ಶಿರಾಡಿ ಘಾಟಿಯ ಸೌಂದರ್ಯ ಸವಿಯಲು ಬೆಂಗಳೂರು-ಮಂಗಳೂರು ರೈಲಿಗೆ ಗಾಜಿನ ಚಾವಣಿ

0

” ಮಂಗಳೂರು-ಬೆಂಗಳೂರು ಮದ್ಯೆ ಚಲಿಸುವ ರೈಲಿಗೆ
ಸದ್ಯದಲ್ಲೇ ವಿಸ್ಟಾಡೋಮ್‌ (ಗಾಜಿನ ಚಾವಣಿ) ಅಳವಡಿಸಲಾಗುವುದು  ” -ಪಿ.ಸಿ ಮೋಹನ್‌(ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಸಂಸದ)  (ಟ್ವೀಟ್‌)

•ಪ್ರಾಕೃತಿಕ ಸೌಂದರ್ಯದ ನಡುವೆ ಹಾದು ಹೋಗುವ ಬೆಂಗಳೂರು-ಮಂಗಳೂರು ರೈಲಿನ ಬೋಗಿಗೆ ಗಾಜಿನ ಚಾವಣಿ ಅಳವಡಿಸಿದರೆ , 

ಪಶ್ಚಿಮ ಘಟ್ಟವನ್ನು ಪಸರಿಸಿಕೊಂಡು ಹೋಗುವ ಈ ರಮಣೀಯ ಮಾರ್ಗದಲ್ಲಿ ಸಂಚರಿಸುವವರಿಗೆ ಶಿರಾಡಿ ಘಾಟಿಯ ಸೌಂದರರ್ಯವನ್ನು ರೈಲಿನೊಳಗೆ ಕುಳಿತು ಆಹಗಲಾದಿಸುವ ಭಾಗ್ಯ ಸಿಗಲಿದೆ.


ಈ ಬೋಗಿ ಆಳವಡಿಸಿದ್ದೇ ಆದಲ್ಲಿ, ಸಕಲೇಶಪುರ ಹಾಗೂ ಸುಬ್ರಹ್ಮಣ್ಯ ರೋಡ್‌ ನಿಲ್ದಾಣದ ವರೆಗಿನ ಸುಮಾರು 55 ಕಿ.ಮಿ ಉದ್ದದ ಹಚ್ಚ ಹಸಿರಿನಿಂದ ಕೂಡಿದ ಅರಣ್ಯ, ಜಲಪಾತ, ಸೇತುವೆಗಳ ಪ್ರಕೃತಿ ರೋಚಕ ನೋಟವನ್ನು ಪ್ರಯಾಣಿಕರು ಆಸ್ವಾದಿಸಬಹುದು.

ವಿಸ್ಟಾಡೋಮ್‌ ಕೋಚ್‌ ಅನ್ನು ಹಾಲಿ ಇರುವ ಎಂಜಿನ್‌ಗೆ ಅಳವಡಿಸಲಾಗುತ್ತದೆ. ಒಂದು ಬೋಗಿಯಲ್ಲಿ 40 ಒರಗಿಕೊಳ್ಳುವ ಆಸನಗಳಿದ್ದು, ಇವುಗಳು 360° ಡಿಗ್ರಿಯಲ್ಲಿ ಸುತ್ತುತ್ತವೆ. ಇದರಲ್ಲಿ GPS ಆಧಾರಿತ ಮಾಹಿತಿ ವ್ಯವಸ್ಥೆ, ಮೈಕ್ರೋ ಓವೆನ್‌, ಸಣ್ಣ ಫ್ರಿಡ್ಜ್‌, ಎ.ಸಿ ಸೌಲಭ್ಯ ಇರಲಿದೆ. , ಎನ್ನಲಾಗಿದೆ.

ಸಂದರ್ಭಿಕ ಚಿತ್ರ:

LEAVE A REPLY

Please enter your comment!
Please enter your name here