ಹಾಸನ ಹ್ಯುಮೇನಿಟೇರಿಯನ್ ಸರ್ವಿಸ್” ಎಂಬ ಸ್ವಯಮ್ ಸೇವಾ ಸಂಸ್ಥೆ

0

ಈಗಿನ ಸಂದಿಗ್ಧ ಹಾಗೂ ಗಂಭೀರ ಪರಿಸ್ಥಿತಿಯಲ್ಲಿ ಇಡೀ ವಿಶ್ವವು ಸಾಂಕ್ರಾಮಿಕ ಕೊರೊನದಿಂದ ತತ್ತರಿಸಿ ಹೋಗಿದ್ದು ಇದು ಕೇವಲ ಸರ್ಕಾರಗಳ ಜವಾಬ್ದಾರಿಯಾಗಿರದೆ, ನಾವು ಸಾರ್ವಜನಿಕರು, ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು, ಮಾಧ್ಯಮದ ಮಿತ್ರರು, ಇಡೀ ಸಮಾಜವು ಒಂದಾಗಿ ಆಂದೋಲನದ ಮಾದರಿಯಲ್ಲಿ ಜಾಗೃತಿ ಮೂಡಿಸಬೇಕಿದೆ ಹಾಗೂ ಅನಗತ್ಯ ಸಾವು-ನೋವು ಗಳನ್ನು ತಡೆಯಬೇಕಿದೆ.

ಈ ದಿಸೆಯಲ್ಲಿ ಆಸಕ್ತ ವೈದ್ಯರೂ ಹಾಗೂ ಯುವಕರನ್ನೊಳಗೊಂಡ, “ಹಾಸನ ಹ್ಯುಮೇನಿಟೇರಿಯನ್ ಸರ್ವಿಸ್” ಎಂಬ ಸ್ವಯಮ್ ಸೇವಾ ಸಂಸ್ಥೆಯು ಅಸ್ತಿತ್ವಕ್ಕೆ ಬಂದಿದ್ದು, ಸಾರ್ವಜನಿಕರಿಗೆ ಸೇವೆ ನೀಡುವ ಸದುದ್ದೇಶದಿಂದ ಸರ್ಕಾರದ ಮಾರ್ಗಸೂಚಿಯಂತೆ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಗೊಳಿಸಿ, ಸಾರ್ವಜನಿಕರಿಗೆ ಸಹಕಾರಿಯಾಗಲು ನಗರದ ಹೊಸಲೈನ್ ರಸ್ತೆಯಲ್ಲಿರುವ ಷರೀಫ್ ಚ್ಯಾರಿಟೀಸ್ ಕಟ್ಟಡದಲ್ಲಿ 100 ಬೆಡ್ ಗಳುಳ್ಳ ತಾತ್ಕಾಲಿಕ ಕೊರೊನ ಕೇರ್ ಕೇಂದ್ರವನ್ನು ದಿನಾಂಕ 14-5-2021ರ ಶುಕ್ರವಾರ ಪ್ರಾರಂಭಿಸಲಾಗುತ್ತಿದೆ.

ಈ ಕೇಂದ್ರವು ಬೆಂಗಳೂರಿನ ಪ್ರತಿಷ್ಠಿತ HBS ಆಸ್ಪತ್ರೆ ಹಾಗೂ ಶಮಾ ಚ್ಯಾರಿಟೆಬಲ್ ಟ್ರಸ್ಟ ಸಹಯೋಗದಲ್ಲಿ ನಡೆಸಲಾಗುವುದು. ಈಗ ಜಿಲ್ಲಾಡಳಿತವು 45 ಬೆಡ್ ಗಳಿಗೆ ಅನುಮತಿ ನೀಡಿದ್ದು ನಂತರ ಅವಶ್ಯಕತೆಗನುಗುಣವಾಗಿ ಆರೋಗ್ಯ ಇಲಾಖೆಯ ನಿಯಮಗಳಿಗನುಸಾರವಾಗಿ ಅನುಮತಿ ಪಡೆದು ಬೆಡ್ ಸಂಖ್ಯೆಯನ್ನು ಹೆಚ್ಚಿಸಲಾಗುವುದು.

ನುರಿತ ವೈದ್ಯರು, ದಾದಿಯರು, ಹಾಗೂ ಸಿಬ್ಬಂದಿ ವರ್ಗದವರು ಸ್ವಯಂಸೇವಾ ನೆಲೆಯಲ್ಲಿ ಕೆಲಸ ನಿರ್ವಹಿಸುತ್ತಾರೆ. ಕೇವಲ ಔಷದಿ, ಆಮ್ಲಜನಕ ಹಾಗು ಲ್ಯಾಬಟೆಸ್ಟಗಳಿಗೆ ಮಾತ್ರ ಕನಿಷ್ಠ ಶುಲ್ಕವನ್ನು ಪಡೆಯಲಾಗುವುದು. ಈ ನಮ್ಮ ಪ್ರಯತ್ನಕ್ಕೆ ಜಿಲ್ಲಾಡಳಿತ, ಆರೋಗ್ಯ ಇಲಾಖೆಯ ಮಾರ್ಗದರ್ಶನ, ಪೊಲೀಸ್ ಹಾಗೂ ಸಂಬಂಧಪಟ್ಟ ಇಲಾಖೆಗಳು ಮತ್ತು ವಿಶೇಷವಾಗಿ ಮಾಧ್ಯಮದ ಮಿತ್ರರ ಸಹಕಾರ ಅಗತ್ಯವಾಗಿದೆ.

ಸಂಸ್ಥೆಯ ವತಿಯಿಂದ ಹಾಸನ ನಗರ ವ್ಯಾಪ್ತಿಯೊಳಗೆ ಯಚಿತ AMBULANCE ಸೇವೆಯು ಲಭ್ಯವಿರುತ್ತದೆ.

ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಹಾಗು ಸೇವೆಗಾಗಿ ಕೆಂದ್ರದ ಸಹಾಯವಾಣಿ ಸಂಖ್ಯೆಗಳಾದ 7795323108/7795343108/7795393108 ಯನ್ನು ಸಂಪರ್ಕಿಸ ಬಹುದಾಗಿದೆ.

LEAVE A REPLY

Please enter your comment!
Please enter your name here