ಹಾಸನ / ಶಿವಮೊಗ್ಗ : ಆಗುಂಬೆ ಘಾಟಿಯ ತಪಾಸಣಾ ಕೇಂದ್ರದಿಂದ ಹೆಬ್ರಿಯವರೆಗೆ 5.25 ಕೋಟಿ ₹ ವೆಚ್ಚದಲ್ಲಿ 20KM ಡಾಂಬರೀಕರಣ ಕಾಮಗಾರಿ , ಮಾರ್ಚ್ 5ರಿಂದ 15ರವರೆಗೆ ಪ್ರತಿದಿನ ಬೆಳಿಗ್ಗೆ 7ರಿಂದ ಸಂಜೆ 7ರ ವರೆಗೆ ಆಗುಂಬೆ ಘಾಟ್ ಮೂಲಕ ಸಾಗುವ ವಾಹನಗಳ ಸಂಚಾರಕ್ಕೆ ನಿರ್ಬಂಧ ” – ಸೆಲ್ವಮಣಿ (ಜಿಲ್ಲಾಧಿಕಾರಿ ಶಿವಮೊಗ್ಗ)

ಬದಲಿ ರಸ್ತೆ ವಿವರ ಇಂತಿದೆ :
ಹಾಸನದಿಂದ ಮಂಗಳೂರು , ಉಡುಪಿ , ಕುಂದಾಪುರ ಹೋಗುವವರು ಸದ್ಯ ಶಿರಾಡಿ , ಚಾರ್ಮಾಡಿ ಹೋಗಬೇಕು , ಶಿವಮೊಗ್ಗದಿಂದ ತೀರ್ಥಹಳ್ಳಿ, ಆಗುಂಬೆ, ಉಡುಪಿ, ಮಂಗಳೂರು ಹೆದ್ದಾರಿಯಲ್ಲಿ ಸಂಚರಿಸುವ ಲಘು ವಾಹನಗಳು ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಮಾಳಾ ಘಾಟಿ, ಕಾರ್ಕಳ ಮೂಲಕ ಉಡುಪಿ ತಲುಪಬಹುದು. ಭಾರಿ ವಾಹನಗಳು ಆಯನೂರು, ಆನಂದಪುರ, ಸಾಗರ, ಹೊನ್ನಾವರ ಮೂಲಕ ಸಾಗಬೇಕು
ಶಿರಾಡಿ ಘಾಟ್ ರಸ್ತೆ ಬಂದ್ ಯಾವಾಗ ?ಕಾರಣವೇನು!!

ಸಕಲೇಶಪುರ : 2–3 ತಿಂಗಳಲ್ಲಿ ಮಳೆಗಾಲ ಆರಂಭ , ಅಷ್ಟರೊಳಗೆ ಶಿರಾಡಿ ರಸ್ತೆ ದುರಸ್ತಿ ಮುಗಿಸುವಂತೆ ಸೂಚನೆ , ಚತುಷ್ಪಥ ಕಾಂಕ್ರೀಟ್ ರಸ್ತೆ ನಿರ್ಮಿಸುವ ಸಲುವಾಗಿ ಶಿರಾಡಿ ಘಾಟ್ ರಸ್ತೆ ಬಂದ್ ಮಾಡುವುದು ಹಾಗೂ ಹಾಲಿ ರಸ್ತೆ ದುರಸ್ತಿ ಮಾಡಲು ಮನವಿ