ಹಾಸನ ನಗರದ ರೈಲ್ವೆ ಮೇಲ್ಸೇತುವೆ ಅಂಡರ್ ಪಾಸ್ ಸಮೀಪ ರಾಬರಿ ಯತ್ನ ಒರ್ವನ ಬಂಧನ ಮತ್ತಿಬ್ಬರಿಗೆ ಹುಡುಕಾಟ

0

ಹಾಸನ : ನಗರದ KSRTC ಬಸ್ ನಿಲ್ದಾಣದ ಸಮೀಪ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ಅಡ್ಡಗಟ್ಟಿ ಹಣ, ಮೊಬೈಲ್ ದೋಚುತ್ತಿದ್ದ ಕಳ್ಳರನ್ನು ಬೆನ್ನಟ್ಟಿದ ಪೊಲೀಸರು,

ಒಬ್ಬನನ್ನು ಬಂಧಿಸಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾನೆ.ನಗರದ ಬಡಾವಣೆಯ ಲಿಖಿತ್ ಬಂಧಿತ ನಗರದ ಖಾಸಗಿ ಕಂಪೆನಿಯ ಉದ್ಯೋಗಿ ನಿಶಾಂತ್ ಎಂಬುವರು ಬುಧವಾರ ರಾತ್ರಿ ಕೆಲಸ ಮುಗಿಸಿಕೊಂಡು ನಗರದ ಹೊಸಬಸ್ ನಿಲ್ದಾಣದ ಬಳಿ ಇರುವ ರೈಲ್ವೆ ಮೇಲ್ಸೇತುವೆ ಅಂಡರ್ ಪಾಸ್ ಸಮೀಪ

ನಡೆದು ಸಾಗುತ್ತಿದ್ದಾಗ ಮೂವರು ದುಷ್ಕರ್ಮಿಗಳು ಹಿಂಬದಿಯಿಂದ ಅಟ್ಯಾಕ್ ಮಾಡಿ ಚಾಕು ತೋರಿಸಿ ಯುವಕನ ಬಳಿಯಿದ್ದ ಹಣ, ಮೊಬೈಲ್ ಫೋನ್, ಎಟಿಎಂ ಕಿತ್ತುಕೊಂಡು ಓಡಿ ಹೋಗಿದ್ದಾರೆ. ಸಮೀಪವೇ ಇದ್ದ ಸ್ನೇಹಿತನ ಮನೆಗೆ ಓಡಿದ ನಿಶಾಂತ್ ಘಟನೆ ಬಗ್ಗೆ ವಿವರಿಸಿದರು. ಕೂಡಲೇ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದರು. ತಕ್ಷಣ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಧಾವಿಸಿ,

ಯುವಕ ನೀಡಿದ ಮಾಹಿತಿ ಆಧರಿಸಿ ಖದೀಮರಿಗಾಗಿ ಹುಡುಕಾಟ ನಡೆಸಿ ಲಿಖಿತ್ ಎಂಬಾತನನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಪರಾರಿಯಾಗಿದ್ದಾರೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಲಿಖಿತ್ ಈ ಹಿಂದೆಯೂ

ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here