ಹಾಸನ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2020–21ನೇ ಸಾಲಿನಲ್ಲಿ ನಡೆದಿದ್ದ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಿಂದ ವಶಪಡಿಸಿಕೊಂಡಿದ್ದ ಬರೋಬ್ಬರಿ 2,80,40,611₹ ಮೌಲ್ಯದ ವಸ್ತುಗಳನ್ನು ಪುನಃ ವಾರಸುದಾರರಿಗೆ ಸಮರ್ಪಣೆ !
ಹಾಸನ : ನಗರದ DAR ಸಮುದಾಯ ಭವನದಲ್ಲಿ ನಡೆದ ಪ್ರಾಪರ್ಟಿ ರಿಟರ್ನ್ ಪರೇಡ್ ಕಾರ್ಯಕ್ರಮ :
• ದಕ್ಷಿಣ ವಲಯ ಪ್ರವೀಣ್ ಮಧುಕರ್ ಪವಾರ್(IGP), R.ಶ್ರೀನಿವಾಸ್ ಗೌಡ(SP), BN.ನಂದಿನಿ(ASP) ಅವರು ಬೆಲೆಬಾಳುವ ವಸ್ತು ಕಳೆದು ಕೊಂಡಿದ್ದ ಮಾಲೀಕರಿಗೆ ಚಿನ್ನಾಭರಣ, ಹಣ, ವಾಹನ ಇತರೆ ವಸ್ತುಗಳನ್ನು ಹಿಂತಿರುಗಿಸಿದರು.
• 2020–21ರಲ್ಲಿ 298 ದರೋಡೆ, ಸುಲಿಗೆ, ಮನೆ ಕಳ್ಳತನ ಪ್ರಕರಣ ಕಂಡುಹಿಡಿದು ಬರೋಬ್ಬರಿ 108 ಆರೋಪಿಗಳ ಬಂಧಿಸಿ, 5.50 ಕೋಟಿ ₹ ಮೌಲ್ಯದ ವಸ್ತುಗಳ ವಶವಾಗಿದೆ.
” ಜನರಿಗೆ ಪೊಲೀಸರ ಮೇಲೆ ಹೆಚ್ಚು ವಿಶ್ವಾಸ ಬರುವಂತೆ ಕಾರ್ಯ ನಿರ್ವಹಿಸಬೇಕು. ಕಡಿಮೆ ಅವಧಿಯಲ್ಲಿ ಕೋಟ್ಯಂತರ ಮೌಲ್ಯದ ಕಳ್ಳತನ ಮಾಲು ವಶಕ್ಕೆ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಜಿಪಿಎಸ್ ಆಧಾರಿತ ಪೊಲೀಸ್ ಇ ಬೀಟ್ ವ್ಯವಸ್ಥೆ ಜಾರಿಯಲ್ಲಿದೆ. ಸಿಬ್ಬಂದಿ ಸರಿಯಾಗಿ ಸ್ಥಳಕ್ಕೆ ಭೇಟಿ ನೀಡಿದ್ದಾರೋ ಇಲ್ಲವೋ ಎಂಬುದನ್ನು ಹಿರಿಯ ಅಧಿಕಾರಿಗಳು ಕುಳಿತ ಸ್ಥಳದಿಂದಲೇ ಆ್ಯಪ್ ಮೂಲಕ ಪರಿಶೀಲಿಸಬಹುದು. ಇದರಿಂದ ಇಲಾಖೆಯ ಕಾರ್ಯವೈಖರಿ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಯಾಗಲಿದೆ ” – ಪ್ರವೀಣ್ ಮಧುಕರ್ (IGP)
ಹಾಸನ್ ನ್ಯೂಸ್ ಕಳಕಳಿ !
*ಮನೆ, ಕಛೇರಿ , ಗೋದಾಮು, ಅಂಗಡಿಗಳಲ್ಲಿ CCTV ಅಳವಡಿಸಿ*