ಶ್ರೀ ವೀರಭದ್ರೇಶ್ವರ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಬೆಳಗುಂಬ

0

ಶ್ರೀ ವೀರಭದ್ರೇಶ್ವರ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಬೆಳಗುಂಬ
ಅರಸೀಕೆರೆ ತಾಲ್ಲೂಕಿನ ಬೆಳಗುಂಬ ಗ್ರಾಮದಲ್ಲಿ ನ.15 ಮತ್ತು ನ.16 ರಂದು ಶ್ರೀ ವೀರಭದ್ರೇಶ್ವರ ಸ್ವಾಮಿ ನೂತನ ವಿಗ್ರಹ ಪ್ರತಿಷ್ಠಾಪನೆ ಹಾಗೂ ದೇವಾಲಯದ ಪ್ರವೇಶ ಮಹೋತ್ಸವ ಜರುಗಲಿವೆ ತಾಲ್ಲೂಕಿನ ವಿವಿಧ ಗ್ರಾಮಗಳ ದೇವರ ಸನ್ನಿಧಿಯಲ್ಲಿ ನ.15 ರಂದು ಸಂಜೆ 4.30 ಗಂಟೆಗೆ ಗಣಪತಿ ಪೂಜೆ ಗಂಗಾಪೂಜೆ 108 ಕಳಶಗಳ ಪೂಜೆಯೊಂದಿಗೆ ಗ್ರಾಮದ ಬೀದಿಗಳಲ್ಲಿ ಉತ್ಸವದ ಮೂಲಕ ದೇವಾಲಯದ ಬಳಿ ಬರಲಿದೆ ರಾತ್ರಿ 8 ರಿಂದ 9 ಗಂಟೆಯೊಳಗೆ ಶ್ರೀ ವೀರಭದ್ರೇಶ್ವರ ಸ್ವಾಮಿ ನೂತನ ದೇವಾಲಯದ ಪ್ರವೇಶ ಮಹೋತ್ಸವ ರಾತ್ರಿ 10 ಗಂಟೆಯಿಂದ ವಿವಿಧ ಪೂಜೆ ರಾತ್ರಿ 1.15 ರಿಂದ 2.15 ರೊಳಗೆ ನೂತನ ವಿಗ್ರಹ ಪ್ರತಿಷ್ಠಾಪನೆ ಮಹೋತ್ಸವ 2.30 ಕೆ ಪ್ರಾಣ ಪ್ರತಿಷ್ಠಾಪನೆ…

ನ.16 ರಂದು ಪ್ರಾತಃಕಾಲ 4 ಗಂಟೆಗೆ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವರಿಗೆ ಅಭಿಷೇಕ ಹಾಗೂ ಗಣಪತಿ ನವಗ್ರಹ ಪಂಚಬ್ರಹ್ಮ ಸಪ್ತ ದುರ್ಗಾದಿ ದೇವತೆಗಳು ಏಕಾದಶ ರುದ್ರ ಹೋಮಗಳು ನೆರವೇರಲಿದೆ
ಬೆಳಗೆ 6: 30 ಗಂಟೆಗೆ ಮಹಾ ರುದ್ರ ಹೋಮ 8.30 ಗಂಟೆಗೆ ತಮ್ಮಡಿಹಳ್ಳಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಅಭಿನವ ಮಲ್ಲಿಕಾರ್ಜುನ ದೇಶಿ ಕೇಂದ್ರ ಸ್ವಾಮೀಜಿಯವರಿಂದ ನೂತನ ದೇವಾಲಯದ ಶಿಖರ ಕಳಸ ರೋಹಾಣ ಮಹೋತ್ಸವ ನಡೆಯಲಿದೆ ಬಳಿಕ 108 ಕಳಶಗಳ ಅಭಿಷೇಕ ಪೂರ್ಣಹುತಿ. ಅಷ್ಟೋತ್ತರ ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ.
ನಂತರ ವಿವಿಧ ಸ್ವಾಮೀಜಿಗಳ ನೇತೃತ್ವದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ದೇವಾಲಯದ ಕಾರ್ಯಕಾರಿ ಸಮಿತಿ ತಿಳಿಸಿದೆ.

#arsikere #hassannews #belagumba

LEAVE A REPLY

Please enter your comment!
Please enter your name here