ಹಾಸನ : ಹಳೇದ್ವೇಷಕ್ಕೆ ಬೈಕಿನಲ್ಲಿ ಹೋಗುತ್ತಿದ್ದ ಹೆಚ್.ಪಿ. ಭರತ್ ಇತನನ್ನು ಕೊಲೆ ಮಾಡಿ ಕಣ್ಣುತಪ್ಪಿಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ನಗರ ವೃತ್ತ ಪೊಲೀಸರು ಯಶಸ್ವಿ ಕಾರ್ಯಚರಣೆ ನಡೆಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಯಿಂದ ಹೊರಡಿಸಲಾದ ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿ, ಹಾಸನ ನಗರ ವೃತ್ತ ವ್ಯಾಪ್ತಿಯಲ್ಲಿ ಬರುವ ಹಾಸನ ನಗರದ ೩ ನೇ ಕ್ರಾಸ್, ವಲ್ಲಬಾಯಿ ರಸ್ತೆಯ ಹೆಚ್.ಪಿ. ಭರತ್ ರವರನ್ನು ನಗರದ ಹುಣಸಿನಕೆರೆಯ ಹತ್ತಿರ ೮೦ ಅಡಿ ರಸ್ತೆಯಲ್ಲಿ ಹಳೇದ್ವೇಷವನ್ನಿಟ್ಟುಕೊಂಡು ಕೋಕಿ ರೋಹಿತ್ ಹಾಗೂ ಇತರರು ಸೇರಿಸಿಕೊಂಡು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಇವರ ಮೇಲೆ ಮೇಲೆ ಹಾಸನದ ಪೆನ್ ಷನ್ ಮೊಹಲ್ಲಾ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಸಿದ್ದರು.
ಪೊಲೀಸ್ ತಂಡವನ್ನು ರಚಿಸಲಾಗಿ, ಮಾಹಿತಿಯನ್ನು ಸಂಗ್ರಹಿಸಿ ನಗರದ ಹಾಸನ ರೈಲ್ವೆ ನಿಲ್ದಾಣದ ಹತ್ತಿರ ಸಂಜೆ ೦೪-೩೦ ಗಂಟೆಗೆ ವಶಕ್ಕೆ ಪಡೆದು ಆರೋಪಿಗಳಾದ ಗುಂಡಿಯಲ್ಲಿ ಸ್ನೇಹ ಗ್ಲಾಸ್ ಅಂಗಡಿಯಲ್ಲಿ ಗ್ಲಾಸ್ ಕಟಿಂಗ್ ಕೆಲಸ, ವಲ್ಲಬಾಯಿ ರಸ್ತೆ, ೩ ನೇ ಕ್ರಾಸ್, ರಾಮಮಂದಿರದ ಹತ್ತಿರ ವಾಸವಿರುವ ಕೋಕಿ ರೋಹಿತ್ ೨೮ ವರ್ಷ, ಆರ್.ಎಂ.ಸಿ. ಯಾರ್ಡ್ ನಲ್ಲಿ ವಿ.ಮೇಕ್ ಇಂಡಸ್ಟ್ರಿಯಲ್ಲಿ ವೆಲ್ಡಿಂಗ್ ಕೆಲಸ, ವಲ್ಲಬಾಯಿ ರಸ್ತೆ , ೩ ನೇ ಕ್ರಾಸ್ ನಲ್ಲಿ ವಾಸವಿರುವ ವಾಸು ವಸಂತ ೨೭ ವರ್ಷ, ಬೆಸ್ತರ ಜನಾಂಗ, ಹೂವಿನ ವ್ಯಾಪಾರ, ವಲ್ಲಬಾಯಿ ರಸ್ತೆ, ೫ ನೇ ಕ್ರಾಸ್ ನಲ್ಲಿ ವಾಸವಾಗಿರುವ ಮಣಿ ಹೆಚ್.ಪಿ. ಮಣಿಕಂಠ ೨೦ ವರ್ಷ, ಹಾಗೂ ಮರಾಠಿ ಜನಾಂಗ, ಟೈಲರ್ ಕೆಲಸ, ಹಾಸನಾಂಭ ದೇವಸ್ಥಾನದ ಹಿಂಭಾಗ, ಹುಣಸಿನಕೆರೆ ರಸ್ತೆ, ಬನಶಂಕರಿ ಕ್ಯಾಟೀನ್ ಹತ್ತಿರ ವಾಸವಾಗಿರುವ ಜಯಂತ ಕ್ಯಾಟ್ ಇವರುಗಳನ್ನು ವಿಚಾರಣೆ ಮಾಡಿದಾಗ ಈ ನಾಲ್ವರು ಆರೋಪಿಗಳು ಮೃತನಾದ ಹೆಚ್.ಪಿ. ಭರತ್ ರವರ ಸ್ನೇಹಿತರಾಗಿದ್ದು, ಹಳೇ ದ್ವೇಷದಿಂದ ಕೊಲೆ ಮಾಡಿ ಸಾಯಿಸುವ ಉದ್ದೇಶದಿಂದ ೨ ಆಕ್ಟಿವಾ ಹೋಂಡಾ ಬೈಕುಗಳಲ್ಲಿ ನಾವು ಬಂದು ಮತ್ತೊಂದು ಆಕ್ಟಿವಾ ಬೈಕಿನಲ್ಲಿ ಬರುತ್ತಿದ್ದ ಭರತ್ ರವರನ್ನು ಅಡ್ಡ ಗಟ್ಟಿ ತಡೆದು ಮಚ್ಚುಗಳಿಂದ ತಲೆಗೆ ಕೊಚ್ಚಿ ಚಾಕುವಿನಿಂದ ಹೊಟ್ಟೆಗೆ ತಿವಿದು ಕೊಚ್ಚಿ ಕೊಲೆ ಮಾಡಿರುವುದಾಗಿ ತಪ್ಪನ್ನು ಒಪ್ಪಿಕೊಂಡಿರುವುದಾಗಿ ಹೇಳಿದರು.
ಇನ್ನಿಬ್ಬರು ಆರೋಪಿಗಳಾದ ಪಾನಿಪುರಿ ವ್ಯಾಪಾರ, ಬೀರನಹಳ್ಳಿಕೆರೆಯಲ್ಲಿ ವಾಸವಾಗಿರುವ, ಸ್ವಂತ ಊರು ಬನವಾಸೆ ಗ್ರಾಮ, ತಾಲೂಕಿನ ಶಾಂತಿಗ್ರಾಮದ ಶರತ್ ಶಾರು ೨೬ ವರ್ಷ ಮತ್ತು ಭಾರತ್ ಗ್ಯಾಸ್ ಸಪ್ಲೇಯರ್ ಕೆಲಸ, ಅಂಬೇಡ್ಕರ್ ನಗರ, ೨ ನೇ ಕ್ರಾಸ್ ನಲ್ಲಿ ವಾಸವಾಗಿರುವ ಕೆ.ವೈ. ಸುದೀಪ ೨೦ ವರ್ಷ ತಲೆ ಮರೆಸಿಕೊಂಡಿದ್ದಾರೆ ಎಂದರು.
ಅಪರ ಪೊಲೀಸ್ ಅಧೀಕ್ಷಕರಾದ ಬಿ.ಎನ್. ನಂದಿನಿ ಮಾಗದರ್ಶನದಲ್ಲಿ, ಹಾಸನ ಉಪ ವಿಭಾಗದ ಡಿ.ವೈ.ಎಸ್.ಪಿ. ರವರಾದ ಪುಟ್ಟಸ್ವಾಮಿಗೌಡ.ಟಿ.ಆರ್ ರವರ ನೇತೃತ್ವದಲ್ಲಿ ರೇಣುಕಪ್ರಸಾದ್.ಎಸ್, ಸಿ.ಪಿ.ಐ, ಹಾಸನ ನಗರ ವೃತ್ತ , ಪೆನ್ ಷನ್ ಮೊಹಲ್ಲಾ ಠಾಣೆಯ ಪಿ.ಎಸ್.ಐ ರಾಜನಾಯಕ್, ಮತ್ತು ಸಿಬ್ಬಂದಿಗಳಾದ ಹರೀಶ್ , ಹೆಚ್.ಸಿ -೧೨೧ , ಪಿ.ಸಿ -೬೩೫ ಸೋಮಶೇಖರ , ಹಾಸನ ನಗರ ಪೊಲೀಸ್ ಠಾಣೆಯ ಪಿ.ಸಿ ೧೭೭ ದಿಲೀಪ , ಜೀಪ್ ಚಾಲಕರಾದ ಎ.ಹೆಚ್.ಸಿ -೭೨ , ಭರತ್.ಜಿ ರವರನ್ನೊಳಗಂಡ ತಂಡದ ಯಶಸ್ವಿಗೆ ಇದೆ ವೇಳೆ ಶ್ಲಾಘನೆವ್ಯಕ್ತಪಡಿಸಿದರು.