ಗಮನಿಸಿ : ನಾಳೆ ಮಾರ್ಚ್ 5 ಶನಿವಾರ ಹಾಸನ ನಗರ ಹಾಗೂ ಹೊರವಲಯದ ಈ ಕೆಳಕಂಡ ಪ್ರದೇಶಗಳಲ್ಲಿ ಕರಂಟ್ ಇರಲ್ಲ

0

ನಾಳೆ 5ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ ಹಾಸನ ನಗರ ವ್ಯಾಪ್ತಿಯಲ್ಲಿ : ಸೆಸ್ಕ್‌ನಿಂದ 66/11ಕೆ.ವಿ ಸಂತೆಪೇಟೆ ಹಾಸನ ಹಾಗೂ ಸಾಲಗಾಮೆ ವಿ.ವಿ ಕೇಂದ್ರದಲ್ಲಿ ಮಾ.5ರಂದು ತುರ್ತು ನಿರ್ವಹಣಾ ಕೆಲಸ ಹಮ್ಮಿಕೊಂಡಿರುವುದರಿಂದ ಅಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. 66/11 ಕೆ.ವಿ ಸಂತೆಪೇಟೆ ಹಾಸನ ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಹುಣಸಿನಕೆರೆ, ಸಂತೆಪೇಟೆ, ಚನ್ನಪಟ್ಟಣ, ಎನ್.ಆರ್.ವೃತ್ತ ಸುತ್ತಮುತ್ತ ಬೈಲಹಳ್ಳಿ, ಕೆ.ಎಚ್.ಬಿ, ಹನುಮಂತಪುರ, ಹೊಯ್ಸಳ ರೆಸಾರ್ಟ್, ವಲ್ಲಬಾಯ್ ರೋಡ್, ಹೊಸಲೈನ್ ರೋಡ್, ಹಾಸನಾಂಬ ವೃತ್ತ, ಮೈಕ್ರೋವೇವ್, ವಿಜಯನಗರ ಹಾಗೂ 66/11ಕೆ.ವಿ ಸಾಲಗಾಮೆ ವಿ.ವಿ ಕೇಂದ್ರದಿಂದ ಸರಬರಾಜಾಗುವ ಇಸ್ರೋ, ರಾಯಪುರ, ಕೊಂಡಜ್ಜಿ, ಯಲಗುಂದ, ನಿಟ್ಟೂರು, ಗುಳ್ಳೇನಹಳ್ಳಿ, ಮುತ್ತತಿ, ಭೋಗರಹಳ್ಳಿ, ಕೆಲವತ್ತಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸ್ಥಾವರಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಸೆಸ್ಕ್‌ ಹಾಸನ ವಿದ್ಯುತ್ ನಿಗಮ ಈ ಮೂಲಕ ತಿಳಿಸಿದೆ.

LEAVE A REPLY

Please enter your comment!
Please enter your name here