ಮೊದಲ 1.5 ಕಿ.ಮೀ. ಗೆ 30 ರೂ. ಹಾಗೂ ನಂತರದ ಪ್ರತಿ ಕಿ.ಮೀ. ಗೆ 15 ರೂ ನಿಗದಿ

0

ಹಾಸನ: ನಗರದಲ್ಲಿ ಆಟೋ ಸಂಚಾರ ವ್ಯವಸ್ಥೆ ಸುಧಾರಣೆಗೆ ಹಾಗೂ ಪ್ರಯಾಣ ದರ ಪರಿಷ್ಕರಣೆಗೆ ಅಗತ್ಯ ಕ್ರಮ ವಹಿಸಲಾಗಿದ್ದು ಅದನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಅರ್ಚನಾ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಸೂಚನೆ , ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಆಟೋ ಚಾಲಕರು, ಮಾಲೀಕರ ಮನವಿ ಕುರಿತು ಚರ್ಚೆ ನಡೆಸಿದ ಅವರು, ಆಟೋ ಪ್ರಯಾಣ ದರ ಪರಿಷ್ಕರಣಾ ನಿರ್ಧಾರ , ಹಾಸನ ನಗರ ವ್ಯಾಪ್ತಿಯ ಆಟೋರಿಕ್ಷಾ ವಾಹನಗಳ ಪ್ರಯಾಣಿಕ ಸಾಗಾಟ ಪ್ರಾರಂಭಿಕ ದರವನ್ನು

1.5 ಕಿ.ಮೀ ಗೆ 40 ರೂ. ಮತ್ತು ಹೆಚ್ಚುವರಿ ಒಂದು ಕಿ.ಮೀ 20 ರೂ. ನಿಗಧಿಪಡಿಸುವಂತೆ ಆಟೋ ಚಾಲಕರು ಮತ್ತು ಮಾಲಿಕರ ಸಂಘ ಮನವಿ ಸಲ್ಲಿಸಿತ್ತು. , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾತನಾಡಿ, ರಾಜ್ಯದಲ್ಲೇ ಬೆಂಗಳೂರಿನಲ್ಲಿ ಹೆಚ್ಚಿನ ದರ ನಿಗಧಿಪಡಿಸಿದೆ ಇದನ್ನೇ ಜಿಲ್ಲೆಗೆ ಅನ್ವಯ ಮಾಡಬಹುದಾಗಿದೆ. ಮೊದಲ 1.5 ಕಿ.ಮೀ. ಗೆ 30 ರೂ. ಹಾಗೂ ನಂತರದ ಪ್ರತಿ ಕಿ.ಮೀ. ಗೆ 15 ರೂ ನಿಗಧಿಪಡಿಸಬಹುದಾಗಿದೆ ಎಂದರು. ಜಿಲ್ಲಾಧಿಕಾರಿ ಇದಕ್ಕೆ ಸಮ್ಮತಿ ನೀಡಿದರು. ಇದೇ ವೇಳೆ ಮೀಟರ್ ಕ್ಯಾಲಿಬ್ರೇಷನ್

ಸರಿಪಡಿಸಿ ಮೀಟರ್ ಅಳವಡಿಸಿ ಆಟೋ ಓಡಿಸಿ ಎಂದು ಎಸ್.ಪಿ ಸೂಚನೆ ನೀಡಿದರು. , ಆಟೋ ಚಾಲಕರು, ಮಾಲೀಕರು ನ್ಯಾಯ ಸಮ್ಮತದರ ಪಡೆಯಬೇಕು. ರಾತ್ರಿ ವೇಳೆ ಬಾರೀ ದುಬಾರಿ ಹಣ ಪಡೆಯುತ್ತಿದ್ದು ಅದನ್ನ ಸರಿಪಡಿಸಿಕೊಳ್ಳಿ ಎಂದು ಎಸ್.ಪಿ ಸೂಚಿಸಿದರು. , ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶದಂತೆ ಕೆಎಸ್‌ಆರ್‌ಟಿಸಿ ಮತ್ತು ಎಲ್ಲಾ ಖಾಸಗಿ ಪ್ರಯಾಣಿಕ ಸಾರಿಗೆ ವಾಹನಗಳಲ್ಲಿರುವ ನಿರ್ವಾಹಕರು, ಪ್ರಯಾಣಿಕರು ಪ್ರಯಾಣಿಸುವ ಸಮಯದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಸಂಗ್ರಹಿಸಿ, ವಿಲೇವಾರಿ ಮಾಡಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು, ಬಸ್ಸುಗಳಲ್ಲಿ ಚೂಯಿಂಗ್ ಗಮ್ ಹಾಗೂ

ತಂಬಾಕು ಉಗುಳುವುದನ್ನು ತಡೆಯುವುದು ಹಾಗೂ ಇತರ ತ್ಯಾಜ್ಯಗಳ ಸಮರ್ಪಕ ನಿರ್ವಹಣೆಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. , ಬಾಗೇಶಪುರ ಮತ್ತು ದುದ್ದ ತಲುಪಲು ರಂಗಾಪುರ ಕಾವಲು ಮಾರ್ಗವಾಗಿ ಹಾಗೂ ಜಾವಗಲ್ ತಲುಪಲು ಬಸ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಕೈ ಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳಿ ಮಾಹಿತಿ ಕೇಳಿದರು. , ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚು ಸಂಚರಿಸುವ ಅವಧಿಯಲ್ಲಿ ಹೆಚ್ಚಿನ ಬಸ್ ಗಳು ಲಭ್ಯವಾಗುವಂತೆ ಹಾಗೂ ಗ್ರಾಮೀಣ ಪ್ರದೇಶಕ್ಕೂ ಬಸ್ ಗಳ ಸಂಪರ್ಕ ದೊರೆಯುವಂತೆ ಮಾಡುವಂತೆ ಅರ್ಚನಾ ಅವರು ಸೂಚನೆ ನೀಡಿದರು. , ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೇರಿ ನಗರದಲ್ಲಿ ಹಲವೆಡೆ ಅನಗತ್ಯವಾಗಿ ಬಸ್ ನಿಲುಗಡೆ ಮಾಡುತ್ತಿದ್ದು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ನೀಡಿದರು. , ಬಳಕೆದಾರರ ಸಂಘದ ಅಧ್ಯಕ್ಷರಾದ

ರಂಗೇಗೌಡ ಉಪಾಧ್ಯಕ್ಷ ಬೊರೇಗೌಡ ಅವರು ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣದಲ್ಲಿ ಪ್ರಿಪೇಯ್ಡ್ ಆಟೋ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.  ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಲ್ಲೆಶ್, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಭಗವಾನ್ ದಾಸ್, ಕೆ.ಎಸ್.ಆರ್.ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್, ವಾರ್ತಾ ಇಲಾಖೆ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here