ಮನವಿ ಹೀಗಿದೆ :
ರಾಜ್ಯದಲ್ಲಿ ಕೋವಿಡ್-19ರ ಪುಸರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ದಿನಾಂಕ:20-04-2021ರ ಸಮ ಸಂಖ್ಯೆಯ ಆದೇಶದೊಂದಿಗೆ ಮಾರ್ಗಸೂಚಿಗಳನ್ನು ವಿಪತ್ತು ನಿರ್ವಹಣಾ ಅಧಿನಿಯಮ, 2005ರ ಪ್ರಕರಣ 24ರ ಅಡಿಯಲ್ಲಿ ಹೊರಡಿಸಲಾಗಿರುತ್ತದೆ. ಈ ಆದೇಶದಲ್ಲಿ ಸೋಂಕು ಪ್ರಸರಣವನ್ನು ತಡೆಗಟ್ಟಲು ವಾರದ ದಿನಗಳು ಮತ್ತು ವಾರಾಂತ್ಯದ ಕರ್ಪೂವನ್ನು ವಿಧಿಸಲಾಗಿರುತ್ತದೆ. ಮುಂದುವರೆದು, ದಿನಾಂಕ:26.04.2021ರ ಆದೇಶದಲ್ಲಿ ಕರ್ಪೂ ಅವಧಿಯನ್ನು ದಿನಾಂಕ:12.05.2021ರವರೆಗೆ ವಿಸ್ತರಿಸಿದ್ದು, ಜನರ ಸಂಚಾರಕ್ಕೆ ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲು ತೀರ್ಮಾನಿಸಿ ಆದೇಶಿಸಿದ.
ಕೋವಿಡ್-19 ರ ಪುಕರಣಗಳ ಸಂಖ್ಯೆ ಹಾಗೂ ಕೋವಿಡ್ ಸೋಂಕು ದೃಢಪಡುತ್ತಿರುವ ಪುಮಾಣ ಏರುಗತಿಯಲ್ಲಿದೆ. ಪ್ರಸ್ತುತ ಸನ್ನಿವೇಶದಲ್ಲಿ ಪ್ರಸರಣದ ಸರಪಳಿಯನ್ನು ತುಂಡರಿಸಲು ಅತ್ಯಂತ ಕಠಿಣ ನಿರ್ಬಂಧಕ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯತೆ ಕಂಡುಬಂದಿದೆ. ಅಲ್ಲದೆ, ಇಂತಹ ದುಸ್ಥಿತಿಯಲ್ಲಿ ಹಲವು ಭೂ ಮಾಲೀಕರು / ಮನ / ವಸತಿ ಗೃಹ / ಪಿಜಿ / ಅಂಗಡಿ ಮಾಲೀಕರು ಬಾಡಿಗೆ ಮತ್ತು ಬೋಗ್ಯದ ಆಧಾರದ ಮೇಲೆ ನೀಡಿರುವ ಸ್ಥಳಗಳು / ಗ್ರಹಗಳನ್ನು ಬಾಡಿಗೆದಾರರಿಂದ ತೆರವುಗೊಳಿಸುವ ಕ್ರಮಕ್ಕೆ ಮುಂದಾಗಿದೆ.
ಈ ಕರ್ಪೂ ಅವಧಿಯಲ್ಲಿ ಉದ್ಯೋಗದಾತರು ತನ್ನ ಉದ್ಯೋಗಸ್ಕರನ್ನು ಕರ್ತವ್ಯದಿಂದ ತೆಗೆದುಹಾಕುತ್ತಿರುವ ಕ್ರಮವು ಸರ್ಕಾರದ ಗಮನಕ್ಕೆ ಬಂದಿದೆ.
ಅಂಗಡಿ ಮಾಲೀಕರು ವ್ಯಾಪಾರಕ್ಕಾಗಿ ಬಾಡಿಗೆಗೆ ನೀಡಲಾಗಿರುವ ಅಂಗಡಿ ಮತ್ತು ಅಂತಹುದೇ ಸ್ಥಳಗಳನ್ನು ಬಾಡಿಗೆದಾತರಿಂದ ತೆರವುಗೊಳಿಸಲು ಕ್ರಮವಹಿಸುತ್ತಿರುವುದೂ ಸರ್ಕಾರದ ಗಮನಕ್ಕೆ
ಆದ್ದರಿಂದ, ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಕೋವಿಡ್-19 ಸೋಂಕು ನಿರ್ಮೂಲನ ಕಮದ ಅವಶ್ಯಕತೆಯಿಂದ ವಿವತ್ತು ನಿರ್ವಹಣಾ ಅಧಿನಿಯಮ, 2005 ರ ಪ್ರಕರಣ 24 ರ ಅಡಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ರಾಜ್ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷನಾಗಿ ಈ ಕೆಳಗೆ ಸಹಿ ಮಾಡಿರುವ ನಾನು ಈ ಮೂಲಕ ಕೆಳಕಂಡಂತೆ ಮನವಿ ಮಾಡುತ್ತಿದ್ದೇವೆ.
ಯಾವುದೇ ಉದ್ಯೋಗದಾತರು ತನ್ನ ಉದ್ಯೋಗಸರನ್ನು ಕರ್ಪೂ ಅವಧಿಯಲ್ಲಿ ಕೆಲಸದಿಂದ ವಜಾಗೊಳಿಸದಿರಲು ಹಾಗೂ ಅವರುಗಳ ವೇತನವನ್ನು ಕಡಿತಗೊಳಿಸದಿರಲು ಮನವಿ ಮಾಡಿದೆ.
ಮನೆ ಮಾಲೀಕರು, ಮನೆಗಳನ್ನು / ಪಿಜಿ / ಅಂಗಡಿಗಳನ್ನು ಬಾಡಿಗೆ ಅಥವಾ ಯೋಗದ ಆಧಾರದ ಮೇಲೆ ನೀಡಿರುವ ಮೇಲಂಡವರನ್ನು ಅವರನ್ನು ಸದರಿ ವಾಸದಿಂದ ಬಲವಂತವಾಗಿ ತೆರವುಗೊಳಿಸದಿರಲು ಮನವಿ ಮಾಡಿದೆ.
-ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು.