ಗ್ರಾ.ಪಂ ಚುನಾವಣೆ !, ಶಸ್ತ್ರ/ಬಂದೂಕು/ಆಯುಧಗಳನ್ನು ಹೊತ್ತು ತಿರುಗುವುದು ಮನೆಯಲ್ಲಿಟ್ಟಿಕೊಳ್ಳುವುದು ನಿಷೇಧ 🚫 ಹಾಸನ ಡಿಸಿ ಆದೇಶ

  0

  ಹಾಸನ ಡಿ.03 (ಹಾಸನ್_ನ್ಯೂಸ್): ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಈ ಸಂದರ್ಭದಲ್ಲಿ  ಯಾವುದೇ ಅಹಿತಕರ ಘಟನೆಯು ಸಂಭವಿಸದಂತೆ  ಶಾಂತಿಯುತವಾಗಿ ಹಾಗೂ ಮುಕ್ತವಾಗಿ ಪೂರ್ಣಗೊಳಿಸಬೇಕಿರುವುದರಿಂದ ಜಿಲ್ಲೆಯ ಚುನಾವಣೆ ನಡೆಯುವ ಪ್ರದೇಶದ ವ್ಯಾಪ್ತಿಯಲ್ಲಿ ಯಾವುದೇ ವಿಧವಾದ ಶಸ್ತ್ರ/ಬಂದೂಕುಗಳನ್ನು ಹೊಂದುವುದು ಮತ್ತ್ಲು ಶಸ್ತ್ರಗಳನ್ನು ಹೊತ್ತು ತಿರುಗುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಆದೇಶ ಹೊರಡಿಸಿದ್ದಾರೆ.
  ಕರ್ನಾಟಕ ಪೊಲೀಸ್ ಅಧಿನಿಯಮ 1963ರ ಕಲಂ 35ರಡಿ ದತ್ತವಾಗಿರುವ ಅಧಿಕಾರ ಚಲಾಯಿಸಿ ಚುನಾವಣೆ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಹಾಸನ ಜಿಲ್ಲೆಯ ಆಯುಧ ಪರವಾನಗಿದಾರರು ತಮ್ಮ ಆಯುಧಗಳನ್ನು ವ್ಯಾಪ್ತಿ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಅಥವಾ ಅಧಿಕೃತ ಆಯುಧ ಮತ್ತು ಮದ್ದುಗುಂಡುಗಳ ವಹಿವಾಟುದಾರರಲ್ಲಿ    31-12-2020 ರವರೆಗೆ ಠೇವಣಿ ಇಡುವಂತೆ ಅವರು ಆದೇಶಿಸಿದ್ದಾರೆ.

  ಬ್ಯಾಂಕ್‍ಗಳು, ಸರ್ಕಾರಿ, ಅರೆಸರ್ಕಾರಿ ಸಂಸ್ಥೆಗಳಲ್ಲಿ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಭದ್ರತೆಗಾಗಿ ಆಯುಧಗಳನ್ನು ಹೊಂದಿರುವವರು ಹಾಗೂ ವೈಯುಕ್ತಿಕವಾಗಿ ಜೀವ ಬೆದರಿಕೆ ಹೊಂದಿರುವವರು ಆಯುಧಗಳನ್ನು ಅತ್ಯಗತ್ಯವಾಗಿ ತಮ್ಮಲ್ಲಿಯೇ ಇಟ್ಟುಕೊಳ್ಳುವ ಅನಿವಾರ್ಯತೆಯ ಸಕಾರಣಗಳೊಂದಿಗೆ ತಮ್ಮ ವ್ಯಾಪ್ತಿ ಪ್ರದೇಶದ ಪೋಲಿಸ್ ಠಾಣೆಯಲ್ಲಿ ಅರ್ಜಿ ಸಲ್ಲಿಸುವುದು, ಸದರಿ ಅರ್ಜಿಗಳನ್ನು ಪರೀಶಿಲಿಸಿ ಅರ್ಹತೆಗಳ ಆಧಾರದನ್ವಯ ಪೋಲಿಸ್ ಠಾಣೆಯ ಮುಖ್ಯಸ್ಥರ ಜವಾಬ್ದಾರಿ ಮೇಲೆ, ಆಯುಧಗಳನ್ನು ಠೇವಣಿ ಇಡುವುದರಿಂದ ವಿನಾಯತಿ ನೀಡಬಹುದಾಗಿರುತ್ತದೆ.  – ಜಿಲ್ಲಾಧಿಕಾರಿ ಆರ್.ಗಿರಿಶ್(ಆದೇಶ)

  LEAVE A REPLY

  Please enter your comment!
  Please enter your name here