ಬಾಡೂಟದ ಜಗಳವಂತೆ : ಕೊಲೆಯಲ್ಲಿ ಅಂತ್ಯವಾಗಿದ್ದು ಯಾವ ಪುರುಷಾರ್ಥಕ್ಕೆ

0

ಹಾಸನ / ಅರಸೀಕೆರೆ : ಗ್ರಾಮದೇವರ ಪೂಜೆ ತದನಂತರ ಮಾಂಸದೂಟಕ್ಕೆ ಕರೆಯಲಿಲ್ಲ ಎಂಬ ಸಣ್ಣ ಕಾರಣಕ್ಕೆ  ಹುಡುಗರ ನಡುವೆ ಶುರುವಾದ ಜಗಳ ಒರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಕ್ಷುಲ್ಲಕ ಘಟನೆ ಜೀವ ತೆಗೆಯುವ ಮಟ್ಟಿಗೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಪುರ್ಲೇಹಳ್ಳಿಯಲ್ಲಿ ನಡೆದೋಗಿದ್ದು ವಿಪರ್ಯಾಸ. ಜಗಳದಲ್ಲಿ ಗಂಭೀರ ಗಾಯಗೊಂಡಿದ್ದ ಶರತ್ (28) ಫೊಟೋದಲ್ಲಿರುವ ಮೃತ ಯುವಕ.

ಆಗಿದ್ದೇನು??: ಮೊನ್ನೆ ಭಾನುವಾರ ಚಿಕ್ಕಮಗಳೂರು ಜಿಲ್ಲೆ ಸಖರಾಯಪಟ್ಟಣದ ಚೌಡೇಶ್ವರಿ ದೇಗುಲದಲ್ಲಿ ಗಿರೀಶ್, ಶರತ್ ಹಾಗೂ ಅವರ ಮನೆಯವರು ಪೂಜೆ ಇಟ್ಟು ಕೊಂಡಿದ್ದರಂತೆ. ಈ ವೇಳೆ ಬಾಡೂಟ ಮಾಡಿಸಲಾಗಿತ್ತು. ಇದಕ್ಕೆ ನಮ್ಮನ್ನು ಕರೆಯಲಿಲ್ಲ ಎಂಬ ಕಾರಣಕ್ಕೆ ಕ್ಯಾತೆ ತೆಗೆದಿದ್ದರಂತೆ. ಆಗ ಗ್ರಾಮಸ್ಥರೆಲ್ಲರೂ ಸೇರಿ ಜಗಳ ಬಿಡಿಸಿ ಬುದ್ಧಿವಾದ ಹೇಳಿ ಕಳಿಸಿದ್ದರು ಕೂಡ.

ಒಳಮನಸ್ಸಿಗೆ ತೆಗೆದುಕೊಂಡ ಸಂಬಂಧಿಕರೂ ಆಗಿರುವ ಗ್ರಾಮದ ನಟರಾಜನಾಯ್ಕ, ಮಂಜ ನಾಯ್ಕ, ಧನಂಜಯ್ ನಾಯ್ಕ, ಸರೋಜಾಬಾಯಿ ಹಾಗೂ ಜ್ಯೋತಿ ಎಂಬುವರು ಸೇರಿ ಜ.16ರ ರಾತ್ರಿ 10.30 ರ ಸುಮಾರಿಗೆ ಮತ್ತೆ ಜಗಳ ತೆಗೆದಿದ್ದಾರೆ. ಇದು ನೋಡ ನೋಡುತ್ತಿದ್ದಂತೆ ವಿಕೋಪಕ್ಕೆ ಹೋಗಿ ಎಲ್ಲರೂ ಸೇರಿ ದೊಣ್ಣೆಯಿಂದ ತಲೆಗೆ ಹೊಡೆದಿದ್ದಾರೆ. ಜಗಳ ಬಿಡಿಸಲು ಹೋದ ರಾಕೇಶ್, ಯೋಗೇಶ್ ಎಂಬುವರ ಮೇಲೂ ಕೈ ಮಾಡಿದ್ದಾರೆ ಎನ್ನಲಾಗಿದ್ದು.

ಗಂಭೀರ ಗಾಯಗೊಂಡ ಶರತ್ ನನ್ನು ಕೂಡಲೇ ಜೆಸಿ ಆಸ್ಪತ್ರೆಗೆ ದಾಖಲು ಮಾಡ ಲಾಯಿತಾದರೂ.,  ನಂತರ ವೈದ್ಯರ ಸಲಹೆ ಮೇರೆಗೆ ಹಾಸನ ಸರ್ಕಾರಿ ಆಸ್ಪತ್ರೆ ಅಲ್ಲಿಂದ ಬೆಂಗಳೂರಿನ ನಿಮ್ಹಾನ್ಸ್ ಗೆ ಹೆಚ್ಚಿಜ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.

ಅದಾಗಲೇ ಪರಿಸ್ಥಿತಿ ಕೈ ಮೀರಿ ಹೋಗಿದೆ ಎಂದು ನಿಮ್ಹಾನ್ ವೈದ್ಯರು ತಿಳಿಸಿದ್ದರಿಂದ ವಾಪಸ್ ಕರೆದುಕೊ೦ಡು ಬರುವಾಗ ಬೆಂಗಳೂರಿನ ನೆಲಮಂಗಲದ ಟೋಲ್ ಬಳಿ ನಿನ್ನೆ ಆಂಬ್ಯುಲೆನ್ಸ್ ನಲ್ಲಿಯೇ ಶರತ್ ಮೃತಪಟ್ಟಿರುತ್ತಾನೆ.

ಘಟನೆ ನಂತರ ಆರೋಪಿಗಳು ಮರೆಸಿಕೊಂಡಿದ್ದು, ಬಾಣಾವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

crimedairyhassan arsikere

LEAVE A REPLY

Please enter your comment!
Please enter your name here