ಕೇಸಿನ ವಿವರ :
ಹಾಸನ ಜಿಲ್ಲೆಯಲ್ಲಿ ಅಪಘಾತವನ್ನು ತಡೆಗಟ್ಟುವ ಸಲುವಾಗಿ ಜಿಲ್ಲೆಯ ಪೊಲೀಸ್ ಅಧಿಕಾರಿಯವರಿಗೆ ಮೋಟಾರ್ ವಾಹನ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸುವ ಬಗ್ಗೆ ಪೊಲೀಸ್ ಅಧೀಕ್ಷಕರು, ಹಾಸನ ಜಿಲ್ಲೆ ಹಾಸನ ರವರು ಸೂಚಿಸಿದ್ದು, ಅದರಂತೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಮತ್ತು ಸಿಬ್ಬಂದಿಗಳು ದಿನಾಂಕ: 22-10 2020 ರಂದು ಸಂಜೆ 6 ಗಂಟೆ ಸಮಯದಲ್ಲಿ ಹಾಸನ – ಬೇಲೂರು ರಸ್ತೆ ಕಪ್ಪಳ್ಳಿ ಗೇಟ್ ಹತ್ತಿರ ವಾಹನಗಳನ್ನು ತಪಾಸಣೆ ಮಾಡಿ ಎ.ಎಂ.ವಿ ಪ್ರಕರಣಗಳನ್ನು ದಾಖಲಿಸುತ್ತಿರುವಾಗ ಬೇಲೂರು ಕಡೆಯಿಂದ ಒಬ್ಬ ಬೈಕ್ ಸವಾರ ಕೆ.ಎ. 13 ಇಕೆ 3730 ರ ಬೈಕ್ ಹಿಂಭಾಗ ಮತ್ತೊಬ್ಬರನ್ನು ಕೂರಿಸಿಕೊಂಡು ಬರುತ್ತಿದ್ದವರನ್ನು ತಡೆದು ನಿಲ್ಲಿಸಿ ದಾಖಲಾತಿಗಳನ್ನು ಕೇಳಲಾಗಿ ಸಂಮಜಸವಾದ ಉತ್ತರವನ್ನು ಹಾಗೂ ಬೈಕಿನ ದಾಖಲಾತಿಗಳನ್ನು ಹಾಜರುಪಡಿಸದೆ ಇದ್ದರಿಂದ ಕೂಲಂಕುಶವಾಗಿ ವಿಚಾರ ಮಾಡಲಾಗಿ ತೊದಲುತ್ತಾ ಬೇರೆ ಬೇರೆ ಹೆಸರು ಮತ್ತು ವಿಳಾಸ ತಿಳಿಸಿದ್ದರಿಂದ ಹಾಸನ ಗ್ರಾಮಾಂತರ ಠಾಣೆಗೆ ಕರೆದುಕೊಂಡು ಬಂದು ವಿಚಾರ ಮಾಡಲಾಗಿ ಸದರಿಯವರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಈ ಕೆಳಕಂಡಂತೆ ಇರುತ್ತದೆ.
ಆರೋಪಿಗಳ ಹೆಸರು ಮತ್ತು ವಿಳಾಸ :
1, ಮೋಹನಕುಮಾರ ಬಿನ್ ಮಂಜೇಗೌಡ, 25 ವರ್ಷ, ಬೇಕರಿ ಕೆಲಸ ಛತ್ರನಹಳ್ಳಿ ಗ್ರಾಮ. ಸಾಲಗಾಮೆ ಹೋಬಳಿ, ಹಾಸನ ತಾಲ್ಲೂಕು.
2, ಮಹೇಶ ಬಿನ್ ಮಂಜೇಗೌಡ, 23 ವರ್ಷ, ಬೇಕರಿ ಕೆಲಸ, ಛತ್ರನಹಳ್ಳಿ ಗ್ರಾಮ, ಸಾಲಗಾಮೆ ಹೋಬಳಿ, ಹಾಸನ ತಾಲ್ಲೂಕು.
3. ಮಂಜುನಾಥ ಬಿನ್ ಗಿಡೇಗೌಡ, 27 ವರ್ಷ, ಗಾರೆಕೆಲಸ ಹಂಚಿಹಳ್ಳಿ ಗ್ರಾಮ, ಕಸಬಾ ಹೋಬಳಿ, ಹಾಸನ ತಾಲ್ಲೂಕು ಎಂದು ತಿಳಿಸಿರುತ್ತಾರೆ.
ಪ್ರಕರಣದ ಹಿನ್ನಲೆ :
ಮೇಲ್ಕಂಡ ಆರೋಪಿಗಳು ಈ ಕೆಳಕಂಡ ದ್ವಿ ಚಕ್ರ ವಾಹನಗಳನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹಾಗೂ ಹಾಸನ ಜಿಲ್ಲೆಯ, ಗೊರೂರು, ಬೇಲೂರು, ಹೊಳೆನರಸೀಪುರ ಗ್ರಾಮಾಂತರ ಮತ್ತು ಆಲೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಈ ಕೆಳಕಂಡ ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. ಸದರಿ ಆರೋಪಿಗಳು ಬೈಕ್‌ಗಳ ನಂಬರ್ ಪ್ಲೇಟ್ ಬದಲಾಯಿಸಿ ಬೇರೆ ಬೇರೆ ನಂಬರ್ ಪ್ಲೇಟ್ ಹಾಕಿಕೊಂಡು ಮಾರಾಟ ಮಾಡುತ್ತಿದ್ದರು ಎಂಬುದಾಗಿ ವಿಚಾರಣೆಯ ವೇಳೆಯಲ್ಲಿ ತಿಳಿಸಿರುತ್ತಾರೆ. 1. KA13 ಇಕೆ 3730 ಹೊಂಡ ಶೈನ್ ಬೈಕ್, ( ಗೊರೂರು )
2. ಕೆಎ 13 ಇಸಿ 1017 ಬಜಾಜ್ ಡಿಸ್ಕೋವರಿ ಬೈಕ್ .(ಕಡೂರು)
3, ನೀಲಿ ಬಣ್ಣದ ಸ್ಪ್ಲೆಂಡರ್ ಬೈಕ್ ನಂಬರ್ ಇರುವುದಿಲ್ಲ.(ಬೇಲೂರು)
4. ಕೆ.ಎ. 13 ಇಕ್ಕೂ 4598 ಬಜಾಜ್ ಡಿಸ್ಕೋವರಿ ಬೈಕ್ ( ಆಲೂರು)
5, ನಂಬರ್ ಇಲ್ಲದ ಇಂಜಿನ್ ನಂಬರ್ DRZCCG502444 , M02ATICZZCCG53253 ಪಲ್ಸರ್ ಬೈಕ್ (ಹೊಳೆನರಸೀಪುರ ಗ್ರಾಮಾಂತರ )
ಮೇಲ್ಕಂಡ ದ್ವಿಚಕ್ರ ವಾಹನಗಳ ಬೆಲೆ ಸುಮಾರು ರೂ. 1.50,000/- ಆಗಿರುತ್ತದೆ. ಆರೋಪಿಗಳ ವಿರುದ್ದ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು, ಹಾಗೂ ಆರೋಪಿಗಳ ಹಿನ್ನೆಲೆ ಮತ್ತು ಇನ್ಯಾವುದಾದರೂ ಪ್ರಕರಣದಲ್ಲಿ ಭಾಗಿಯಾಗಿರುತ್ತಾರೆಯೇ ಎಂಬುದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಬಸವರಾಜು, ಎ.ಎಸ್.ಐ. ರಂಗಪ್ಪ, ಸಿಬ್ಬಂದಿಗಳಾದ ಕಾಂತರಾಜಪ್ಪ, ದೇವರಾಜೇಗೌಡ, ಉಮಾಶಂಕರ, ದಿವಾಕರ, ಶಿವಣ್ಣ, ಸಂತೋಷ, ಶಿವ, ಹರೀಶ್, ಮಹೇಶ ಎಂ.ಸಿ. ಹಾಗೂ ಹಾಸನ ನಗರ ವೃತ್ತದ ಸಿಬ್ಬಂದಿಯವರಾದ ಹೆಚ್.ಸಿ. 121 ಹರೀಶ, ರವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರವರು ಪತ್ತೆ ಕಾರ್ಯವನ್ನು ಮೆಚ್ಚಿ ಶ್ಲಾಘಿಸಿ ವಿಶೇಷ ಬಹುಮಾನ ಘೋಷಿಸಿರುತ್ತಾರೆ.
ಆರೋಪಿಯನ್ನು ಪತ್ತೆ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಗಳ ವಿವರ : ಹಾಸನ ಗ್ರಾಮಾಂತರ ವೃತ್ತದ ಸಿಪಿಐ, ಶ್ರೀ ಸುರೇಶ್, ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ
ಈ ಪ್ರಕಟಣೆಯನ್ನು ಜಿಲ್ಲಾ ಪೊಲೀಸ್ ಕಛೇರಿಯಿಂದ ಹೊರಡಿಸಲಾಗಿದೆ.