2 ಸಾವಿರದ ಪ್ಯಾಕೇಟ್‌ಗೆ 5-10 ಸಾವಿರ ರೂಪಾಯಿ ಕೊಡಬೇಕಂತೆ

0

ಜೈಲಲ್ಲಿ ಕೂತು ವಿಡಿಯೋ ಅಪ್ಲೋಡ್ ಮಾಡಿದ ವಿಚಾರಣಧೀನದಲ್ಲಿದ್ದ ಖೈದಿ ವಿಡಿಯೋ ವೈರಲ್ ಆಗ್ತಿದ್ದಂತೆ ಮೇಲ್ವರ್ಗದ ಪೊಲೀಸ್ ಅಲರ್ಟ್ , ಹಾಸನ ಜಿಲ್ಲಾ ಕಾರಾಗೃಹ ದಾಳಿ ಮಾಡಿ 118 ಮೊಬೈಲ್, ಗಾಂಜಾ, ಬೀಡಿ, ಸಿಗರೇಟ್ ವಶ

ಹಾಸನ ಜೈಲಿಗೆ ಪೊಲೀಸರ ದಾಳಿ ಪ್ರಕರಣ : ಪೊಲೀಸರ ದಾಳಿ ಬೆನ್ನಲ್ಲೇ ಜೈಲಿನೊಳಗಿನ ಕರ್ಮಕಾಂಡದ ವೀಡಿಯೋ ವೈರಲ್ ಆಗಿದೆ. ಜೈಲಿನೊಳಗೆ ಗಾಂಜಾ, ಚರಸ್ ಭರ್ಜರಿ ಮಾರಾಟದ ಬಗ್ಗೆ ಕೈದಿಗಳು ಮಾಹಿತಿ ನೀಡಿದ್ದಾರೆ. ವಿಚಾರಣಾದೀನ ಖೈದಿಗಳು ಜೈಲಿನ ಸೆಲ್ ಒಳಗಿಂದಲೆ ವೀಡಿಯೋ ಮಾಡಿ ಕುಟುಂಬ ಸದಸ್ಯರಿಗೆ ಕಳಿಸಿದ್ದಾರೆ.

ಕಡಿಮೆ ಹಣಕ್ಕೆ ಗಾಂಜಾ ತರಿಸಿ ದುಬಾರಿ ಬೆಲೆಗೆ ಜೈಲೊಳಗೆ ಗಾಂಜಾ ಮಾರಾಟ ಆರೋಪ, ಎರಡು ಸಾವಿರಕ್ಕೆ ಒಂದು ಪಾಕೇಟ್ ಗಾಂಜಾ ತರಿಸಿ ಅದನ್ನ ಐದರಿಂದ ಹತ್ತು ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು ಜೈಲು ಸಿಬ್ಬಂದಿ ಹಾಗು ಅಧಿಕಾರಿಗಳ ವಿರುದ್ದ ವಿಚಾರಣಾದೀನ ಖೈದಿಗಳ ಗಂಭೀರ ಆರೋಪ ಮಾಡಿದ್ದಾರೆ.

ಗಾಂಜಾ, ಚರಸ್, ಸೇರಿ ಮಾದಕ ವಸ್ತುಗಳು ಜೈಲೊಳಗೇ ಸಿಗುತ್ತೆ, ಮಾದಕ ವಸ್ತುಗಳನ್ನು ಜೈಲು ಸಿಬ್ಬಂದಿಯೇ ಮಾರಾಟ ಮಾಡ್ತಾರೆ. ವಿಚಾರಣಾದೀನ ಖೈದಿ ಜೈಲೊಳಗೆ ಸ್ಮಾರ್ಟ್ ಫೋನ್ ಹಿಡಿದು ವೀಡಿಯೋ ಮಾಡಿದ್ದಾರೆ. ಆಗಸ್ಟ್ 18 ರ ರಾತ್ರಿ ದಿಢೀರ್ ದಾಳಿ ಮಾಡಿ 7.ಸ್ಮಾರ್ಟ್ ಫೋನ್ ಸೇರಿ 18 ಫೋನ್ ವಶಕ್ಕೆ ಪಡೆದಿದ್ದ ಪೊಲೀಸರು, ಪೊಲೀಸರ ದಾಳಿ ಬೆನ್ನಲ್ಲೇ ಜೈಲಿನೊಳಗಿನ ಕರ್ಮ ಕಾಂಡದ ವೀಡಿಯೋ ವೈರಲ್ ಆಗಿದೆ. ಕಾರಾಗೃಹ ಇಲಾಖೆ ಅಧಿಕಾರಿಗಳು ಶಾಮೀಲಾಗಿ ಮಾದಕ ವಸ್ತು ಮಾರಟ ಮಾಡುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ.

ಸರಬರಾಜು ಆಗಿರುವ ಹಾಗೂ ಇದಕ್ಕೆ ಕೈದಿಗಳು ಹಣ ಪಾವತಿ ಮಾಡಿರುವ ಬಗ್ಗೆ ಮಾಹಿತಿಯನ್ನು ಒಳಗೊಂಡ ವಿಡಿಯೋ ಈಗಾಗಲೇ ಸಾರ್ವಜನಿಕರ ಮೊಬೈಲ್ ನಲ್ಲಿ ಹರಿದಾಡುತ್ತಿದ್ದು ಈ ಬಗ್ಗೆ ತನಿಖೆಯ ನಂತರ ಸೂಕ್ತ ಮಾಹಿತಿ ದೊರೆಯಲಿದೆ ಎಂದು ಎಸ್.ಪಿ. ಹೇಳಿದರು. ,ಅಪರಾಧ ಪ್ರಕರಣಕ್ಕೆ ಜೈಲ್ ಲಿಂಕ್

ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿರುವ ಅಪರದ ಪ್ರಕರಣಗಳಿಗೆ ಜೈಲಿನಲ್ಲಿ ಇದ್ದುಕೊಂಡು ಇತರೆ ಕೈದಿಗಳು ಪೂನ್ ಮೂಲಕ ಸಲಹೆ ಸೂಚನೆ ನೀಡಿದ್ದಾರೆಯೇ ಎಂಬ ಬಗ್ಗೆ ತನಿಖೆ ಕೈಗೊಳ್ಳಲಾಗುತ್ತಿದೆ. ಜಿಲ್ಲಾ ಕಾರಗೃಹದಲ್ಲಿ ಇದ್ದುಕೊಂಡು ಹತ್ಯೆ ಸೇರಿದಂತೆ ಇತರೆ ಪ್ರಕರಣಗಳನ್ನು ಮಾಡಿದ್ದಾರೆಯೇ ಎಂಬ ಬಗ್ಗೆಯೂ ಸಮಗ್ರ ತನಿಖೆ ನಡೆಸಲಾಗುವುದು ಎಂದು ಎಸ್ ಪಿ ಹೇಳಿದರು. ಉದ್ಯಮಿ ಕೃಷ್ಣಗೌಡ ಹತ್ಯೆ ಪ್ರಕರಣ ಸಂಬಂಧ ತನಿಖೆ ಚುರುಕುಗೊಂಡಿದ್ದು – ಇನ್ನೆರಡು ಮೂರು ದಿನದಲ್ಲಿ ಅಗತ್ಯ ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ಎಸ್ಪಿ ಇದೇ ವೇಳೆ ತಿಳಿಸಿದರು. , , ಮೊಬೈಲ್: ಸೈಬರ್‌ ತಂಡ ಪರಿಶೀಲನೆ

ಈಗ ಜೈಲಿನಲ್ಲಿ ದೊರೆತಿರುವ ಮೊಬೈಲ್‌ಗಳಲ್ಲಿನ ಬಂದಿರುವ ಹಾಗೂ ಹೋಗಿರುವ ಕರೆಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು ಸೈಬರ್ ಕ್ರೈಂ ಅನಾಲಿಸಿಸ್ ನಲ್ಲಿ ಈ ಎಲ್ಲಾ ಮಾಹಿತಿಯನ್ನು ಪಡೆಯಲಾಗುವುದು ಎಂದು ಹೇಳಿದರು.

ಇಲ್ಲಿನ ಕಾರಾಗೃಹದಲ್ಲಿ 18 ಮೊಬೈಲ್ ಗಳು ಸಿಕ್ಕಿರುವುದರಿಂದ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದು ಇದರಲ್ಲಿ ಜೈಲು ಸಿಬ್ಬಂದಿಗಳು ಶಾಮೀಲಾಗಿರುವ ಶಂಕೆ ಇದ್ದು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸಮಗ್ರ ವರದಿಯನ್ನು ಡಿಜಿ ಅವರಿಗೆ ಸಲ್ಲಿಸಲಾಗುತ್ತಿದೆ ನಂತರ ನಿಖರ ಮಾಹಿತಿ ತಿಳಿಯಲಿದೆ ಎಂದು ಎಸ್ ಪಿ ಹೇಳಿದರು.

ಕಳೆದ ಜನವರಿ 19ರಂದು ಜಿಲ್ಲಾ ಕಾರಾಗೃಹ ಕ್ಕೆ ದಾಳಿ ಮಾಡಲಾಗಿ ಕೇವಲ ಒಂದು ಮೊಬೈಲ್ ಹಾಗೂ ಇತರೆ ವಸ್ತುಗಳು ದೊರೆತಿದ್ದವು ಆದರೆ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮೊಬೈಲ್ ಹಾಗೂ ವಸ್ತುಗಳು ದೊರೆತಿರುವುದರ ಹಿಂದೆ ಹಲವು ಅನುಮಾನಗಳಿದ್ದು 360 ಮಂದಿ ಕೈದಿ ಗಳಿರುವ ಜೈಲಿನಲ್ಲಿ 18 ಮೊಬೈಲ್ ದೊರತಿರುವುದು ಗಂಭೀರವಾದ ವಿಚಾರವಾಗಿದೆ.

ಈ ಬಗ್ಗೆ ಜೈಲಿನ ಅಧಿಕಾರಿಗಳಿಗೆ ತಿಳಿಯದೆ ಇರದು ಇದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಎಂದು ಎಸ್ಪಿ ಹೇಳಿದರು. ಕೆಲ ಕೈದಿಗಳು ಜೈಲಿನಲ್ಲಿ ಇದ್ದುಕೊಂಡು ಸಾಮಾಜಿಕ ಜಾಲತಾಣಗಳಿಗೆ ರೀಲ್ಸ್ ಮಾಡಿ ಪೋಸ್ಟನ್ನು ಹಾಕುತ್ತಿದ್ದರು ಹಾಗೂ ರಾತ್ರಿ ವೇಳೆ ಆನ್ ನಲ್ಲಿ ಬರುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಲಾಗಿದೆ.

LEAVE A REPLY

Please enter your comment!
Please enter your name here