ಹಾಸನ‌ ನಗರದ ಬಸ್ ನಿಲ್ದಾಣದಲ್ಲಿ ನಾಲ್ಕೂವರೆ ಲಕ್ಷದ ಚಿನ್ನಾಭರಣ ಕಳವು

0

ಹಾಸನ: ಬ್ಯಾಗ್ ಸಮೇತ ನಾಲ್ಕೂವರೆ ಲಕ್ಷ ರೂ. ಬೆಲೆಯ 142 ಗ್ರಾಂ ತೂಕದ ಚಿನ್ನಾಭರಣ ಕಳವು ಮಾಡಿರುವ ನಗರದ ಹೊಸ ಬಸ್ ನಿಲ್ದಾಣದಲ್ಲಿ ನಡೆದಿದೆ.

ಏ. 24 ರಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಬೇಲೂರು ತಾಲೂಕು, ಪಡುವಳಲು ಗ್ರಾಮದ (ಸ್ವಂತ ವಿಳಾಸ: ಕಗ್ಗಲಿಪುರ ಗ್ರಾಮ, ಕನಕಪುರ ಮುಖ್ಯ ರಸ್ತೆ, ಬೆಂಗಳೂರು) ನಂದಿನಿ ಎಂಬುವರು ಮದ್ದೂರಿನ ಅಕ್ಕನ ಮನೆಗೆ ಹೋಗಿದ್ದರು.

ಅಲ್ಲಿಂದ ತಮ್ಮನ ಮದುವೆಗೆಂದು ಬೇಲೂರಿಗೆ ಹೋಗಲು ಕುಣಿಗಲ್‌ನಿಂದ ಚಿಕ್ಕಮಗಳೂರು BF 60-57–2777 ನಂಬರಿನ ಬಸ್ಸಿನಲ್ಲಿ ಹಾಸನಕ್ಕೆ ಆಗಮಿಸಿದ್ದರು. ಈ ನಡುವೆ ಬಸ್ ನಿಲ್ದಾಣದಲ್ಲಿ ಇಳಿಯುವಾಗ ಅವರ ಬಳಿಯ ಬ್ಯಾಗ್‌ನಲ್ಲಿದ್ದ ಆಭರಣ ಕಳುವಾಗಿರುವುದು ಗೊತ್ತಾಗಿದೆ.

ಕೆಂಪು ಕಲರ್ ಬ್ಯಾಗ್‌ನಲ್ಲಿಟ್ಟಿದ್ದ 4.50 ಲಕ್ಷ ರೂ. ಬೆಲೆಯ 50 ಗ್ರಾಂ ತೂಕದ ಮಾಂಗಲ್ಯ ಸರ, 8 ಗ್ರಾಂ ತೂಕದ ಚೈನ್ ನೆಕ್ಸಸ್, 12 ಗ್ರಾಂ ತೂಕದ ಮುತ್ತಿನಹಾರ, 20 ಗ್ರಾಂ ತೂಕದ 3 ಎಳೆಯ ಸರ, 26 ಗ್ರಾಂ ತೂಕದ ಗುಂಡಿನ ಸರ ಹಾಗೂ 2 ಗ್ರಾಂ ತೂಕದ ಚಿನ್ನದ ಉಂಗುರ ಸೇರಿ 142 ಗ್ರಾಂ ತೂಕದ ಚಿನ್ನಾಭರಣ ಇದ್ದ ಬ್ಯಾಗ್ ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಈ ಸಂಬಂಧ ಬಡಾವಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here