ಹಾಸನ : ಎತ್ತಿನಹೊಳೆ ಯೋಜನೆ ಕಾಮಗಾರಿ ಪರಿಶೀಲನೆಗೆ ಆ 22 ಮಂಗಳವಾರ ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ.
ಬೆಳಗ್ಗೆ 10.30ಕ್ಕೆ ನಗರ ಹೊರವಲಯದ ಬೂವನಹಳ್ಳಿ ಹೆಲಿಪ್ಯಾಡ್‌ಗೆ ಆಗಮಿಸುವ ಅವರು, ಅಲ್ಲಿಂದ 11 ಗಂಟೆಗೆ ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿ, ಬಾಳುಪೇಟೆ, ಬಾಗೆ, ಗುಳಗಳಲೆ ಮಾರ್ಗವಾಗಿ ಸಂಚರಿಸಿ ಎತ್ತಿಹೊಳೆ ಯೋಜನೆ ಎಲೆಕ್ಟಿçಕ್ ಸಬ್‌ಸ್ಟೇಷನ್ ಪರಿಶೀಲನೆ ನಡೆಸಲಿದ್ದಾರೆ. ನಂತರ ಮಧ್ಯಾಹ್ನ 2.45ಕ್ಕೆ ದೊಡ್ಡನಗರ, ಉದೇವಾರ, ಬೈಕೆರೆ, ಜನ್ನಾಪುರ, 3.15ಕ್ಕೆ ಕಾಡುಮನೆ ಎಸ್ಟೇಟ್ ಕಾಮಗಾರಿ ಪರಿಶೀಲನೆ ನಡೆಸಲಿದ್ದಾರೆ.