ಬೆಂಗಳೂರಿನ ಸುಂಕದಕಟ್ಟೆ ಪಾಳ್ಯ ನಿವಾಸಿ ಅರವಿಂದ್.M. ಎಂಬುವವರು ತಮ್ಮ ಕಾರಿನಲ್ಲಿ ಹಾಸನದ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ದರ್ಶನ ಮುಗಿಸಿ ಕಳೆದ ಜ. 31ರಂದು ರಾತ್ರಿ 12AM ಸುಮಾರಿನಲ್ಲಿ ತಮ್ಮ ಸ್ವಗೃಹ ಬೆಂಗಳೂರಿಗೆ ವಾಪಸ್ ಆಗುವಾಗ ನ್ಯಾಷಿನಲ್ ಹೈವೇ NH75 ಟೋಲ್‌ನಲ್ಲಿ ಫಾಸ್ಟ್ ಟ್ಯಾಗ್ ಇಲ್ಲದ ಕಾರಣ ಹಣ ಪಾವತಿಗೆ ತಮ್ಮ ATM ಕಾರ್ಡ್ ಕೊಟ್ಟಿರುತ್ತಾರೆ ಕಾರ್ಡ್ ಸ್ವೈಪ್ ತಾಂತ್ರಿಕ ಕಾರಣದಿಂದ ಆಗಿರುವುದಿಲ್ಲ., ನಂತರ ಕಾರ್ ರಿವರ್ಸ್ ತೆಗೆದು , ಅಲ್ಲೇ ಪಕ್ಕದಲ್ಲಿ ನಿಲ್ಲಿಸುತ್ತಾರೆ .,ಅದಾದ ಕೆಲವೇ ಕ್ಷಣದಲ್ಲಿ ಅಂದಾಜು 20-25 ರ ಒಳಗಿನ ವಯಸ್ಸಿನ ಅಪರಿಚಿತ ಯುವಕರಿಬ್ಬರು ಅವರ ಕಾರಿನ ಬಳಿ ಬಂದು ಕ್ಯಾತೆ ತೆಗೆದು ಇದೇ ಅರವಿಂದ ಅವರಿಂದ ಕಾರಿನ ಕೀ ಕಿತ್ತುಕೊಂಡು ಅವರ 8.5ಲಕ್ಷ ಬೆಲೆಯ ಕಾರು,ಮೊಬೈಲ್ ಮತ್ತು ATM ಕಾರ್ಡ್ , ಕಸಿದುಕೊಂಡು ಪರಾರಿಯಾಗಿದ್ದಾರೆ.