ಹಾಸನ ನಗರದ ಹೊರವಲಯದಲ್ಲಿ ಕಳ್ಳರು ವಿದ್ಯಾರ್ಥಿನಿಯೊರ್ವಳ ಬೆಲೆಬಾಳುವ ಮೊಬೈಲ್ ಕಸಿದು ಪರಾರಿ

0

ಹಾಸನ: ನಗರದ ಹೊರವಲಯದ ಬಿ.ಎಂ.ರಸ್ತೆಯ HKS ಕಾಲೇಜು ಹತ್ತಿರ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಸ್ಕೂಟರ್‌ನಲ್ಲಿ ಬಂದ ಮೂವರು ವಿದ್ಯಾರ್ಥಿನಿಯ ಮೊಬೈಲ್‌ ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ .

ಹಾಸನ ತಾಲೂಕಿನ ಸಮುದ್ರವಳ್ಳಿಯ ಕಾವ್ಯ ಎಂಬುವರ ಹಾಸನದ ಗಂಧದ ಕೋಠಿ ಆವರಣದ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿ ಜೂ.8ರಂದು ಮಧ್ಯಾಹ್ನ ಕಾಲೇಜು ಮುಗಿಸಿಕೊಂಡು ವಾಪಸ್ ಊರಿಗೆ ಹೋಗಲು ನಡೆದು ಹೋಗುತ್ತಿದ್ದಾಗ ಸ್ಕೂಟರ್‌ನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಕಾವ್ಯ ಅವರ ಬ್ಯಾಗ್ ಕಿತ್ತುಕೊಂಡು 11 ಸಾವಿರ ರೂ. ಬೆಲೆಯ ಮೊಬೈಲ್ ಕಳವು ಮಾಡಿದಾಗಿ ಕಾವ್ಯ ಶಾಂತಿಗ್ರಾಮ ಠಾಣೆಯಲ್ಲಿ ದೂರು ನೀಡಿರುತ್ತಾರೆ .

LEAVE A REPLY

Please enter your comment!
Please enter your name here