ಪೊಂಗಲ್/ಸಂಕ್ರಾಂತಿ: ವಿಶೇಷ ರೈಲು 13ಕ್ಕೆ
ಹುಬ್ಬಳ್ಳಿ/ಅರಸೀಕೆರೆ/ಬೆಂಗಳೂರು : ಪೊಂಗಲ್/ಸಂಕ್ರಾಂತಿ ಹಬ್ಬದ ಅಂಗವಾಗಿ ಜ. 13ರಂದು ಬೆಳಗಾವಿ–ಯಶವಂತಪುರ ನಡುವೆ ಎರಡೂ ಮಾರ್ಗದಿಂದ ವಿಶೇಷ ರೈಲು ಸಂಚರಿಸಲಿದೆ.
ಅಂದು ಯಶವಂತಪುರದಿಂದ ರಾತ್ರಿ 9.30ಕ್ಕೆ ಹೊರಟು ಮರುದಿನ ಬೆಳಿಗಿನ ಜಾವ ಅರಸೀಕೆರೆ ತಲುಪಿ 8.25ಕ್ಕೆ ಬೆಳಗಾವಿ ತಲುಪಲಿದೆ. ಅದೇ ದಿನ ಬೆಳಗಾವಿಯಿಂದ 9.20ಕ್ಕೆ ಹೊರಟು ಬೆಳಗಿನ ಜಾವ ಅರಸೀಕೆರೆ ತಲುಪಿ ಮರುದಿನ ಬೆಳಿಗ್ಗೆ 8.30ಕ್ಕೆ ಯಶವಂತಪುರ ತಲುಪಲಿದೆ.
ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ – ನೈರುತ್ಯ ರೈಲ್ವೇಸ್ , ಭಾರತ