವಿತಾ ಬಸವರಾಜು, ಸದಸ್ಯರಾದ ಕೋಡಿಹಳ್ಳಿ ರಘು, ಉಪಾಧ್ಯಕ್ಷ ಅರುಣ್, ಬಸವರಾಜು ಕಾಂತರಾಜು, ಪಕ್ಷಿ, ರೋಹಿತ್ , ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾದ ಮನೋಹರ್, ಕುಮಾರಸ್ವಾಮಿ ಆಶಾ ಕಾರ್ಯಕರ್ತೆ ಯರು. ಹಾಗೂ ಗ್ರಾಮಸ್ಥರು ಹಾಜರಿದ್ದರು….

LEAVE A REPLY

Please enter your comment!
Please enter your name here