ಹಾಸನ : ಕಳೆದ ನ.13 ರಂದು ರಾಗಿಕಾವಲು ಗ್ರಾಮದ ಹೊಸಕೆರೆಯಲ್ಲಿ ತಮ್ಮೇಗೌಡನ ಶವ ಪತ್ತೆಯಾಗಿತ್ತು. ಮುಖವನ್ನು ಪ್ಲಾಸ್ಟಿಕ್ ಚೀಲದಿಂದ ಮುಚ್ಚಿ ಕೆರೆಗೆ ಶವ ಎಸೆಯಲಾಗಿತ್ತು. ಈ ಸಂಬಂಧ ಮೃತನ 3ನೇ ಮಗ ನೀಡಿದ ದೂರನ್ನು ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದರು. ತನಿಖೆಯಲ್ಲಿ ತಿಳಿದು ಬಂದಂತೆ ಮಗ ಚುರುಕಿಲ್ಲ, ಹಾಗಾಗಿ
ತನ್ನಿಂದಲೇ ವಂಶ ಬೆಳೆಯಲಿ ಎಂದು ಸೊಸೆಯ ಮೇಲೆ ಕಣ್ಣು ಹಾಕಿದ ಮಾವನನ್ನು ಸುಪಾರಿ ಕೊಟ್ಟು ಬೀಗರಿಂದಲೇ ಹತ್ಯೆ ಮಾಡಿಸಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ದೊಡ್ಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ತಮ್ಮೇಗೌಡ (55) ಕೊಲೆಯಾದ ವ್ಯಕ್ತಿಯಾಗಿದ್ದು , ಕೊನೆಗೂ ಕೊಲೆಯ ರಹಸ್ಯ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೊಂದು ಸುಪಾರಿ ಕಿಲ್ಲಿಂಗ್ ?
ಮಾವ ತಮ್ಮೇಗೌಡ ತನ್ನ ಸೊಸೆ ನಾಗರತ್ನಳಿಗೆ ಅನೇಕ ರೀತಿಯಲ್ಲಿ
ತೊಂದರೆ ಕೊಡುತ್ತಿದ್ದನಂತೆ . ಮಗ ಬೌದ್ಧಿಕವಾಗಿ ಅಷ್ಟೇನು ಚುರುಕಿರಲಿಲ್ಲ. ಈತನಿಂದ ಮಕ್ಕಳಾಗುವುದು ಅನುಮಾನವಿತ್ತು. ಹೀಗಾಗಿ
ತನ್ನಿಂದಲೇ ವಂಶ ಬೆಳೆಯಲಿ ಎಂದು ಮಾವ ಸೊಸೆಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದನಂತೆ . ಮಾವನ ನೀಚ ಬುದ್ದಿ ಬಗ್ಗೆ ತನ್ನ ಪೋಷಕರ ಬಳಿ ಸೊಸೆ ಹೇಳಿಕೊಂಡ ನಂತರ ನಾಗರತ್ನ ಳ ಪೋಷಕರಾದ ಮೈಲಾರಗೌಡ ಹಾಗೂ ತಾಯಮ್ಮ 50 ಸಾವಿರಕ್ಕೆ ಕೊಲೆ ಸುಪಾರಿ ನೀಡಿದ್ದರಂತೆ .