ಸಕಲೇಶಪುರ: ತಾಲೂಕಿನ ಮಠಸಾಗರ ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ನಾಪತ್ತೆಯಾಗಿದ್ದ ಆರೋಪಿಗಳನ್ನು ಪಟ್ಟಣ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಎಂಟು ದಿನಗಳ ಹಿಂದೆ ಗ್ರಾಮ ದ ಸ್ವಾಮಿ ಎಂಬಾತನನ್ನು ಕೊಲೆ ಮಾಡಿ ತಲೆ ಮೆರಸಿಕೊಂಡಿದ್ದ ಆರೋಪಿಗಳಾದ ಗ್ರಾಮದ ನಿಶಾಂತ್, ಮಹೇಶ್, ಮಂಜು ಎಂಬುವವರನ್ನು ಬಂಧಿಸಲಾಗಿದೆ.

ಘಟನೆ ಹಿನ್ನೆಲೆ: ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದ ಹಿನ್ನೆಲೆ ಸಾವಿನ ಮನೆಯಲ್ಲಿ ಮಲಗುವುದಾಗಿ ಮನೆಯಿಂದ ಹೊದಿಕೆ ಸಮೇತ ಹೊರಹೋಗಿದ್ದ ಸ್ವಾಮಿ ಗ್ರಾಮದ ಹೊರ ವಲಯದಲ್ಲಿ ಮದ್ಯಪಾನ ಮಾಡುವ ವೇಳೆ ನಿಶಾಂತ್ ಹಾ ಗೂ ಸ್ವಾಮಿ ನಡುವೆ ಕ್ಷುಲಕ ಕಾರಣಕ್ಕೆ ಜಗಳ ನಡೆದಿದೆ. ಈ ವೇಳೆ ನಿಶಾಂತ್, ಸ್ವಾಮಿ ಮೇಲೆ ಹಲ್ಲೆ ನಡೆಸಿದ್ದನು. ಇದರಿಂದ ಕೋಪಗೊಂಡ ಸ್ವಾಮಿ

ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಬೆದರಿದ ಮೂವರು ಸ್ವಾಮಿ ಮೇಲೆ ಮತ್ತಷ್ಟು ಹಲ್ಲೆ ನಡೆಸಿದ ಪರಿಣಾಮ ಸ್ವಾಮಿ ಸ್ಥಳದಲ್ಲೆ ಅಸುನೀಗಿದ್ದಾನೆ. ಆನೆದಾಳಿ ನಾಟಕ: ಹಲ್ಲೆಯಿಂದ ಹತ್ಯೆಯಾದ ಸ್ವಾಮಿ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾನೆ ಎಂದುಮಠಸಾಗರ ಸ್ವಾಮಿ ಕೊಲೆ ಆರೋಪಿಗಳಾದನಿಶಾಂತ್, ಮಹೇಶ್, ಮಂಜ ಬಿಂಬಿಸಲು ಆತನನ್ನು ವಿವಸ್ತ್ರಗೊಳಿಸಿ ತಲೆಯ ಮೇಲೆ

ಮರದ ದಿಮ್ಮಿ ಎತ್ತಿಹಾಕಿ ಮೃತದೇಹವನ್ನು ಬೇಲಿಗೆ ಹಾಕಿ, ಸ್ವಾಮಿಯ ಸಾವಿನಲ್ಲೂ ಪಾಲ್ಗೊಂಡಿದ್ದಾರೆ. ಆದರೆ, ತನಿಖೆಗಿಳಿದ ಪೊಲೀಸರು ಅನುಮಾನದ ಮೇಲೆ ಮಂಜ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಾರೆ. ಈ ವೇಳೆ ಉಳಿದಿಬ್ಬರು ಗ್ರಾಮದಿಂದ ನಾಪತ್ತೆಯಾದ ಹಿನ್ನೆಲೆ ತನಿಖೆ ಚುರುಕುಗೊಳಿಸಿದಪೊಲೀಸರು ದೋಣಿಗಾಲ್ ಗ್ರಾಮದ ತೋಟದ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಆರೋ ಪಿಗಳನ್ನು ಬಂಧಿಸಿದ್ದಾರೆ. ಡಿವೈಎಸ್ ಪಿ ಅನಿಲ್ ಕುಮಾರ್ ಹಾಗೂ ವೃತ್ತನಿರೀಕ್ಷಕ ಚೈತನ್ಯ ಮಾರ್ಗದರ್ಶನದಲ್ಲಿ ಪಟ್ಟಣ ಠಾಣೆ ಪಿಎಸ್‌ಐ ಶಿವಶಂಕರ್, ಸಿಬ್ಬಂದಿಗಳಾದ ಖಾದರ್, ಸತೀಶ್, ರೇವಣ್ಣ ರಾಮಚಂದ್ರ, ಚಾಲಕ ಅಶೋಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.