ಸಕಲೇಶಪುರ – ಹಾಸನ ನಡುವಿನ ರಸ್ತೆ ಕಾಮಗಾರಿ ವಿಳಂಬ : ಗುತ್ತಿಗೆದಾರರಿಗೆ ದಂಡ ವಿಧಿಸಿ DC ಆದೇಶ

0

ಹಾಸನ ದಿಂದ ಸಕಲೇಶಪುರಕ್ಕೆ ಸಂಪರ್ಕ ಕಲ್ಪಿಸುವ NH75 ರಸ್ತೆ ಕೆಲಸ ಇನ್ನಾದರೂ ಚುರುಕಾಗಬೇಕು. ಹೆದ್ದಾರಿ ಕಾಮಗಾರಿ ಚುರುಕುಗೊಳಿಸಲು ಪ್ರತ್ಯೇಕ ತಂಡ ನಿಯೋಜಿಸಿ , ಸಕಲೇಶಪುರ – ಹಾಸನ ನಡುವಿನ ರಸ್ತೆ ಕಾಮಗಾರಿ ಗುರಿ ಸಾಧನೆ ವಿಳಂಬವಾಗುತ್ತಿರುವುದರಿಂದ ಗುತ್ತಿಗೆದಾರರಿಗೆ ನೋಟಿಸ್ ಜಾರಿಗೊಳಿಸಿ, ದಂಡ ವಿಧಿಸಿ. ಆದಷ್ಟು ಬೇಗ ಕಾಮಗಾರಿ ನಡೆಸಿ’ ಎಂದು ಆದೇಶಿಸಿ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅನಿಲ್ ಕುಮಾರ್ ಖಡಕ್ ಸೂಚನೆ

ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಕಲೇಶಪುರ – ಹಾಸನ ನಡುವಿನ ರಾಷ್ಟ್ರೀಯ ಹೆದ್ದಾರಿ 75ರ ರಸ್ತೆ ಅಭಿವೃದ್ಧಿ ಕಾಮಗಾರಿ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಲವು ಸಲಹೆ

” ಸಕಲೇಶಪುರದಿಂದ ಮಾರನಹಳ್ಳಿವರೆಗೂ ರಸ್ತೆ ಹದಗೆಟ್ಟಿದ್ದು, ಅದನ್ನು ಸಹ ನಿರ್ವಹಣೆ ಮಾಡಬೇಕು. ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಗೆ ಮಣ್ಣಿನ ಅಗತ್ಯ ಇರುವುದು ತಿಳಿದು ಬಂದಿದೆ. ಇದನ್ನು ಮಾರ್ಗಮಧ್ಯೆ ಲಭ್ಯವಿರುವ ಕೆರೆ ಹಾಗೂ ಇತರೆ ಸರ್ಕಾರಿ ಭೂ ಜಾಗಗಳನ್ನು ಗುರುತಿಸಿ ಅರ್ಜಿ ಸಲ್ಲಿಸಿದರೆ ಅನುಮತಿ ನೀಡಲಾಗುವುದು. ಈಗಾಗಲೇ ಸಾಕಷ್ಟು ಕಾಲಾವಕಾಶ ನೀಡಲಾಗಿದ್ದು, ಆದಷ್ಟು ಬೇಗ ಕೆಲಸ ಮುಗಿಸಬೇಕು. ಜತೆಗೆ ಸಕಲೇಶಪುರ ಪಟ್ಟಣದ ಮಾರ್ಗದಲ್ಲಿ ಹೇಮಾವತಿ ನದಿಗೆ ಕಟ್ಟಲಾಗಿರುವ ಸೇತುವೆ ದುರಸ್ತಿಪಡಿಸಿ ” -ಆರ್ ಗಿರೀಶ್ ( ಹಾಸನ ಜಿಲ್ಲಾಧಿಕಾರಿ )

ಒಂದು ಕಡೆಯಿಂದ ಕಾಮಗಾರಿ ಪೂರ್ಣ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿ. ಮೂರು ತಿಂಗಳ ನಂತರ ಮಳೆಗಾಲ ಆರಂಭವಾಗುವುದು, ಅಷ್ಟರೊಳಗೆ ಗರಿಷ್ಠ ಪ್ರಮಾಣದ ಕೆಲಸ ಮುಗಿಸ

” ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದ್ದು, ಜೂನ್ ಅಂತ್ಯದೊಳಗೆ ಸಕಲೇಶಪುರದವರೆಗೆ 2 ಪಥ ರಸ್ತೆ ಪೂರ್ಣಗೊಳಿಸಲಾಗುವುದು ” -ಜಾನ್ ಜಾಬ್ (ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕ )

ಇನ್ನಾದರೂ ಬಹು ನಿರೀಕ್ಷೆಯ ಬೆಂಗಳೂರು NH75 ರ ಹಾಸನ – ಸಕಲೇಶಪುರ ರಸ್ತೆ ಕಾಮಗಾರಿ ಪೂರ್ಣಗೊಳ್ಳುತ್ತದೆಯೋ ಕಾದು ನೋಡಬೇಕು

LEAVE A REPLY

Please enter your comment!
Please enter your name here