ಔಷದಿ ಅಕ್ರಮ ಮಾರಾಟ ಪತ್ತೆಯಾದರೆ ಕಠಣ ಕ್ರಮ ಜಿಲ್ಲಾಧಿಕಾರಿ ಎಚ್ಚರಿಕೆ

0

ಹಾಸನ ಮೇ 13 : ಜೀವರಕ್ಷಕ ರಕ್ಷಕ ಔಷಧಿಗಳು ಕಾಳಸಂತೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಮಾರಾಟವಾದಲ್ಲಿ ಕಠಿಣ ಕ್ರಮ ವಹಿಸಲಾಗುವುದು ಈ ಬಗ್ಗೆ ಫಾರ್ಮಸಿಸ್ಟ್ ,ಔಷಧಿ ಮಾರಾಟಗಾರರು ಎಚ್ಚರ ವಹಿಸಬೇಕು ಅಕ್ರಮಗಳಿಗೆ ಕೈಜೋಡಿಸಿದರೆ ಶಿಕ್ಷೆ ಖಚಿತ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಔಷಧಿ ಮಾರಾಟಗಾರರು ಹಾಗೂ ಫಾರ್ಮಸಿಸ್ಟ್‍ಗಳ ಸಭೆ ನಡೆಸಿದ ಅವರು ಕೋವಿಡ್ 19 ಚಿಕಿತ್ಸೆ ಎಲ್ಲರಿಗೂ ದೊರೆಯಬೇಕು. ರೆಮ್‍ಡಿಸಿವರ್ ಸೇರಿದಂತೆ ಔಷಧಿಗಳು ಅಕ್ರಮವಾಗಿ ಹಾಗೂ ದುಬಾರಿ ಬೆಲೆಗೆ ಮಾರಾಟವಾಗದಂತೆ ಎಚ್ಚರಿಕೆವಹಿಸಬೇಕು ಎಂದರು.
ಈಗಾಗಲೇ ಸಹಾಯಕ ಔಷಧಿ ನಿಯಂತ್ರಣಾಧಿಕಾರಿ ಔಷಧಿ ಸರಬರಾಜು ಮತ್ತು ವಿತರಣೆಯಲ್ಲಿ ನಿಗಾ ವಹಿಸಿದ್ದಾರೆ ಆದರೆ ಕೆಲವೊಂದು ದುರ್ಬಬಳಕೆÀ ಆರೋಪಗಳು ಕೇಳಿಬರುತ್ತಿವೆ ಹಾಗಾಗಿ ಇದನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಒಂದು ವೇಳೆ ತಮ್ಮ ಬಳಿ ರೆಮ್ ಡಿಸಿವರ್ ಚುಚ್ಚುಮದ್ದನ್ನು ಇರುವುದಾಗಿ ತಮ್ಮ ಯಾರಾದರೂಸಂಸ್ಕರಿಸಿದಲ್ಲಿ ಅಥವಾ ನಕಲಿ ಔಷಧಿ ಮಾರಾಟ ಮಾಡುತ್ತಿರುವುದು ತಿಳಿದು ಬಂದರೆ ಪೊಲೀಸ್ ಕಂಟ್ರೋಲ್ ರೂಂ ಹಾಗೂ ಡ್ರಗ್ ಕಂಟ್ರೋಲರ್ ಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಅವರು ಮಾತನಾಡಿ ಖಾಸಗಿ ನರ್ಸಿಂಗ್ ಹೋಮ್ ಗಳಲ್ಲಿ ಮತ್ತು ಮೆಡಿಕಲ್ ಸ್ಟೋರ್ ಗಳಲ್ಲಿ ರಿಜಿಸ್ಟರ್ ನಿರ್ವಹಣೆ ಮಾಡಬೇಕು. ಹಿಂದೆ ಪರಿಶೀಲನೆ ನಡೆಸಿದ ವೇಳೆ ಬಂದಿರುವ ಪ್ರಕರಣಗಳಲ್ಲಿ ತಾಳೆಯಾಗುತ್ತಿಲ್ಲ. ಪೊಲೀಸ್ ಅಧಿಕಾರಗಳನ್ನ ಮಫ್ತಿ ಯಲ್ಲಿ ಬಿಡಲಾಗುತ್ತಿದ್ದು ಅಕ್ರಮದ ಬಗ್ಗೆ ಮಾಹಿತಿ ಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು. ಈಗಾಗಲೇ ಕೆಲವರನ್ನು ಬಂಧಿಸಿ ವಿಚಾರಣೆ ಕೂಡ ಮಾಡಲಾಗಿದೆ ಕಾನೂನಾತ್ಮಕ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ಫಾರ್ಮಸಿಸ್ಟ್ ಹಾಗೂ ಔಷಧಿ ವಿತರಕರು ಮತ್ತು ಮಾರಾಟಗಾರರು ತಾವು ಜಿಲ್ಲಾಡಳಿತಕ್ಕೆÀ ಸಂಪೂರ್ಣ ಸಹಕಾರ ನೀಡುತ್ತಿದ್ದು ಅದನ್ನು ಮುಂದುವರೆಸಲಾಗುವುದು ಎಂದು ತಿಳಿಸಿದರು ಅಕ್ರಮವಾಗಿ ಸರಬರಾಜು ಕಂಡುಬಂದಲ್ಲಿ ಅಂಥವರ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.
ಸಭೆಯಲ್ಲಿ ಔಷಧಿ ನಿಯಂತ್ರಕ ರಾದ ಡಾಕ್ಟರ್ ಗಿರೀಶ್ ತಾಲೂಕು ವೈದ್ಯಾಧಿಕಾರಿ ಡಾ|| ವಿಜಯ್ ಹಾಗೂ ಫಾರ್ಮಸ್ ಔಷಧಿ ವಿತರಕರು ಮತ್ತು ಮಾರಾಟಗಾರರು ಹಾಜರಿದ್ದರು.

LEAVE A REPLY

Please enter your comment!
Please enter your name here