ಗಮನಿಸಿ ! ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಈ ಕೆಳಗಿನ ಪ್ರದೇಶಗಳಲ್ಲಿ ಇಂದಿನಿಂದ ನಾಲ್ಕು ದಿನ ಕರೆಂಟ್ ಇರಲ್ಲ

0

ಅರಕಲಗೂಡು : ರಾಜ್ಯ ಹೆದ್ದಾರಿ ಯೋಜನೆಯ ಮಾಗಡಿ- ಸೋಮವಾರಪೇಟೆ ರಸ್ತೆ ವಿಸ್ತರಣೆ ನಿಮಿತ್ತ ವಿದ್ಯುತ್ ಮಾರ್ಗಗಳ ಬದಲಿಸುವ ಸಲುವಾಗಿ ಡಿ. 22 ಇಂದಿನಿಂದ 25ವರೆಗೆ ನಾಲ್ಕು ದಿನ  ಅನಿಯಮಿತ ವಿದ್ಯುತ್ ವ್ಯತ್ಯಯವಾಗಲಿದೆ.

ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹೋಬಳಿಯ ಕೂಡಲೂರು ಗ್ರಾಮದಿಂದ ಕೊಣನೂರು ಹೋಬಳಿಯ ಬೆಟ್ಟಗಳಲೆ ಗ್ರಾಮದವರೆಗೆ ರಸ್ತೆಯ ಎರಡೂ ಬದಿಯಲ್ಲಿರುವ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರ ಮಾಡಬೇಕಿರುವುದರಿಂದ ಕೊಣನೂರು, ಚಿಕ್ಕಹಳ್ಳಿ, ಹಂಡ್ರಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಗಳಿಗೆ ಪೂರೈಕೆಯಾಗುವ ವಿದ್ಯುತ್ ಸರಬರಾಜಿನಲ್ಲಿ ಅನಿಯಮಿತ ವ್ಯತ್ಯಯವಾಗಲಿದೆ – ಸೆಸ್ಕ್‌ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಿನ್ನಸ್ವಾಮಿ

LEAVE A REPLY

Please enter your comment!
Please enter your name here