ಹಾಸನ / ಆಲೂರು: ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಕಛೇರಿ ಒಂದರಲ್ಲಿ ಅಂತರ್ಜಾತಿ ವಿವಾಹಕ್ಕೆ ಸಂಬಂಧಿತ ಪ್ರೋತ್ಸಾಹಧನ ಬಿಡುಗಡೆ ಗೊಳಿಸುವ ವಿಷಯದಲ್ಲಿ ಈ ಕೆಳಕಂಡ ಗುಮಾಸ್ತರೊಬ್ಬ 2000₹ ಲಂಚ ಪಡೆಯುವಾಗ, ಭ್ರಷ್ಟಾಚಾರ ನಿಗ್ರಹದಳ (Anti curroption bureau) ಅಧಿಕಾರಿಗಳ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ
ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ರವಿಕುಮಾರ್ ಇವನೇ ಬಂಧಿತ ಅಧಿಕಾರಿ.
ಕಾರ್ಜುವಳ್ಳಿ ಗ್ರಾಮದ ಚೈತ್ರ ಶಮಂತ್ ಎಂಬುವವರ ಅಂತರ್ಜಾತಿ ವಿವಾಹಕ್ಕೆ ಸರ್ಕಾರದಿಂದ ಬಿಡುಗಡೆಯಾಗಿದೆ., ಈ ಹಣವನ್ನು ಮಂಜೂರು ಮಾಡಲು ಬರೋಬ್ಬರಿ 3000₹ ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ. 1,000₹ ಅದಾಗಲೇ ಮೊದಲೇ ಪೀಕಿದ್ದಾರೆ . ಉಳಿದ ಎರಡು ಸಾವಿರ ರೂ. ಹಣವನ್ನು ಹಾಸನದಲ್ಲಿರುವ ತಮ್ಮ ಮನೆಗೆ ಕೊಡುವಂತೆ ರವಿಕುಮಾರ್ ಸೂಚಿಸಿದ್ದರಂತೆ. ಮೊದಲೇ ತಿಳಿದಿದ್ದರಿಂದ ಅಧಿಕಾರಿ ಮನೆಯಲ್ಲಿ ಹಣ ಕೊಡುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಕಾರಣ ಕೇಳಿದಾಗ ತೊದಲಿಸಿದಾಗ , ಬಾಯಿ ಬಿಡಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ದಾಳಿಯಲ್ಲಿ ಡಿವೈಎಸ್ಪಿ ಸತೀಶ್, ಇನ್ಸ್ಪೆಕ್ಟರ್ ಶಿಲ್ಪಾ, ವೀಣಾ ಇದ್ದರು