ಜಲ ಸಂರಕ್ಷಣಾ ಕಾರ್ಯಕ್ರಮಗಳಿಗೆ ಹಾಸನ ಜಿಲ್ಲಾ ಹಿಮ್ಸ್, ಸಂಸ್ಥೆಗೆ ಕೇಂದ್ರ ಸರ್ಕಾರದಿಂದ ಪ್ರಶಸ್ತಿ

0

ಹಾಸನ ಡಿ.02 (ಹಾಸನ್_ನ್ಯೂಸ್): ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆ ದೇಶದಲ್ಲಿ ಮೂರನೇ ಸ್ಥಾನ ಗಳಿಸಿದ್ದು ಜಲಸಂರಕ್ಷಣೆ ಮತ್ತು ನಿರ್ವಹಣೆಯ ವಿಚಾರದಲ್ಲಿಯೂ ಹಿಮ್ಸ್ ಗೆ ರಾಷ್ಟ ಮಟ್ಟದ ಪ್ರಶಸ್ತಿ ಲಭಿಸಿದೆ.
ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯದ ವತಿಯಿಂದ ದಿನಾಂಕ 11 ಹಾಗೂ 12 ನೇ ನವಂಬರ್ 2020 ರಂದು 2019 ನೇ ಸಾಲಿನ 2ನೇ ನ್ಯಾಷನಲ್ ವಾಟರ್ ಆವಾರ್ಡ್‍ನ ಪ್ರಶಸ್ತಿ ಪ್ರಧಾನ ಸಮಾರಂಭವು ವರ್ಚುವಲ್ ವೇದಿಕೆಯಲ್ಲಿ ನಡೆಯಿತು. ಈ ಪ್ರಶಸ್ತಿ ಸಮಾರಂಭದಲ್ಲಿ ಜಲಶಕ್ತಿ ಅಭಿಯಾನಕ್ಕೆ ಸಂಬಂಧಿಸಿದ ನೀರಿನ ಸಂರಕ್ಷಣೆ ಹಾಗೂ ಉತ್ತಮ ನಿರ್ವಹಣೆಗಾಗಿ ಒಟ್ಟು 16 ವಿವಿಧ ವಿಭಾಗಗಳಾದ ಅತ್ಯುತ್ತಮ ರಾಜ್ಯ, ಜಿಲ್ಲೆ, ನಗರ ಸಭೆ, ಕಾರ್ಖಾನೆ, ಶಾಲೆ, ದಿನಪತ್ರಿಕೆ, ಸಂಸ್ಥೆ/ನಿವಾಸಿ ಕಲ್ಯಾಣ ಸಂಘಗಳು/ಧಾರ್ಮಿಕ ಸಂಸ್ಥೆಗಳು ಹಾಗೂ ಇನ್ನೀತರ ವಿಭಾಗಗಳಿಗೆ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಯಿತು. ಇವುಗಳಲ್ಲಿ ಅತ್ಯುತ್ತಮ ಸಂಸ್ಥೆ/ನಿವಾಸಿ ಕಲ್ಯಾಣ ಸಂಘಗಳು/ಧಾರ್ಮಿಕ ಸಂಸ್ಥೆಗಳು ಈ ವಿಭಾಗದಲ್ಲಿ ಹಿಮ್ಸ್ ಗೆ ಪ್ರಶಸ್ತಿ ಪತ್ರ, 1 ಲಕ್ಷ ನಗದು ಬಹುಮಾನ ಹಾಗೂ ಫಲಕವನ್ನು ನೀಡಲಾಯಿತು.
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಅಳವಡಿಸಿರುವುದು, ಉಪಯೋಗಿಸಿದ ನೀರನ್ನು ಮರುಬಳಕೆ ಮಾಡಿ ಸಂಸ್ಥೆಯ ಆವರಣದಲ್ಲಿ ಹಸಿರು ತೋಟ ನಿರ್ಮಿಸಿರುವುದು, ನೀರು ಪೋಲಾಗುವುದನ್ನು ತಡೆಯಲು ವಾಟ್ಸ್‍ಆಪ್ ಗ್ರೂಪ್‍ನ ಮೂಲಕ ಶೀಘ್ರ ಪರಿಹಾರ, ರೋಗಿಗಳಿಗೆ ಹಾಗೂ ರೋಗಿಗಳ ಸಂಬಂಧಿಗಳಿಗೆ ಮತ್ತು ಸಾರ್ವಜನಿಕರಿಗೆ ಬೀದಿ ನಾಟಕ ಪ್ರದರ್ಶನ, ಭಿತ್ತಿ ಪತ್ರಗಳನ್ನು ಹಂಚುವ ಮೂಲಕ ನೀರಿನ ಸಂರಕ್ಷಣೆ ಮತ್ತು ಮಹತ್ವದ ಕುರಿತು ಅರಿವು ಮೂಡಿಸಿರುವುದು ನಗರ ಹಾಗೂ ವಿವಿಧ ಹಳ್ಳಿಗಳಲ್ಲಿ ಕೆರೆ ಹಾಗೂ ನೀರಿನ ಮೂಲಗಳ ಸ್ವಚ್ಚತೆ ಹಾಗೂ ಗಿಡ ನೆಡುವ ಚಟುವಟಿಹಳನ್ನು ಹಿಮ್ಸ್ ನಿರ್ವಹಿಸಿತ್ತು.
ಸಾರ್ವಜನಿಕರಿಗೆ ನೀರಿನ ಮಹತ್ವದ ಅರಿವು ಮೂಡಿಸಲು ಜಾಥಾ ಕಾರ್ಯಕ್ರಮ ಹಾಗೂ ವಿವಿಧ ಹಳ್ಳಿಗಳಲ್ಲಿ ಸುಮಾರು 1,000 ಕ್ಕೂ ಅಧಿಕ ಜನರಿಗೆ ಮುಂದೆ ನಾವೆಲ್ಲರೂ ನೀರಿನ ಅಭಾವದಿಂದ ಪಡಬೇಕಾಗಿರುವ ಸಂಕಷ್ಟದ ಕುರಿತಾದ “ಹೋಮ್ & ಇನ್ ಕನ್ವೀಯೇಂಟ್ ಟ್ರೂತ್” ಎಂಬ ಕಿರು ಚಿತ್ರ ಪ್ರದರ್ಶನ, ವಿದ್ಯಾರ್ಥಿಗಳಿಗೆ ನೀರಿನ ಮಿತ ಬಳಕೆಯಲ್ಲಿ ನನ್ನ ಪಾತ್ರ ಎಂಬ ಕುರಿತಾದ ಪ್ರಬಂಧ ಸ್ವರ್ಧೆ, ನೀರಿನ ಸಂರಕ್ಷಣೆಯ ಬಗ್ಗೆ ಚಿತ್ರ ಬಿಡಿಸುವ ಸ್ವರ್ಧೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಹಿಮ್ಸ್ ಸಂಸ್ಥೆಯ ಆವರಣದಲ್ಲಿ ನೀರಿನ ಅಂತರ್ಜಲ ಮಟ್ಟ ಉತ್ತಮವಾಗಿದ್ದು ಹಾಗೂ ನೀರಿನ ಸಂರಕ್ಷಣೆಗೆ ಸಂಬಂಧಿಸಿದ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಂಸ್ಥೆಯನ್ನು ಗುರುತಿಸಿ ಈ ಬಹುಮಾನವನ್ನು ನೀಡಿಲಾಗಿದೆ. ಪ್ರಶಸ್ತಿ ಸಮಾರಂಭದಲ್ಲಿ ಉಪರಾಷ್ಟಪತಿ ವೆಂಕಯ್ಯನಾಯ್ಡು, ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖವತ್ ಹಾಗೂ ಕೇಂದ್ರ ಸಚಿವಾಲಯದ ಗಣ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here