ಹಾಸನ : ಕರ್ತವ್ಯ ನಿರತ ಮಹಿಳಾ PSI ಮೇಲೆ ಗ್ರಾ.ಪಂ. ಸದಸ್ಯನಿಂದ ಹಲ್ಲೆ ಯತ್ನ

0

ಹಾಸನ : ಕರ್ತವ್ಯನಿರತ ಮಹಿಳಾ ಪಿಎಸ್‌ಐ ಮೇಲೆ ಗ್ರಾ.ಪಂ. ಸದಸ್ಯನಿಂದ ಹಲ್ಲೆ ಯತ್ನ , ಪೊಲೀಸ್ ಠಾಣೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಎಳೆದಾಡಿದ ಬಿಜೆಪಿ ಗ್ರಾ.ಪಂ. ಸದಸ್ಯ , ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಜಾವಗಲ್ ಠಾಣೆಯ ಮಹಿಳಾ  ಶೋಭ ಭರಮಕ್ಕನವರ್ ( PSI ) ಮೇಲೆ ಹಲ್ಲೆ ಯತ್ನ ನಡೆಸಿರುವ ಶ್ರೀನಿವಾಸ್ ಎಂಬಾತ , ಈತ ನೇರ್ಲಿಗೆ ಗ್ರಾಮ ಪಂಚಾಯ್ತಿ ಸದಸ್ಯ  , ಶ್ರೀನಿವಾಸ್‌ನಿಂದ ಪಿಎಸ್‌ಐ ಮೇಲೆ ದೌರ್ಜನ್ಯ ಆಗಿದ್ದು ಇದೇ PSI ಇಸ್ಪಿಟ್ ಅಡ್ಡೆ ಒಂದರ ಮೇಲೆ ರೇಡ್ ಮಾಡಿ ಕೆಲವರನ್ನು ಬಂಧಿಸಿದ್ದರು

ಜಾವಗಲ್ ಪಿಎಸ್‌ಐ ಶೋಭ ಭರಮಕ್ಕನವ‌ ಬಂಧಿಸಿದವರನ್ನು ಬಿಡಿಸಲು ನಿನ್ನೆ ರಾತ್ರಿ ಪೊಲೀಸ್ ಠಾಣೆಗೆ ಹೋಗಿದ್ದ ಶ್ರೀನಿವಾಸ್ , ಈ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಹಿಳಾ PSI ನ್ನು ಹಿಡಿದು ಎಳೆದಾಡಿದ ಶ್ರೀನಿವಾಸ್ (ಬಿಜೆಪಿ ಗ್ರಾ.ಪಂ. ಸದಸ್ಯ ) ಎನ್ನಲಾಗಿದೆ

ಶ್ರೀನಿವಾಸ್ ವಿರುದ್ಧ ಪ್ರಕರಣ ಜಾವಗಲ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ತನಿಖೆ ಸಾಗಿದೆ .

PSI ದೂರು ಇಂತಿದೆ :

ಇಸ್ಪಿಟ್ ಅಡ್ಡೆ ಮೇಲೆ ದಾಳಿ ಮಾಡಿ ಕೆಲವರನ್ನು ಪಿಎಸ್‌ಐ ಶೋಭ ಭರಮಕ್ಕನವರ್ ಬಂಧಿಸಿದ್ದರು. ಈ ವಿಚಾರವಾಗಿ ಗುರುವಾರ ರಾತ್ರಿ ಏಕಾಏಕಿ ಪೊಲೀಸ್ ಠಾಣೆಗೆ ಆಗಮಿಸಿದ ಶ್ರೀನಿವಾಸ್, ನನ್ನ ಕಡೆಯವರನ್ನ ಈ ಕೇಸ್‌ನಿಂದ ಹೊರಗಿಡಬೇಕು. ಸುಳ್ಳು ಹೇಳಿ ಅವರನ್ನ ಈ ಪ್ರಕರಣದಲ್ಲಿ ಸಿಲುಕಿಸಿದ್ದೀಯಾ? ಅದೇನ್ ಮಾಡ್ಕೊತೀಯಾ ಮಾಡೋ, ನಾನು ಗ್ರಾಪಂ ಸದಸ್ಯ… ನೀನು ಪಿಎಸ್‌ಐ ಅಂದಾಕ್ಷಣ ಹೆದರಲ್ಲ… ಎಂದು ಏಕವಚನದಲ್ಲೇ ಅವಾಚ್ಯವಾಗಿ ನಿಂದಿಸಿ, ಬಟ್ಟೆ ಹಿಡಿದು ಎಳೆದಾಡಿ ಹಲ್ಲೆಗೆ ಯತ್ನಿಸಿ, ಕರ್ತವ್ಯಕ್ಕೆ ಆ ಅಡ್ಡಿಪಡಿಸಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ವಿವರಿಸಿದ್ದಾರೆ “

LEAVE A REPLY

Please enter your comment!
Please enter your name here