ನೂತನವಾಗಿ ವಿಸ್ತರಿಸಲಾದ ಮೈಸೂರು-ಬೆಳಗಾವಿ ಎಕ್ಸ್‌ಪ್ರೆಸ್ ರೈಲಿನ ಪರಿಷ್ಕರಣೆಯ ವೇಳಾಪಟ್ಟಿ ಅಕ್ಟೋಬರ್ 1ರಿಂದ ಜಾರಿಯಾಗಲಿದ್ದು. ಆ ಸಮಯಗಳು ಹಾಗೂ ಮಾರ್ಗಗಳ ವಿವರವನ್ನು ಇಲ್ಲಿ ತಿಳಿಯಬಹುದು

ಈ ಪರಿಷ್ಕರಣೆಯ ವೇಳಾಪಟ್ಟಿಯು ಭಾರತೀಯ ರೈಲ್ವೆಯ 2023-24ನೇ ಸಾಲಿನ ಭಾಗವಾಗಿದ್ದು, ಇದು ಇದೇ ಅಕ್ಟೋಬರ್ 1ರಿಂದ ಜಾರಿಗೆ ಬರಲಿರು ಮಾಹಿತಿ ಹಾಸನ್ ನ್ಯೂಸ್ ತಂಡಕ್ಕೆ ಲಭ್ಯವಾಗಿದೆ. ಪರಿಷ್ಕರಣೆ ವೇಳಾಪಟ್ಟಿಯ ಪ್ರಕಾರ, ರೈಲು ಸಂಖ್ಯೆ 17301 ಮೈಸೂರು-ಬೆಳಗಾವಿ ಎಕ್ಸ್‌ಪ್ರೆಸ್ ಅಕ್ಟೋಬರ್ 1ರಿಂದ ಮೈಸೂರಿನಿಂದ ರಾತ್ರಿ 08:45 ಗಂಟೆಗೆ ಹೊರಡುತ್ತದೆ. ನಂತರ ಮಾರನೇ ಬೆಳಗ್ಗೆ 08:45ಕ್ಕೆ ಬೆಳಗಾವಿ ತಲುಪಲಿದೆ .

ಪ್ರಸ್ತುತ, ರೈಲು ಮೈಸೂರಿನಿಂದ ರಾತ್ರಿ 08:30ಕ್ಕೆ ಹೊರಟು ಮಾರನೇ ದಿನ ಬಳಗ್ಗೆ 10:45ಕ್ಕೆ ಬೆಳಗಾವಿಗೆ ಆಗಮಿಸಲಿದೆ. ರೈಲು ಸಂಖ್ಯೆ 17302 ಬೆಳಗಾವಿ-ಮೈಸೂರು ಎಕ್ಸ್‌ಪ್ರೆಸ್ ಬೆಳಗಾವಿಯಿಂದ ಸಂಜೆ 06:00 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 05:55ಕ್ಕೆ ಮೈಸೂರು ತಲುಪುತ್ತದೆ. ಈ ವೇಳಾಪಟ್ಟಿ ಅಕ್ಟೋಬರ್ 1 ರಿಂದ ಜಾರಿಯಾಗಲಿದೆ.

ಪ್ರಸ್ತುತ, ರೈಲು ಬೆಳಗಾವಿಯಿಂದ ರಾತ್ರಿ 8 ಗಂಟೆಗೆ ಹೊರಟು, ಮಾರನೇ ದಿನ 07:10ಕ್ಕೆ ಮೈಸೂರಿಗೆ ಆಗಮಿಸಲಿದೆ ., ಅಕ್ಟೋಬರ್ 1ರಿಂದ ಪ್ರಯಾಣಕ್ಕಾಗಿ NTES ಆಪ್ ನಲ್ಲಿ ಪರಿಷ್ಕೃತ ವೇಳಾಪಟ್ಟಿಯನ್ನು ನವೀಕರಿಸಲಾಗುರುತ್ತದೆ .

ಈ ಅಪ್ ನಿಂದ ತೆಗೆದುಕೊಳ್ಳಲಾದ ರೈಲು ಸಂಖ್ಯೆ 17301/02 ಮೈಸೂರು-ಬೆಳಗಾವಿ ಎಕ್ಸ್‌ಪ್ರೆಸ್‌ಗಾಗಿ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ನವೀಕರಿಸಿದ ವೇಳಾಪಟ್ಟಿಯನ್ನು ಸ್ಪಷ್ಟವಾಗಿ ನೀಡಲಾಗಿದೆ ಗಮನಿಸಿ ಪ್ರಯಾಣಿಕರೇ ‌

LEAVE A REPLY

Please enter your comment!
Please enter your name here