ಕಲ್ಯಾಣಮಂಟಪದಲ್ಲಿ ಕಳ್ಳತನವಾಗಿದ್ದ 40 ಗ್ರಾಂ ಚಿನ್ನಾಭರಣ ಪತ್ತೆ ಮತ್ತು ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ

0

ಕೊಣನೂರು ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಕೇರಳಾಪುರ ಗ್ರಾಮದ ಬಿ ಜೆ ಎಸ್ ಕೆ ಕಲ್ಯಾಣಮಂಟಪದಲ್ಲಿ ಕಳ್ಳತನವಾಗಿದ್ದ 40 ಗ್ರಾಂ ಚಿನ್ನಾಭರಣ ಪತ್ತೆ ಮತ್ತು ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ

ದಿನಾಂಕ 24-04-2022 ರಂದು ಪಿರ್ಯಾದಿಯವರು ತಮ್ಮ ಸಂಬಂಧಿಕರ ಮದುವ ಇದುದ್ದರಿಂದ ತಮ್ಮ ಹೆಂಡತಿ ಚೈತ್ರ ಕೆ. ಆರ್ ಮತ್ತು ತಮ್ಮ ಮಕ್ಕಳೊಂದಿಗೆ ಕೇರಳಾಪುರ ಗ್ರಾಮದ ಬಿ.ಜೆ.ಎಸ್.ಕೆ ಕಲ್ಯಾಣ ಮಂಟಪದಲ್ಲಿ ಬಂದು ಉಳಿದುಕೊಂಡಿದ್ದು, ನಂತರ ದಿನಾಂಕ 25-04-2022 ರಂದು ಬೆಳಿಗ್ಗೆ ಎದ್ದು ತಿಂಡಿ ಮುಗಿಸಿಕೊಂಡು ಮದುವೆ ಮಂಟಪದಲ್ಲಿ ಬೆಳಿಗ್ಗೆ 10-30 ಗಂಟೆ ಸಮಯಕ್ಕೆ ನವಜೋಡಿಗಳಿಗೆ ಹಾಲು ಬಿಡಲು ಸರದಿಯಲ್ಲಿ ನಿಂತಿದ್ದಾಗ ಜನಜಂಗುಳಿ ಇದ್ದು, ಪಿರ್ಯಾದಿಯವರ ಹೆಂಡತಿ ಪಿರ್ಯಾದಿಯವರ ಹಿಂದೆ ನಿಂತಿದ್ದು ಒಂದು ಲಾಂಗ್ ವೆನಿಟಿ ಬ್ಯಾಗನ್ನು ನೇತುಹಾಕಿಕೊಂಡಿದ್ದು ಸದರಿ ವೆನಿಟಿ ಬ್ಯಾಗಿನೊಳಗೆ ಮನೆಯಿಂದ ತಂದಿದ್ದ ಚಿನ್ನದ ಒಡವೆಗಳಾದ 24 ಗ್ರಾಂ ತೂಕದ ಹವಳ ಇರುವ ಚಿನ್ನದ ಕೊರಳಿನ ಸರ ಅದಕ್ಕೆ ಅಳವಡಿಸಿದ್ದ 8 ಗ್ರಾಂ ತೂಕ ಇರುವ ಡೈಮಂಡ್ ಆಕೃತಿ ಇರುವ ಚಿನ್ನದ ಡಾಲರ್ ಇದ್ದ ಸರ ಮತ್ತು ಕಿವಿಗೆ ಹಾಕುವ ಚಿನ್ನದ ಒಂದು ಜೊತ ಓವೆಲ್ ಶೇಫ್ ಓಲೆ, ಮತ್ತೊಂದು ಜೊತೆ ಹಾರ್ಟ್ ಶೇಫ್ ಇರುವ ಚಿನ್ನದ ಓಲೆ, 2 ಜೊತೆ ಓಲೆಗಳು ಇವುಗಳ ತೂ 8 ಗ್ರಾಂ ಗಳಷ್ಟಿದ್ದು, ಒಟ್ಟು ತೂಕ 40 ಗ್ರಾಂ ಆಗಿದ್ದು, ಇವರುಗಳನ್ನು ಬ್ರೌನ್ ವೆಟ್ ಚಿಕ್ಕ ಪರ್ಸಿನಲ್ಲಿಟ್ಟು ಅವುಗಳನ್ನು ವೆನಿಟಿಯಲ್ಲಿಟ್ಟು ನೇತುಹಾಕಿಕೊಂಡಿದ್ದು, ನಂತರ ಪಿರ್ಯಾದಿ ಮತ್ತು ಅವರ ಹೆಂಡತಿ ಹಾಲು ಬಿಟ್ಟು ಬೆಳಿಗ್ಗೆ 11-00 ಗಂಟೆಯಲ್ಲಿ ಮದುವೆ ಮಂಟಪದಲ್ಲಿ ಕುಳಿತುಕೊಂಡು ವನಿಟಿಯನ್ನು ನೋಡಿದಾಗ, ವೆನಿಟಿ ಬ್ಯಾಗಿನ ಜಿಪ್ ತೆರೆದುಕೊಂಡಿದ್ದು, ಒಡವೆಗಳನ್ನು ಇಟ್ಟಿದ್ದ ಚಿಕ್ಕ ಪರ್ಸ್ ಕಾಣಿಸದೇ ಇದ್ದಾಗ ಪಿರ್ಯಾದಿಯವರು ಗಾಬರಿಯಾಗಿ ಮದುವೆ ಮಂಟಪದಲ್ಲಿದ್ದವರನ್ನು ಕೇಳಿ, ಎಲ್ಲಾ ಕಡೆ ಹುಡುಕಿದರು ಪತ್ತೆಯಾಗಿರುವುದಿಲ್ಲ. ಕಳುವಾಗಿರುವ 40 ಗ್ರಾಂ ಒಡವೆಗಳ ಒಟ್ಟು ಬೆಲೆ 1 ಲಕ್ಷದ 60 ಸಾವಿರ ರೂಗಳಾಗಿದ್ದು, ನಮಗೆ ಸೇರಿದ ಒಡವೆಗಳನ್ನು ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಪಿರ್ಯಾದಿಯವರು ಠಾಣೆಗೆ ಹಾಜರಾಗಿ ಕೊಟ್ಟ ಲಿಖಿತ ದೂರಿನ ಮೇರೆಗೆ ಠಾಣಾ ಮೊ ನಂ:96/2022 ಕಲಂ 379 ಐ ಪಿ.ಸಿ ರೀತ್ಯಾ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು.

ನಂತರ ಕಳ್ಳತನವಾಗಿದ್ದ ಚಿನ್ನಾಭರಣ ಮತ್ತು ಆರೋಪಿಗಳ ಪತ್ರ ಬಗ್ಗೆ ರಾಮನಾಥಪುರ ಸಾಲಿಗ್ರಾಮ ಕೇರಳಾಪುರ ಪಿರಿಯಾಪಟ್ಟಣ ಕಡೆಗಳಲ್ಲಿ ಹುಡುಕಿ ದಿನಾಂಕ:-21-05-2022 ರಂದು ಬೆಳಿಗ್ಗೆ 07-50 ಗಂಟೆಗೆ ರಾಮನಾಥಪುರ ಗ್ರಾಮದ ನಾಗಣ್ಣ ಕಾಂಪ್ಲೆಕ್ಸ್ ಬಳಿ ಕಳ್ಳತನವಾಗಿದ್ದ ಚಿನ್ನಾಭರಣಗಳನ್ನು ಮಾರಾಟಮಾಡಲು ಪ್ರಯತ್ನಿಸುತ್ತಿದ್ದಾಗ ಬಾತ್ಮಿದಾರರ ಮಾಹಿತಿ ಮೇರೆಗೆ ಕಳ್ಳತನ ಮಾಡಿದ್ದ ಆರೋಪಿಗಳಾದ 1) ರಾಮು ಬಿನ್ ಲಕ್ಷ್ಮಯ್ಯ, 35 ವರ್ಷ, ಬಳಗಾರಶೆಟ್ಟರು,ಪ್ಲಾಸ್ಟಿಕ್ ವಸ್ತುಗಳ ವ್ಯಾಪಾರ, ಚಾಮರಾಜಪುರ ಗ್ರಾಮ,ದಂಡಿಗನಹಳ್ಳಿ ಹೋಬಳಿ,ಚನ್ನರಾಯಪಟ್ಟಣ ತಾಲ್ಲೂಕು 2) ಅಣ್ಣಯ್ಯ ಬಿನ್ ಲಕ್ಷ್ಮಯ್ಯ, 25 ವರ್ಷ, ಬಳಗಾರಶೆಟ್ಟರು ಕೂಲಿ ಕೆಲಸ ಚಾಮರಾಜಪುರ ಗ್ರಾಮ,ದಂಡಿಗನಹಳ್ಳಿ ಹೋಬಳಿ,ಚನ್ನರಾಯಪಟ್ಟಣ ತಾಲ್ಲೂಕು 3) ಸುರೇಶ ಅ ಕಿಟ್ಟಿ ಬಿನ್ ಲೇಟ್ ವೆಂಕಟಪ್ಪ, 32,ವರ್ಷ, ಬಳೆಗಾರಶೆಟ್ಟರು, ಮಿಕ್ಸಿ ರಿಪೇರಿ ಕೆಲಸ ಮಿರ್ಲೆ ಗ್ರಾಮದ ಆರ್ ಎಂ ಸಿ ಮಾರುಕಟ್ಟೆಯಲ್ಲಿ ವಾಸ ಸಾಲಿಗ್ರಾಮ ಹೋಬಳಿಕೆ ಆರ್ ನಗರ ತಾಲ್ಲೂಕು ಮೈಸೂರು ಜಿಲ್ಲೆ ರವರನ್ನು ಬಂದಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತದೆ.

ಸದರಿ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ಮಾನ್ಯ ಪೊಲೀಸ್ ಅಧೀಕ್ಷಕರಾದ ಡಾ. ಶ್ರೀನಿವಾಸಗೌಡ, IPS ಹಾಗೂ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ನಂದಿನಿ ಕೆ.ಎಸ್.ಪಿ.ಎಸ್ ಇವರು ತನಿಖಾ ತಂಡವನ್ನು ರಚಿಸಿದ್ದು ಪತ್ತೆ ಹಚ್ಚುವಲ್ಲಿ ಶ್ರಮವಹಿಸಿದ ಹೊಳೆನರಸೀಪುರ ಉಪ ವಿಭಾಗದ ಉಪಾಧೀಕ್ಷಕರಾದ ಶ್ರೀ ಅರಕಲಗೂಡು ವೃತ್ತದ ಸಿಪಿಐ ಸತ್ಯನಾರಾಯಣರವರು ಹಾಗೂ ಕೊಣನೂರು ಪೊಲೀಸ್ ಠಾಣಾ ಪಿಎಸ್‌ಐ ಮಂಜುನಾಥ್ ಎಸ್, ಸಿಬ್ಬಂದಿಗಳಾದ ಪಿಸಿ 103 ಶಿವಕುಮಾರ, ಪಿಸಿ 534 ರವಿನಂದನ್ ಎಸ್ ಕ, ಪಿಸಿ 493, ನಂದೀಶ, ಪಿಸಿ 677 ಅಭಿಷೇಕ್ ಮತ್ತು ಜೀಪು ಚಾಲಕ ಮಧು ಕೆ.ಜಿ ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ಪೀರ್ ಖಾನ್ ರವರು ಶ್ರಮವಹಿಸಿದ್ದು ಇವರುಗಳ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

ಪೊಲೀಸ್ ಅಧೀಕ್ಷಕರು ಹಾಸನ ಜಿಲ್ಲೆ ಹಾಸನ

LEAVE A REPLY

Please enter your comment!
Please enter your name here