ಅಪಘಾತ ವರದಿ ಹಾಸನ , ನವವಿವಾಹಿತೆ ಸಾವು , ಗಂಡನ ಸ್ಥಿತಿ ಚಿಂತಾಜನಕ

0

ಘಟನೆ : ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿರುವ ನಾಗಲಾಪುರ ಗೇಟ್(ಅರಕಲಗೂಡು – ಹೊಳೆನರಸೀಪುರ ರಸ್ತೆ) ಬಳಿಯ ಎನ್ ಎಸ್‌ ಕೆ‌ ಮಟನ್ ಸ್ಟಾಲ್ ಮುಂಭಾಗ ನಡೆದಿದೆ ., ಹೊಳೆನರಸೀಪುರ ತಾಲೂಕಿನಲ್ಲಿರುವ ಚಿಟ್ಟನಹಳ್ಳಿಯ ತನ್ನ ಚಿಕ್ಕಪ್ಪನ ಮನೆಯ ದೇವರ ಪೂಜೆಗೆ ಹೋಗುತ್ತಿದ್ದ ನವೀನ್

ತನ್ನ ಪತ್ನಿ ಶೋಭರೊಂದಿಗೆ ಹೋಗುವಾಗ‌ ಸಂಜೆ 7 ರ ಸುಮಾರಿಗೆ ಹಿಂಬದಿಯಿಂದ ಬಂದ ಮರದ ದಿಮ್ಮಿ‌ ತುಂಬಿದ ಲಾರಿಯೊಂದು ಬಡಿದಿದೆ ., ದಂಪತಿಯ ಮೇಲೆ ಹರಿದ ಲಾರಿಚಕ್ಕರವು , ಶೋಭಾಳ ಪ್ರಾಣವೇ ಹೋಗಿದೆ . , ಲಾರಿ ಬಡಿದ ಪರಿಣಾಮ ಶೋಭಾಳ ತಲೆ , ಕೈ , ಕಾಲು ತೀವ್ರ ಪೆಟ್ಟಾಗಿದ್ದು ,

ಲಾರಿ ಅಪಘಾತ ವಾಗಿ ಬೈಕ್ ನ್ನು ನೂರರಿಂದ ನೂರೈವತ್ತು ಮೀ ಎಳೆದೊಯ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ ., ಶೋಭಾಳ ಪತಿ ಗೂ ಗಾಯಗಳಾಗಿದ್ದು , ಹಾಸನ ಜಿಲ್ಲಾಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕೊಂಡೊಯ್ದು ಚಿಕಿತ್ಸೆ ನೀಡಲಾಗುತ್ತಿದೆ ., ಪತ್ನಿ ಶೋಭಾಳ ಮೃತ ದೇಹ ಹಾಸನ ಜಿಲ್ಲಾಸ್ಪತ್ರೆಯ‌ ಅದೇ‌  ಶವಾಗಾರದಲ್ಲಿ ಇತ್ತು .

ಈ ಪ್ರಕರಣ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ‌ ತನಿಖಾ ಹಂತದಲ್ಲಿದೆ .

LEAVE A REPLY

Please enter your comment!
Please enter your name here