ನಿಮ್ಮ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಅಬಕಾರಿ ಅಕ್ರಮ ಚಟುವಟಿಕೆ ನಡೆಯುತ್ತಿದೆಯೇ?? ಹಾಗಾದರೆ ಕರೆಮಾಡಿ ಈ ಫೋನ್ ಸಂಖ್ಯೆಗೆ !!(ಅಕ್ರಮ ತಡೆಯಿರಿ)

  0

  ಹಾಸನ.ಡಿ.05..(ಹಾಸನ್_ನ್ಯೂಸ್)):- ಸಾರ್ವತ್ರಿಕ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಅಬಕಾರಿ ಅಕ್ರಮ ಚಟುವಟಿಕೆಗಳನ್ನು ತಡೆದು ನ್ಯಾಯಸಮ್ಮತ ಚುನಾವಣೆ ನಡೆಸುವ ಉದ್ದೇಶದಿಂದ ಸಾರ್ವಜನಿಕರಿಗೆ ಮಾಹಿತಿ ನೀಡಲು ಹಾಸನ ಅಬಕಾರಿ ಉಪ ಆಯುಕ್ತರ ಕಚೇರಿ ಕಂಟ್ರೋಲ್ ರೂಂ ತೆರೆಯಲಾಗಿದೆ.
       ಸಾರ್ವಜನಿಕರು ಅಕ್ರಮಗಳ ಬಗ್ಗೆ ಮಾಹಿತಿಯನ್ನು ದೂರವಾಣಿ ಸಂಖ್ಯೆ 081752-268535, ಉಪವಿಭಾಗಕ್ಕೆ ತಿಳಿಸಬಹುದು ಅಥವಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ತಂಡಗಳನ್ನು ರಚಿಸಲಾಗಿದೆ,  ಜಿಲ್ಲಾಮಟ್ಟದ ವಿಚಕ್ಷಣ ದಳದಲ್ಲಿ  ಕಮಲಾಕರ್ ಬಿ. ಹೆಗಡೇಕರ್ ಅಬಕಾರಿ ನಿರೀಕ್ಷಕರು ಅಬಕಾರಿ ಉಪ ಆಯುಕ್ತರ ಕಚೇರಿ ಹಾಸನ 9449597197, ಹಾಸನ ಉಪ ವಿಭಾಗ ಮಟ್ಟದ ವಿಚಕ್ಷಣ ದಳದಲ್ಲಿ ಎಂ.ಎಚ್.ರಘು ಅಬಕಾರಿ ಉಪ ಅಧೀಕ್ಷಕರು ಹಾಸನ ಉಪ ವಿಭಾಗ 9449497198, ಮತ್ತು ಸಕಲೇಶಪುರ ಉಪ ವಿಭಾಗ ಮಟ್ಟದ ವಿಚಕ್ಷಣ ದಳ ವೆಂಕಟೇಶ್ ಹೆಚ್.ಕೆ ಅಬಕಾರಿ ನಿರೀಕ್ಷಕರು ಸಕಲೇಶಪುರ ಉಪವಿಭಾಗ 9538169923 ಸಾರ್ವಜನಿಕರು ಅಕ್ರಮಗಳ ಬಗ್ಗೆ ದೂರು ದಾಖಲಿಸುವ ಮೂಲಕ ಚುನಾವಣೆ ನ್ಯಾಯ ಸಮ್ಮತ ಹಾಗೂ ನಿಸ್ಪಕ್ಷಪಾತವಾಗಿ ನಡೆಸಲು ಸಹಕರಿಸಿ –  ಹಾಸನ ಅಬಕಾರಿ ಉಪ ಆಯುಕ್ತರು , ಹಾಸನ

  LEAVE A REPLY

  Please enter your comment!
  Please enter your name here