ಮಿನಿ ಒಲಿಂಪಿಕ್ಸ್‌ : ಹಾಸನ ಚಾಂಪಿಯನ್ ; ಹಾಸನ 5–0ಯಿಂದ ಕೊಡಗು ವಿರುದ್ಧ ಜಯ

0

ಹಾಸನ 15 ಮತ್ತು ಬೆಳಗಾವಿ 12 ಪಾಯಿಂಟ್‌ ಕಲೆ ಹಾಕಿತು. ರೌಂಡ್ ರಾಬಿನ್ ಹಂತದ ಕೊನೆಯ ಪಂದ್ಯದಲ್ಲಿ ಹಾಸನ 5–0ಯಿಂದ ಕೊಡಗು ವಿರುದ್ಧ ಜಯ ಗಳಿಸಿತ್ತು. ಯಶಸ್ವಿನಿ, ಪ್ರಣೀತ, ಅಕ್ಷಿತ, ಯಶಸ್ವಿ ಮತ್ತು ಭಾವನ ಗೋಲು ಗಳಿಸಿದರು. ಬೆಳಗಾವಿ ತಂಡ ಕೊನೆಯ ತನ್ನ ಕೊನೆಯ ಪಂದ್ಯದಲ್ಲಿ ಬಳ್ಳಾರಿ ವಿರುದ್ಧ 11–0ಯಿಂದ ಜಯ ಗಳಿಸಿತು. ವೈಷ್ಣವಿ 5 ಗೋಲುಗಳೊಂದಿಗೆ ಮಿಂಚಿದರೆ ಮಾಯವ್ವ 3 ಗೋಲು ಗಳಸಿದರು. ತೃಪ್ತಿ ಕಾಂಬ್ಳೆ 2 ಮತ್ತು ಚೈತ್ರ 1 ಗೋಲು ಗಳಿಸಿದರು. , ಬಾಲಕಿಯರ ವಿಭಾಗದ ರೌಂಡ್ ರಾಬಿನ್ ಮಾದರಿಯಲ್ಲಿ ಗರಿಷ್ಠ ಪಾಯಿಂಟ್ ಗಳಿಸಿದ ಹಾಸನ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು .

Advertisements

ಕೊಡಗು ಮತ್ತು ಹಾಸನ ಜಿಲ್ಲಾ ತಂಡಗಳು ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯ ಮಿನಿ ಒಲಿಂಪಿಕ್ಸ್‌ನ ಹಾಕಿಯಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡವು.

LEAVE A REPLY

Please enter your comment!
Please enter your name here